Lalbagh Flower Show2024: ಲಾಲ್‌ ಬಾಗ್‌ನಲ್ಲಿ ಫಲಪುಷ್ಪಪ್ರದರ್ಶನಕ್ಕೆ ಸಿದ್ದತೆ ಹೇಗಿದೆ, ಈ ಬಾರಿ ವಿಶೇಷ ಏನು photos-bangalore news all set for lalbagh flower show2024 in bangalore for independence day celebration what is this time theme ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lalbagh Flower Show2024: ಲಾಲ್‌ ಬಾಗ್‌ನಲ್ಲಿ ಫಲಪುಷ್ಪಪ್ರದರ್ಶನಕ್ಕೆ ಸಿದ್ದತೆ ಹೇಗಿದೆ, ಈ ಬಾರಿ ವಿಶೇಷ ಏನು Photos

Lalbagh Flower Show2024: ಲಾಲ್‌ ಬಾಗ್‌ನಲ್ಲಿ ಫಲಪುಷ್ಪಪ್ರದರ್ಶನಕ್ಕೆ ಸಿದ್ದತೆ ಹೇಗಿದೆ, ಈ ಬಾರಿ ವಿಶೇಷ ಏನು photos

  • Bangalore News ಸ್ವಾತಂತ್ರ್ಯ ದಿನಾಚರಣೆ ಫಲಪುಷ್ಪ ಪ್ರದರ್ಶನಕ್ಕೆ ಲಾಲ್ ಬಾಗ್ ಸಜ್ಜಾಗಿದೆ. ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಪರಿಕಲ್ಪನೆಯಡಿ ಫಲಪುಷ್ಪ ಪ್ರದರ್ಶನ ಆಗಸ್ಟ್‌ 8ರಿಂದ ಆರಂಭವಾಗಲಿದೆ. ಇಲ್ಲಿದೆ ವಿವರ.

 ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್ ಬಾಗ್ ನಲ್ಲಿ ಈ ವರ್ಷ ವಿಶ್ವ ಜ್ಞಾನಿ, ಸಂವಿಧಾನ ಶಿಲ್ಪಿ ಭಾರತ ರತ್ನ  ಡಾ. ಬಿ. ಆರ್. ಅಂಬೇಡ್ಕರ್ ಅವರ ಪರಿಕಲ್ಪನೆಯಡಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. 
icon

(1 / 6)

ಇಡೀ ಪ್ರದರ್ಶನಕ್ಕೆ ಏಕ ಕಾಲಕ್ಕೆ 7-8 ಲಕ್ಷ ವೈವಿಧ್ಯಮಯ ಹೂಗಳನ್ನು ಬಳಕೆ ಮಾಡಲಾಗುತ್ತಿದೆ. ಅಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್ ಬೆರಾ, ಸೇವಂತಿಗೆ, ದ್ರಸಿನಾ, ಜನಾಡೋ ಹೂಗಳು ಮನ ಸೆಳೆಯಲಿವೆ.ಇದು 214ನೇ ಫಲಪುಷ್ಪ ಪ್ರದರ್ಶನವಾಗಿದ್ದು ಹಲವು ವಿಶೇಷತೆಗಳನ್ನು ಒಳಗೊಂಡಿರುತ್ತದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ತಿಳಿಸಿದ್ದಾರೆ. 
icon

(2 / 6)

ಈ ಬಾರಿ ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂಗಳನ್ನು ತರಿಸಲಾಗಿದೆ.   ಜೊತೆಗೆ ಆಕರ್ಷಕ ಬೋನ್ಸಾಯ್, ಇಕಾಬೇನಾ ಪ್ರದರ್ಶನವಿರುತ್ತದೆ. ಗಾಜಿನ ಮನೆಯ ಹೊರ ಭಾಗದಲ್ಲೂ ಹೂವಿನ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಬ್ಯಾಂಡ್ ಸ್ಟ್ಯಾಂಡ್, ರಾಕ್ ಗಾರ್ಡನ್  ಸೆಲ್ಫಿ ಪಾಯಿಂಟ್ ಇದ್ದೇ ಇರುತ್ತದೆ. ಮೊದಲ ಆರು ದಿನಗಳ ನಂತರ ಹೂಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ. 
icon

(3 / 6)

ಸಂಸತ್ ಭವನದ ಎದುರು 12 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣವಾಗುತ್ತಿದೆ.  ಗಾಜಿನ ಮನೆಯ ಬಲತುದಿಯಲ್ಲಿ ಮಧ್ಯ ಪ್ರದೇಶದಲ್ಲಿರುವ ಮಹೌನ್ ನಲ್ಲಿರುವ ಅಂಬೇಡ್ಕರ್ ಅವರ ಜನ್ಮಭೂಮಿ ಸ್ಮಾರಕ ನಿರ್ಮಾಣವಾಗುತ್ತಿದೆ. ಇದರಲ್ಲಿ ಅಂಬೇಡ್ಕರ್ ಅವರ ಕುಳಿತಿರುವ ಭಂಗಿಯ ಪ್ರತಿಮೆಯನ್ನು ಅಳವಡಿಸಲಾಗುತ್ತಿದೆ.ಇದಕ್ಕಾಗಿ ಒಂದು ಬಾರಿಗೆ 1.7 ಲಕ್ಷ ವಿವಿಧ ಮಾದರಿಯ ಹೂಗಳನ್ನು ಬಳಕೆ ಮಾಡಲಾಗುತ್ತಿದೆ.
icon

(4 / 6)

ಗಾಜಿನ ಮನೆಯಲ್ಲಿ ದೆಹಲಿಯಲ್ಲಿರುವ ಸಂಸತ್ ಭವನದ ಮಾದರಿಯನ್ನು ಪುಷ್ಪಗಳಿಂದ ಅಲಂಕರಿಸಲಾಗುತ್ತಿದೆ. ಸಂಸತ್ ಭವನದ ಮಧ್ಯದಲ್ಲಿರುವ ಗೋಪುರದ ಮೇಲೆ ದೇಶದ ರಾಷ್ಟ್ರೀಯ ಲಾಂಛನದ ಮಾದರಿಯೂ ಇರಲಿದೆ.  ಸಂಸತ್ ಭವನದ ಪುಷ್ಪದ ಪ್ರತಿರೂಪಕ್ಕೆ 1.8 ಲಕ್ಷ  ಪಿಂಕ್ ಮತ್ತು ಕಿತ್ತಳೆ ಬಣ್ಣದ ಗುಲಾಬಿ ಹೂಗಳು, ಬಿಳಿ, ಪಿಂಕ್ ಮತ್ತು ಹಳದಿ ವರ್ಣಗಳ 1.2 ಲಕ್ಷ ಸೇವಂತಿಗೆ ಹೂಗಳನ್ನು ಬಳಸಲಾಗುತ್ತಿದೆ. 
icon

(5 / 6)

ಈ ಬಾರಿ ಸುಮಾರು 10 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು  ನಿರೀಕ್ಷಿಸಲಾಗಿದೆ. ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು ಬರುವ ನಿರೀಕ್ಷೆ ಇದೆ.ಪಾರ್ಕಿಂಗ್ ವ್ಯವಸ್ಥೆ ಹಾಗೂ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶಾಲೆಯ ಗುರುತಿನ ಚೀಟಿ ತೋರಿಸಿದರೆ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಯಸ್ಕರಿಗೆ ರೂ.80 ಪ್ರವೇಶ ಶುಲ್ಕ ನಿಗದಿಯಾಗಿದೆ.  ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
icon

(6 / 6)

ಇತರ ಗ್ಯಾಲರಿಗಳು