Arun Yogiraj: ಶಿಲ್ಪಿ ಅರುಣ್ ಯೋಗಿರಾಜ್ ಅಯೋಧ್ಯೆ ರಾಮ ಮೂರ್ತಿ ಕಣ್ಣು ಅರಳಿಸಲು ಬಳಸಿದ್ದು ಚಿನ್ನದ ಉಳಿ ಬೆಳ್ಳಿ ಸುತ್ತಿಗೆ !
- Ayodhya Ram ಅಯೋಧ್ಯೆ ರಾಮಮಂದಿರದಲ್ಲಿ ರಾಮನಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಆ ರಾಮನಮೂರ್ತಿಯನ್ನು ತಯಾರಿಸಿದ್ದು ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್. ಮೂರ್ತಿ ತಯಾರಿಸಿ ಹಸ್ತಾಂತರಿಸಿದ ನಂತರ ರಾಮನ ಕಣ್ಣುಗಳನ್ನು ರೂಪಿಸಿದ್ದು ಚಿನ್ನದ ಉಳಿ ಹಾಗೂ ಬೆಳ್ಳಿ ಸುತ್ತಿಗೆಯಲ್ಲಿ. ಇದನ್ನು ಖುದ್ದು ಅರುಣ್ ಅವರೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
- Ayodhya Ram ಅಯೋಧ್ಯೆ ರಾಮಮಂದಿರದಲ್ಲಿ ರಾಮನಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಆ ರಾಮನಮೂರ್ತಿಯನ್ನು ತಯಾರಿಸಿದ್ದು ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್. ಮೂರ್ತಿ ತಯಾರಿಸಿ ಹಸ್ತಾಂತರಿಸಿದ ನಂತರ ರಾಮನ ಕಣ್ಣುಗಳನ್ನು ರೂಪಿಸಿದ್ದು ಚಿನ್ನದ ಉಳಿ ಹಾಗೂ ಬೆಳ್ಳಿ ಸುತ್ತಿಗೆಯಲ್ಲಿ. ಇದನ್ನು ಖುದ್ದು ಅರುಣ್ ಅವರೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
(1 / 8)
ಯಾವುದೇ ಮೂರ್ತಿಗೆ ಅದರ ಕಣ್ಣುಗಳೇ ಶ್ರೇಷ್ಠ. ಕಣ್ಣಿನ ದೃಷ್ಟಿ ಮೇಲೆಯೇ ಇಡೀ ಮೂರ್ತಿಗೆ ಕಳೆ. ಅದೇ ರೀತಿ ಕಳೆದ ತಿಂಗಳು ವಿಶ್ವದಾದ್ಯಂತ ಸುದ್ದಿ ಮಾಡಿದ ಅಯೋಧ್ಯೆ ರಾಮಮೂರ್ತಿಗೆ ಕಣ್ಣುಗಳನ್ನು( ನೇತ್ರೋನ್ಮಿಮನ) ರೂಪಿಸಿದ್ದು ಚಿನ್ನದ ಉಳಿ ಹಾಗೂ ಬೆಳ್ಳಿ ಸುತ್ತಿಗೆಯಿಂದ. ಇದರಿಂದಲೇ ಮೂರ್ತಿಯ ಕಣ್ಣುಗಳು ಚೆನ್ನಾಗಿ ಒಡಮೂಡಿವೆ ಎಂದು ಸ್ವತಃ ಅರುಣ್ ಯೋಗಿರಾಜ್ ಹೇಳಿದ್ದಾರೆ.
(2 / 8)
ಅಯೋಧ್ಯೆ ರಾಮಮಂದಿರಕ್ಕೆ ರೂಪಿಸಿದ ಬಾಲರಾಮನ ಮೂರ್ತಿಯನ್ನು ಮೊದಲು ಅಣಿಗೊಳಿಸಲಾಯಿತು. ರಾಮಸೇವಾ ಟ್ರಸ್ಟ್ ಅರುಣ್ ರೋಗಿರಾಜ್ ಅವರು ರೂಪಿಸಿದ ಮೂರ್ತಿ ಅಂತಿಮಗೊಳಿಸಿದ ನಂತರ ಅದಕ್ಕೆ ಕಣ್ಣುಗಳ ರೂಪ ನೀಡಲಾಯಿತು.
(3 / 8)
ಮೈಸೂರಿನ ಅರುಣ್ ಯೋಗಿರಾಜ್ ಅವರು ಆರೇಳು ತಿಂಗಳಿನಿಂದಲೇ ರೂಪಿಸಲು ಆರಂಭಿಸಿದ್ದ ಅಯೋಧ್ಯೆ ರಾಮಮಂದಿರದ ವಿಗ್ರಹದ ರೂಪ. ಇದು ಕಣ್ಣು ನೀಡಲು ಮುಂಚೆಯದ್ದು.
(4 / 8)
ಅರುಣ್ ಯೋಗಿರಾಜ್ ಅವರು ಶಿಲ್ಪ ಕಲೆಯಲ್ಲಿ ಸಿದ್ದಹಸ್ತರು. ಈ ಬಾರಿ ಅವರು ಅಯೋಧ್ಯೆ ರಾಮಮಂದಿರಕ್ಕೆ ರೂಪಿಸಿದ ಬಾಲರಾಮನಮೂರ್ತಿ ಇಡೀ ಜಗತ್ತಿನ ಗಮನ ಸೆಳೆದಿದೆ. ಅದರ ಕಣ್ಣುಗಳನ್ನು ರೂಪಿಸಲು ಬಳಸಿದ ಚಿನ್ನ ಹಾಗೂ ಬೆಳ್ಳಿ ಉಪಕರಣಗಳ ಮಾಹಿತಿ ಕೂಡ ಆಸಕ್ತಿದಾಯಕವೇ ಆಗಿದೆ.
(5 / 8)
ಇಡೀ ದೇಶವೇ ಗಮನ ಸೆಳೆದ ರಾಮನಮೂರ್ತಿಯನ್ನು ರೂಪಿಸಿದ ಅರುಣ್ ಯೋಗಿರಾಜ್ ಈ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನೂ ರೂಪಿಸಿದ್ದರು. ಅದನ್ನು ಪ್ರಧಾನಿಗೆ ಅವರಿಗೆ ತೋರಿಸಿದ್ದ ಕ್ಷಣ ಹೀಗಿತ್ತು.
(6 / 8)
ಅಯೋಧ್ಯೆಯಲ್ಲಿ ತಾವು ರೂಪಿಸಿದ ರಾಮನ ವಿಗ್ರಹದ ಕುರಿತು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಯೋಗಿ ಆದಿತ್ಯರಾಜ್ ವಿವರಿಸಿದ್ದು ಹೀಗೆ. ಅದರಲ್ಲೂ ರಾಮನಮೂರ್ತಿ ಒಡಮೂಡಿದ ರೀತಿಯನ್ನು ಬಿಡಿಸಿಟ್ಟರು.
(7 / 8)
ಅಯೋಧ್ಯೆಯಲ್ಲಿಯೇ ಇದ್ದುಕೊಂಡು ರಾಮನಮೂರ್ತಿಯನ್ನು ರೂಪಿಸಿದ ಮೈಸೂರಿನ ಅರುಣ್ ಯೋಗಿರಾಜ್ ಅವರು ರಾಮಮಂದಿರ ಉದ್ಘಾಟನೆ ದಿನ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜತೆಗೆ ಕಾಣಿಸಿಕೊಂಡಿದ್ದರು.
(8 / 8)
ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಯೋಧ್ಯೆ ರಾಮಮಂದಿರದ ರಾಮನ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಅಭಿನಂದಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ. ಮಾಜಿ ಸಚಿವ ಸಿ.ಟಿ.ರವಿ ಅವರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.
ಇತರ ಗ್ಯಾಲರಿಗಳು