Bangalore Rains: ಬೆಂಗಳೂರಲ್ಲಿ ಸತತ 6 ಗಂಟೆಯಿಂದ ಭಾರೀ ಮಳೆ, ಉರುಳಿ ಬಿದ್ದ ಮರಗಳು, ಜನಜೀವನ ಅಸ್ತವ್ಯಸ್ತ photos
- Weather Updates ಬೆಂಗಳೂರಿನಲ್ಲಿ ಭಾನುವಾರ ಎಡಬಿಡದೇ ಮಳೆ ಸುರಿಯುತ್ತಿದೆ. ಇದರಿಂದ ಹಲವು ಕಡೆ ಅಡಚಣೆಯಾಗಿದೆ. ಮೆಟ್ರೋ( Namma Metro) ಮಾರ್ಗದಲ್ಲೂ ಮರ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ತೊಂದರೆಯಾಯಿತು. ಇಲ್ಲಿದೆ ಬೆಂಗಳೂರು ಮಳೆ ಚಿತ್ರಣ.
- Weather Updates ಬೆಂಗಳೂರಿನಲ್ಲಿ ಭಾನುವಾರ ಎಡಬಿಡದೇ ಮಳೆ ಸುರಿಯುತ್ತಿದೆ. ಇದರಿಂದ ಹಲವು ಕಡೆ ಅಡಚಣೆಯಾಗಿದೆ. ಮೆಟ್ರೋ( Namma Metro) ಮಾರ್ಗದಲ್ಲೂ ಮರ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ತೊಂದರೆಯಾಯಿತು. ಇಲ್ಲಿದೆ ಬೆಂಗಳೂರು ಮಳೆ ಚಿತ್ರಣ.
(1 / 9)
ಬೆಂಗಳೂರಿನ ಭಾರಿ ಮಳೆಯಿಂದ ಬೆಂಗಳೂರು ಮೆಟ್ರೊ ನೇರಳೆ ಮಾರ್ಗದ ಎಂ.ಜಿ.ರಸ್ತೆ ನಿಲ್ದಾಣ ಮತ್ತು ಟ್ರಿನಿಟಿ ನಿಲ್ದಾಣ ನಡುವೆ ಹಳಿಗಳ ಮೇಲೆ ಮರದ ಕೊಂಬೆಗಳು ಬಿದ್ದಿರುವ ಕಾರಣ ಎಂ.ಜಿ.ರಸ್ತೆ ಹಾಗೂ ಇಂದಿರಾ ನಗರ ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತಗೊಂಡಿತ್ತು.ಭಾರಿ ಮಳೆಗೆ ದೊಡ್ಡ ಮರವೇ ಕುಸಿದು ಮೆಟ್ರೊ ರೈಲು ಮಾರ್ಗದ ವಯಡಕ್ಟ್ ಮೇಲೆ ಬಿದ್ದಿತ್ತು. ಇದನ್ನು ಸಿಬ್ಬಂದಿ ಸರಿಪಡಿಸಿ ಮೆಟ್ರೋ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
(2 / 9)
ಬೆಂಗಳೂರಿನ ಜಯನಗರ ಭಾಗದಲ್ಲಿ ಭಾರೀ ಗಾತ್ರದ ಮರವೊಂದು ಬೇರು ಸಹಿತ ಕಾರೊಂದರ ಮೇಲೆ ಉರುಳಿ ಬಿದ್ದು ಕಾರು ಜಖಂಗೊಂಡಿದೆ.
(3 / 9)
ಬೆಂಗಳೂರಿನ ಮಡಿವಾಳ ಡೈರಿ ಸರ್ಕಲ್ ಬಳಿ ಮಳೆಯ ನಡುವೆ ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದರಿಂದ ಸೈಂಟ್ ಜಾನ್ ಸಿಗ್ನಲ್ ಕಡೆಗೆ ನಿಧಾನಗತಿಯ ಸಂಚಾರವಿತ್ತು.
(5 / 9)
ಕೊರಮಂಗಲ ಬಿಡಿಎ ಜಂಕ್ಷನ್ ಬಳಿ ಭಾರೀ ಮಳೆಗೆ ಮರವೊಂದು ರಸ್ತೆಯಲ್ಲೇ ಉರುಳಿ ಬಿದ್ದಿದ್ದರಿಂದ ಸಂಚಾರಕ್ಕೆ ಅಡಚಣೆಯಾಯಿತು.
(6 / 9)
ಬೆಂಗಳೂರಿನ ಪೀಣ್ಯ ಪ್ರದೇಶದಲ್ಲಿ ಮಳೆ ಸುರಿದು ಸ್ಲಂ ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ಕಷ್ಟಪಡಬೇಕಾಯಿತು.,
(8 / 9)
ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಸಂಜೆಯಿಂದಲೇ ಮಳೆ ಸುರಿಯುತ್ತಿತ್ತು.ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿತು.
ಇತರ ಗ್ಯಾಲರಿಗಳು