Bangalore News: ಬೆಂಗಳೂರು ಹೆಸರಘಟ್ಟದಲ್ಲಿ ಬಗೆಬಗೆಯ ಹಣ್ಣು, ಹೂವು, ತರಕಾರಿಗಳ ವೈಭವ, ರಾಷ್ಟ್ರೀಯ ತೋಟಗಾರಿಕೆ ಮೇಳ ಹೇಗಿದೆ photos
- ಬೆಂಗಳೂರು ಹೊರ ವಲಯದ ಹೆಸರಘಟ್ಟದಲ್ಲಿರುವ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲ ಈ ಬಾರಿಯೂ ರಾಷ್ಟ್ರೀಯ ತೋಟಗಾರಿಕಾ ಮೇಳ ಆಯೋಜನೆಗೊಂಡಿದೆ. ಹೊಸ ಬಗೆಯ ಹಣ್ಣು, ಹೂವು, ತರಕಾರಿಗಳು, ಸಂಶೋಧನೆಯ ಪ್ರದರ್ಶನ ಇಲ್ಲಿ ಗಮನ ಸೆಳಯುತ್ತಿದೆ. ಕರ್ನಾಟಕದ ನಾನಾ ಭಾಗಗಳಿಂದ ರೈತರು, ಕೃಷಿ ವಲಯದಲ್ಲಿರುವವರು ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಇದರ ಚಿತ್ರ ನೋಟ ಇಲ್ಲಿದೆ.
- ಬೆಂಗಳೂರು ಹೊರ ವಲಯದ ಹೆಸರಘಟ್ಟದಲ್ಲಿರುವ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲ ಈ ಬಾರಿಯೂ ರಾಷ್ಟ್ರೀಯ ತೋಟಗಾರಿಕಾ ಮೇಳ ಆಯೋಜನೆಗೊಂಡಿದೆ. ಹೊಸ ಬಗೆಯ ಹಣ್ಣು, ಹೂವು, ತರಕಾರಿಗಳು, ಸಂಶೋಧನೆಯ ಪ್ರದರ್ಶನ ಇಲ್ಲಿ ಗಮನ ಸೆಳಯುತ್ತಿದೆ. ಕರ್ನಾಟಕದ ನಾನಾ ಭಾಗಗಳಿಂದ ರೈತರು, ಕೃಷಿ ವಲಯದಲ್ಲಿರುವವರು ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಇದರ ಚಿತ್ರ ನೋಟ ಇಲ್ಲಿದೆ.
(1 / 8)
ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (IIHR) ಮಾರ್ಚ್5ರಿಂದ 7ರವರೆಗೆ ‘ರಾಷ್ಟ್ರೀಯ ತೋಟಗಾರಿಕೆ ಮೇಳ–2024’ ಆಯೋಜಿಸಲಾಗಿದೆ. ಮೇಳದ ಮುಖ್ಯ ಭಾಗದಲ್ಲಿಯೇ ರೂಪಿಸಿರುವ ಹಣ್ಣು ತರಕಾರಿಗಳನ್ನು ಹೊತ್ತ ವಿಶೇಷ ಲಾರಿಯ ನೋಟ. ಗುರುವಾರ ಮೇಳಕ್ಕೆ ಕೊನೆಯ ದಿನ
(2 / 8)
ಆಧುನಿಕ ತಂತ್ರಜ್ಞಾನಗಳಾದ ಚತುರ ನೀರಾವರಿ ವ್ಯವಸ್ಥೆ, ನಿಯಂತ್ರಿತ ಪರಿಸರ ಕೃಷಿ, ಲಂಬ ಕೃಷಿ, ಸುಸ್ಥಿರ ಅಭಿವೃದ್ಧಿಗಾಗಿ ಪರಿಸರ ಸ್ನೇಹಿ ಪದ್ಧತಿಗಳು ಸೇರಿ ಹೊಸತನವನ್ನು ಬಿಂಬಿಸುವ ಪ್ರದರ್ಶನಗಳನ್ನು ಮೇಳದಲ್ಲಿಏರ್ಪಡಿಸಿರುವುದು ವಿಶೇಷ. ನವಿಲು ಹಿನ್ನೆಲೆಯ ಈ ನೋಟ ಗಮನ ಸೆಳಯುತ್ತದೆ.
(3 / 8)
ತೋಟಗಾರಿಕೆ ಮೇಳದ 300ಕ್ಕೂ ಹೆಚ್ಚು ಮಳಿಗೆಗಳಲ್ಲಿ ತೋಟಗಾರಿಕೆಗೆ ಸಂಬಂಧಿಸಿದ ನೂತನ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನವೂ ಇದೆ. ಇದರಲ್ಲಿ ಬೀಜಗಳು, ಗಿಡಗಳು, ಸಸ್ಯೋತ್ಪಾದನೆ ಮತ್ತು ಕೃಷಿ–ತೋಟಗಾರಿಕೆ ಉಪಕರಣಗಳ ಮಾರಾಟವನ್ನೂ ಏರ್ಪಡಿಸಲಾಗಿದೆ. ಇದಕ್ಕೆ ಹೆಚ್ಚಿನ ರೈತರು ಭೇಟಿ ನೀಡುತ್ತಿದ್ದಾರೆ.
(4 / 8)
ನಗರ ತೋಟಗಾರಿಕೆ, ಮಣ್ಣು ರಹಿತ ಕೃಷಿ, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ ಹಾಗೂ ಪ್ಯಾಕೇಜ್ ಮತ್ತು ಸಂಗ್ರಹಣ ತಂತ್ರಜ್ಞಾನಗಳ ಕುರಿತು ಕಾರ್ಯಗಾರಗಳು ಮೇಳದಲ್ಲಿ ನಡೆದಿವೆ. ಇದರ ಭಾಗವಾಗಿಯೇ ಬಾಳೆ ಬೆಳೆಗಳ ಪ್ರದರ್ಶನವೂ ಗಮನ ಸೆಳಯುತ್ತದೆ.
(5 / 8)
ಮೇಳದಲ್ಲಿ ಗಮನ ಸೆಳಯುತ್ತಿರುವ ಚಂಡು ಹೂವು. ಹೊಸ ತಳಿಯ ಈ ರೀತಿಯ ಹೂವುಗಳನ್ನು ಇಲ್ಲಿ ಬೆಳೆಸಿ ಮಾಹಿತಿ ನೀಡಲಾಗುತ್ತಿದೆ.
(6 / 8)
ತೋಟಗಾರಿಕೆ ಮೇಳದಲ್ಲಿ ಹತ್ತಾರು ಬಗೆಯ ಅಲಂಕಾರಿಕ ಹೂವುಗಳು ಗಮನ ಸೆಳಯುತ್ತವೆ. ಅವುಗಳ ಬಣ್ಣ, ರೂಪ ಕೂಡ ವಿಶೇಷವಾಗಿದೆ. ಇವುಗಳ ಕುರಿತು ಹೂವಿನ ವ್ಯಾಪಾರಸ್ಥರು ವಿವರ ಪಡೆದುಕೊಂಡರು.
(7 / 8)
ಇಡೀ ಮೇಳದಲ್ಲಿ ತೋಟಗಾರಿಕಾ ವಿದ್ಯಾರ್ಥಿಗಳು., ಸಂಶೋಧನಾರ್ಥಿಗಳು ಹಾಗೂ ಮಾರುಕಟ್ಟೆ, ಉದ್ಯಮ ವಲಯದವರೊಂದಿಗೆ ವಿಶೇಷ ಸಂವಾದವನ್ನೂ ಆಯೋಜಿಸಲಾಗಿದೆ. ಇದರಿಂದ ನೂರಾರು ವಿದಾರ್ಥಿಗಳಿಗೆ ಲ್ಯಾಬ್ ಟು ಲ್ಯಾಂಡ್ ಎನ್ನುವ ಪರಿಕಲ್ಪನೆ ಕುರಿತು ಹೆಚ್ಚು ತಿಳಿಯಲು ಸಹಕಾರಿಯಾಗಿದೆ.
ಇತರ ಗ್ಯಾಲರಿಗಳು