ಕರ್ನಾಟಕ ಬಜೆಟ್ 2024: ಬಜೆಟ್ ಮುನ್ನಾ ದಿನವೇ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅಬ್ಬರ, ಸದನದಲ್ಲಿ ಅವರ ನೋಟ ಹೀಗಿತ್ತು photos
- ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾ ಚಟುವಟಿಕೆಯಿಂದಲೇ ಇರುತ್ತಾರೆ. ಈಗ ಕರ್ನಾಟಕ ಬಜೆಟ್2024ಗೆ ತಯಾರಿ ಸಮಯ. ಇದರ ನಡುವೆ ಸದನದಲ್ಲಿ ಸಕ್ರಿಯವಾಗಿಯೇ ಪಾಲ್ಗೊಂಡಿದ್ದಾರೆ. ಗುರುವಾರ ಕರ್ನಾಟಕ ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯರು ತೆರಿಗೆ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಕಾಲೆಳೆದರೂ ಸೂಕ್ತ ಉತ್ತರವನ್ನೇ ನೀಡಿದರು. ಬಜೆಟ್ ಮುನ್ನಾದಿನ ಸಿಎಂ ಭಿನ್ನ ಭಾವ ಭಂಗಿ.
- ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾ ಚಟುವಟಿಕೆಯಿಂದಲೇ ಇರುತ್ತಾರೆ. ಈಗ ಕರ್ನಾಟಕ ಬಜೆಟ್2024ಗೆ ತಯಾರಿ ಸಮಯ. ಇದರ ನಡುವೆ ಸದನದಲ್ಲಿ ಸಕ್ರಿಯವಾಗಿಯೇ ಪಾಲ್ಗೊಂಡಿದ್ದಾರೆ. ಗುರುವಾರ ಕರ್ನಾಟಕ ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯರು ತೆರಿಗೆ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಕಾಲೆಳೆದರೂ ಸೂಕ್ತ ಉತ್ತರವನ್ನೇ ನೀಡಿದರು. ಬಜೆಟ್ ಮುನ್ನಾದಿನ ಸಿಎಂ ಭಿನ್ನ ಭಾವ ಭಂಗಿ.
(1 / 9)
ಬಜೆಟ್‌ಗೂ ಮುನ್ನಾ ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಪರಿಷತ್ ಸಿಎಂ ಸಿದ್ದರಾಮಯ್ಯಸದಸ್ಯರಾದ ಸಲೀಂ ಅಹಮದ್ ಹಾಗೂ ಗೋವಿಂದರಾಜು ಅವರೊಂದಿಗೆ ಆಗಮಿಸಿದರು.
(2 / 9)
ಬಜೆಟ್‌ಗೆ ಸಂಬಂಧಿಸಿದಂತೆ ನಡೆದಿರುವ ಅಧಿವೇಶನದಲ್ಲಿ ವಿಧಾನಪರಿಷತ್‌ಗೆ ಆಗಮಿಸಿ ತಮ್ಮ ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳ ಕುರಿತು ಸಿಎಂ ಸಿದ್ದರಾಮಯ್ಯ ವಿವರಣೆ ನೀಡಿದರು.
(3 / 9)
ಈ ವೇಳೆ ಬಿಜೆಪಿ ಸದಸ್ಯರು ಹಾಗೂ ಸಿದ್ದರಾಮಯ್ಯ ಅವರ ನಡುವೆ ಕೇಂದ್ರ ಸರ್ಕಾರದ ತೆರಿಗೆ ನೀತಿ ವಿಚಾರವಾಗಿ ಮಾತಿನ ಚಕಮಕಿಯೇ ನಡೆಯಿತು. ಆಗ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಕಾಂಗ್ರೆಸ್ ಸದಸ್ಯರು ನಿಂತರೆ, ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸಪೂಜಾರಿ ವಾಗ್ದಾಳಿ ಮುಂದುವರಿಸಿದರು.
(4 / 9)
ಕೇಂದ್ರದಿಂದ ನಮಗೆ ಒಟ್ಟು 11,495 ಕೋಟಿ ಹಣ ಬರಬೇಕು. ಆದರೆ ಒಂದೇ ಒಂದು ರೂಪಾಯಿಯೂ ಕೊಡದಿರುವ ಕಾರಣ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ. ತೆರಿಗೆ ನಮ್ಮ ಹಕ್ಕು ಎನ್ನುವುದನ್ನು ನಾವು ಎಂದಿಗೂ ಹೇಳುತ್ತೇವೆ ಎನ್ನುವ ಉತ್ತರವನ್ನು ಸಿದ್ದರಾಮಯ್ಯ ನೀಡಿದರು.
(5 / 9)
ನಾವು ಏನೇ ಜನಪಯೋಗಿ ಯೋಜನೆಗಳನ್ನು ತಂದರೂ ಪ್ರತಿಪಕ್ಷದವರಿಗೆ ಟೀಕಿಸುವುದೇ ಕೆಲಸ. ತೆರಿಗೆ ವಿಚಾರದಲ್ಲೂ ಕರ್ನಾಟಕದ ಪರವಾಗಿ ಬಿಜೆಪಿ ಜೆಡಿಎಸ್ ನಿಲ್ಲಲಿಲ್ಲ. ಹಾಗೆಂದು ನಾವು ಜನರ ಪರವಾಗಿ ನಿಲ್ಲಲೇಬೇಕಲ್ಲವೇ ಎನ್ನುವ ಪ್ರಶ್ನೆಯನ್ನು ಸಿದ್ದರಾಮಯ್ಯ ಮಾಡಿದರು.
(6 / 9)
ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಹೋಗಿ ದೆಹಲಿಯಲ್ಲಿ ಪ್ರಶ್ನಿಸಿ. ಅದನ್ನು ಬಿಟ್ಟು ನಮ್ಮನ್ನು ಪ್ರಶ್ನಿಸುತ್ತೀರಲ್ಲಾ ಎಂದು ಬಿಜೆಪಿಯವರ ಕಡೆ ಸಿದ್ದರಾಮಯ್ಯ ಮಾತಿನೇಟು ಬೀಸಿದರು.
(7 / 9)
ಸತ್ಯ ಸತ್ಯವೇ. ಸುಳ್ಳು ಸುಳ್ಳೇ. ನೀವು ಎದ್ದು ನಿಂತು ಮಾತನಾಡಿದರೆ ನಾವು ಬಾಯಿಮುಚ್ಚಿಕೊಂಡು ಕೂರುವುದಿಲ್ಲ. ಇಂತಹ ಗೂಂಡಾಗಿರಿ ವರ್ತನೆಗೆ ನಾನು ಜಗ್ಗುವುದಿಲ್ಲ ಎಂದು ಸಿದ್ದರಾಮಯ್ಯ ಏರಿದ ದನಿಯಲ್ಲೇ ಬಿಜೆಪಿಯವರನ್ನು ಕೆಣಕಿದರು.
(8 / 9)
ನಾವು ತೆರಿಗೆ ಪಾಲನಷ್ಟೇ ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿಲ್ಲ. ಇದರಲ್ಲಿ ಯಾವುದೇ ರಾಜಕೀಯವೂ ಇಲ್ಲ. ನಮ್ಮ ತೆರಿಗೆ ಪಾಲಿನ ಹಣವನ್ನು ನಮಗೆ ಕೊಡಿ ಎಂದು ಕೇಳುವುದು ತಪ್ಪೇ? ಎಂದೂ ಸಿದ್ದರಾಮಯ್ಯ ಕೇಳಿದರು.
ಇತರ ಗ್ಯಾಲರಿಗಳು