DC Ceo Meeting: ಕರ್ನಾಟಕದ ಡಿಸಿ, ಸಿಇಒಗಳ ಸಮ್ಮೇಳನ, ಹೀಗಿತ್ತು ಸಿಎಂ ಡಿಸಿಎಂ ಜೋಡೆತ್ತುಗಳ ಸಭೆಯ ಚಿತ್ರಣ
- ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸಂಪುಟದ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಪಾಲ್ಗೊಂಡಿದ್ದರು.

(1 / 9)
ಮಳೆಗಾಲ ಶುರುವಾಗಿರುವ ನಡುವೆಯೇ ಕರ್ನಾಟಕದ ಡಿಸಿಗಳು ಹಾಗು ಜಿಪಂ ಸಿಇಒಗಳ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆಗಳನ್ನೇ ನೀಡಿದರು.
(2 / 9)
ಡಿಸಿಗಳು ಮಹಾರಾಜರು ಎನ್ನುವ ಮನೋಭಾವವನ್ನು ಬಿಟ್ಟು ಜನರ ಕೆಲಸಗಳಿಗೆ ಒತ್ತು ನೀಡಬೇಕು, ಜನಪರ ಕೆಲಸ ಮಾಡದ ಅಧಿಕಾರಿಗಳ ವಿರುದ್ದ ಕ್ರಮ ಖಚಿತ ಎಂದರು ಸಿದ್ದರಾಮಯ್ಯ.
(3 / 9)
ಜನರಿಂದ ಬರುವ ದೂರುಗಳಿಗೆ ಸೂಕ್ತ ಸಮಯದೊಳಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಅದನ್ನು ಬಿಟ್ಟು ಅರ್ಜಿ ಸಂಬಂಧಿಸಿದವರಿಗೆ ಕಳುಹಿಸಿ ಸುಮ್ಮನೇ ಕೂರಬೇಡಿ ಎನ್ನುವುದು ಸಿದ್ದರಾಮಯ್ಯ ಸಲಹೆ.
(4 / 9)
ಕರ್ನಾಟಕದಲ್ಲಿ ಆದ್ಯತೆ ಮೇಲೆ ಆಗಬೇಕಾಗಿರುವ ಇಲಾಖಾವಾರು ಕೆಲಸಗಳನ್ನು ಸಮಯದ ಮಿತಿಯೊಳಗೆ ಮುಗಿಸಬೇಕು ಎನ್ನುವುದು ಸಿಎಂ ಸೂಚನೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಂದ ಸಿಎಂಗೆ ವಿವರಣೆ,.
(5 / 9)
ಇಷ್ಟು ದಿನ ಉದಾಸೀನ, ನಿರ್ಲಕ್ಷ್ಯಕ್ಕೆ, ಕರ್ತವ್ಯಲೋಪಕ್ಕೆ ಕೆಳ ಹಂತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇವತ್ತಿನಿಂದ ಹಿರಿಯ ಅಧಿಕಾರಿಗಳನ್ನೂ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟ ಎಚ್ಚರಿಕೆಯನ್ನು ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ನೀಡಿದರು
(6 / 9)
ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ಎಲ್.ಕೆ.ಅತೀಕ್, ಸಚಿವರಾದ ಸಂತೋಷ್ ಲಾಡ್, ತಿಮ್ಮಾಪುರ ಮತ್ತಿತರರು ಭಾಗಿಯಾದರು.
(7 / 9)
DC-CEO ಗಳು, ತಮ್ಮ ಜಿಲ್ಲೆಯ ಸಮಗ್ರ ಮಾಹಿತಿಗಳನ್ನು ಅಂಗೈಯಲ್ಲಿ ಇಟ್ಟುಕೊಂಡು ಉತ್ಸಾಹದಿಂದ ಕೆಲಸ ಮಾಡಬೇಕು. ಆಗ ಮಾತ್ರ ಪ್ರಗತಿ ಮತ್ತು ಅಭಿವೃದ್ಧಿಯ ವೇಗ ಕಾಣಲು ಸಾಧ್ಯ ಎನ್ನುವುದು ಸಿಎಂ ನೀಡಿದ ಸೂಚನೆ
ಇತರ ಗ್ಯಾಲರಿಗಳು