Ram mandir: ಕರ್ನಾಟಕದಲ್ಲೆಡೆ ರಾಮಮಂದಿರ ಉದ್ಘಾಟನೆ ಸಂಭ್ರಮ, ಹೀಗಿತ್ತು ಆ ಸಡಗರದ ಕ್ಷಣಗಳು
- ram mandir celebrations ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದರೆ ಕರ್ನಾಟಕದಲ್ಲೂ ಅದರ ಸಡಗರ ಜೋರಾಗಿತ್ತು. ಕರ್ನಾಟಕದ ನಾನಾ ಭಾಗಗಳಲ್ಲಿ ಹತ್ತಾರು ಸಂಘಟನೆಗಳವರು ವಿಭಿನ್ನವಾಗಿ ಚಟುವಟಿಕೆ ರೂಪಿಸಿದ್ದರು.
- ram mandir celebrations ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದರೆ ಕರ್ನಾಟಕದಲ್ಲೂ ಅದರ ಸಡಗರ ಜೋರಾಗಿತ್ತು. ಕರ್ನಾಟಕದ ನಾನಾ ಭಾಗಗಳಲ್ಲಿ ಹತ್ತಾರು ಸಂಘಟನೆಗಳವರು ವಿಭಿನ್ನವಾಗಿ ಚಟುವಟಿಕೆ ರೂಪಿಸಿದ್ದರು.
(1 / 9)
ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಮೈಸೂರಿಮನ ಸೈಕಲ್ ಪ್ಯೂರ್ ಅಗರಬತ್ತಿ ವತಿಯಿಂದ ಸಿದ್ದಪಡಿಸಿರುವ 111 ಅಡಿ ಉದ್ದದ ಅಗರಬತ್ತಿ ಬೆಳಗಿಸುವ ಕಾರ್ಯಕ್ರಮಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಲಾಯಿತು. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಶಿಲ್ಪಿ ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಿ, ಶಾಸಕರಾದ ಟಿ.ಎಸ್ ಶ್ರೀವತ್ಸ, ರಂಗ ಕುಟುಂಬದ ಸದಸ್ಯರಾದ ಆರ್.ಗುರು, ಕಿರಣ್ ರಂಗ, ವಿಷ್ಣು ರಂಗ, ಅನಿರುದ್ದ ರಂಗ ಮತ್ತು ನಿಖಿಲ್ ರಂಗ ಉಪಸ್ಥಿತರಿದ್ದರು.
(2 / 9)
ವಿಜಯಪುರ ನಗರದ ಬಬಲೇಶ್ವರ ನಾಕಾ ಹತ್ತಿರ ಹಿಂದೂ ಮಹಾಸಭಾ ಉತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಅಯೋಧ್ಯೆ ಶ್ರೀರಾಮರ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಪ್ರಯುಕ್ತ "ಶ್ರೀರಾಮೋತ್ಸವ" ಕಾರ್ಯಕ್ರಮದಲ್ಲಿ ರಂಗು ತುಂಬಿದ ಕ್ಷಣ, ಸ್ಥಳೀಯ ಮುಖಂಡ ವಿಜುಗೌಡ ಪಾಟೀಲ ಮತ್ತಿತರರು ಹಾಜರಿದ್ದರು.
(3 / 9)
ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಶಹಾಬಾದ ನಗರದ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ದೇವಸ್ಥಾನದಲ್ಲಿ ಮಹಿಳೆಯರು ತಿಲಕ ಇಟ್ಟುಕೊಂಡು ರಾಮನ ಕಾರ್ಯಕ್ರಮಕ್ಕೆ ಶುಭ ಕೋರಿದರು.
(4 / 9)
ರಾಮಮಂದಿರ ಉದ್ಘಾಟನೆ ಮತ್ತು ಶ್ರೀರಾಮ ದೇವರ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಲೆಂದು ಪ್ರಸಾದ ವಿತರಿಸಲಾಯಿತು.
(5 / 9)
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಶ್ರೀರಾಮ ಪ್ರಭುವಿನ ಮೂರ್ತಿಯ ಶಿಲೆ ದೊರೆತಂತಹ ಮೈಸೂರು ಜಿಲ್ಲೆ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿಯ ಪವಿತ್ರ ಸ್ಥಳದಲ್ಲಿ ನಡೆಯುತ್ತಿರುವ ವಿಶೇಷ ಪೂಜೆಯಲ್ಲಿ ಭಾಗವಹಿಸಲಾಯಿತು . ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಶಾಸಕ ಜಿ.ಟಿ ದೇವೇಗೌಡ, ಸಂಸದ ಪ್ರತಾಪಸಿಂಹ, ಶಾಸಕ ಟಿ.ಎಸ್ ಶ್ರೀವತ್ಸ ಹಾಜರಿದ್ದರು.
(6 / 9)
ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದ ವಿಜಯ ಯಾತ್ರೆಯಲ್ಲಿ ಶ್ರೀ ಭಾಗ್ಯದ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಭು ಶ್ರೀರಾಮಚಂದ್ರರ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲಾಯಿತು. ಈ ವೇಳೆ ಶಾಸಕ ದೊಡ್ಡನಗೌಡ ಪಾಟೀಲ ಹಾಜರಿದ್ದರು.
(7 / 9)
ಅಯೋಧ್ಯೆ ಶ್ರೀ ರಾಮ ಮಂದಿರ ಪ್ರತಿಷ್ಠಾಪನೆ ಅಂಗವಾಗಿ ಕಾರವಾರ ಮಾಲಾದೇವಿ ಮೈದಾನದಿಂದ ಹಿಂದೂ ಬಾಂಧವರು ಬೈಕ್ ಮೆರವಣಿಗೆ ಕೈಗೊಂಡು ಅಭಿಮಾನ ಮೆರೆದರು.
(8 / 9)
ಅಯೋಧ್ಯೆಯಲ್ಲಿ 500 ವರ್ಷಗಳ ನಂತರ ಭವ್ಯ ರಾಮ ಮಂದಿರ ಉದ್ಘಾಟನೆಗೊಂಡ ಸಂತಸದಲ್ಲಿ ದಾವಣಗೆರೆ ಜಿಲ್ಲೆ ನ್ಯಾಮತಿಯ ಯುವ ಬ್ರಿಗೇಡ್ ನ್ಯಾಮತಿಯ ಕಾರ್ಯಕರ್ತರು "ಮನೆ ಮನೆಗೂ ಶ್ರೀರಾಮ" ಎನ್ನುವ ಅಭಿಯಾನದ ಅಡಿಯಲ್ಲಿ "ಜೈಶ್ರೀರಾಮ" ಎಂಬ ಗೋಡೆ ಬರಹ ಬಿಡಿಸಿದರು.
ಇತರ ಗ್ಯಾಲರಿಗಳು