ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Food: ಜಿಐ ಮಾನ್ಯತೆ ಪಡೆದ ಕರ್ನಾಟಕದ ಆಹಾರೋತ್ಪನ್ನ ಯಾವು ಗೊತ್ತೆ, ಅವುಗಳ ವಿಶೇಷ ಇಲ್ಲಿದೆ

Karnataka Food: ಜಿಐ ಮಾನ್ಯತೆ ಪಡೆದ ಕರ್ನಾಟಕದ ಆಹಾರೋತ್ಪನ್ನ ಯಾವು ಗೊತ್ತೆ, ಅವುಗಳ ವಿಶೇಷ ಇಲ್ಲಿದೆ

  • ಕರ್ನಾಟಕ ಹಲವು ಆಹಾರೋತ್ಪನ್ನಗಳ ಅನನ್ಯತೆ ಹೊಂದಿದೆ. ಅದರಲ್ಲೂ ಮೈಸೂರು ಪಾಕ್‌, ಧಾರವಾಡ ಪೇಡ, ಬೆಂಗಳೂರು ದ್ರಾಕ್ಷಿ, ಕೊಡಗಿನ ಕಿತ್ತಳೆ, ನಂಜನಗೂಡು ರಸಬಾಳೆ ಇದೇ ಮಣ್ಣಿನವು. ಅವುಗಳಿಗೆ ಭೌಗೋಳಿಕ ಸೂಚ್ಯಂಕದ ಮಾನ್ಯತೆ( GI Tag) ನೀಡಲಾಗಿದೆ. ಅಂತಹ ಇತರೆ ಆಹಾರಗಳ ವಿವರ ಇಲ್ಲಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನಲ್ಲಿ ಬೆಳೆಯುವ ಲಿಂಬೆ ಹಣ್ಣು ರುಚಿಕರ. ಇಂಡಿ ಮಣ್ಣಿನ ಗುಣಕ್ಕೆ ತಕ್ಕುನಾಗಿ ಬೆಳೆವ ಈ ಲಿಂಬೆಗೆ ಕಳೆದ ವರ್ಷ ಜಿಐ ಮಾನ್ಯತೆ ದೊರೆತಿದೆ.
icon

(1 / 9)

ಕೊಡಗಿನಲ್ಲಿ ಬೆಳೆಯುವ ಹಸಿರು ಯಾಲಕ್ಕಿ ಕೂಡ ವಿಶೇಷ. ಕೊಡಗಿನ ಹವಾಮಾನಕ್ಕೆ ತಕ್ಕುನಾಗಿ ಬೆಳೆಯುವ ಹಸಿರು ಯಾಲಕ್ಕಿಯ ವಾಸನೆ ಹಾಗೂ ಸ್ವಾದ ಆಕರ್ಷಣೀಯ.
icon

(2 / 9)

ಕೊಡಗಿನಲ್ಲಿಯೇ ಬೆಳೆಯುವ ಕಿತ್ತಳೆ( Coorg Orange) ಕೂಡ ಜನಪ್ರಿಯವೇ. ಸಣ್ಣ ಗಾತ್ರ ಹಾಗೂ ಮುಟ್ಟಿದರೆ ರಸ ಹೊರ ಬರುವ ಈ ಹಣ್ಣು ರುಚಿಕರ ಹಾಗೂ ಆರೋಗ್ಯಕರವೂ ಹೌದು. ಇದಕ್ಕೂ ಹಲ ವರ್ಷದ ಹಿಂದೆಯೇ ಜಿಐ ಮಾನ್ಯತೆ ದೊರೆತಿದೆ.
icon

(3 / 9)

ಎಲ್ಲೆಡೆ ಮೈಸೂರು ಪಾಕ್‌( Mysore pak) ಮಾಡಿದರೂ ಮೈಸೂರಿನಲ್ಲೇ ಮಾಡುವ ಈ ರುಚಿಕರ ಪೇಯ ತಿನ್ನುವುದೇ ಚಂದ, ನೂರು ವರ್ಷದ ಹಿಂದೆಯೇ ಮೈಸೂರು ಪಾಕ್‌ ಅನ್ನು ಇಲ್ಲಿ ಉತ್ಪಾದಿಸುತ್ತಿದ್ದುದು ವಿಶೇಷ.
icon

(4 / 9)

ದ್ರಾಕ್ಷಿಗಳಲ್ಲಿ ವಿಜಯಪುರ ದ್ರಾಕ್ಷಿ ರುಚಿಕರ. ಆದರೆ ನೀಲಿ ದ್ರಾಕ್ಷಿಯಲ್ಲಿ( Bangalore blue Grapes) ಬೆಂಗಳೂರು ದ್ರಾಕ್ಷಿಯೇ ಬಲುರುಚಿ. ವೈನ್‌ಗೆ ಬಳಸುವ ಈ ದ್ರಾಕ್ಷಿಗೂ ಜಿಐ ಮಾನ್ಯತೆ ದೊರೆತಿದೆ.
icon

(5 / 9)

ಬೆಂಗಳೂರು ಸುತ್ತಮುತ್ತ ಬೆಳೆಯುವ ಗುಲಾಬಿ ಬಣ್ಣದ ಈರುಳ್ಳಿ( Bangalore rose color onion) ಕೂಡ ಬಣ್ಣ ಹಾಗೂ ರುಚಿ ಕಾರಣಕ್ಕೆ ಜನಪ್ರಿಯವಾಗಿದೆ. ಇದಕ್ಕೂ ಜಿಐ ಮಾನ್ಯತೆ ಬಹು ವರ್ಷದ ಹಿಂದೆಯೇ ಸಿಕ್ಕಿದೆ.
icon

(6 / 9)

ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯುವ ರಸಬಾಳೆ( Nanjangud Rasabale) ಸ್ವಾದಿಷ್ಟ ಹಾಗೂ ಆರೋಗ್ಯಕರವೂ ಹೌದು. ಈ ಹಣ್ಣಿನ ಬಣ್ಣ, ವಾಸನೆ ಆಕರ್ಷಿಸುತ್ತದೆ. ಇದಕ್ಕೂ ಕೂಡ ಜಿಐ ಮಾನ್ಯತೆ ನೀಡಲಾಗಿದೆ.
icon

(7 / 9)

ಮೈಸೂರಿನಲ್ಲಿ ಬೆಳೆಯುವ ಎಳೆ ಚಿಗುರಿನ( Mysore betel leaves)  ಈ ಎಲೆ ರುಚಿಕರವೂ ಹೌದು ಹಾಗೂ ಜನಪ್ರಿಯವೂ ಹೌದು. ಊಟದ ನಂತರ ಅಡಿಕೆಯೊಂದಿಗೆ ಚಿಗುರೆಲೆ ಜೋಡಿ ಇಷ್ಟಪಡುವವರು ಅಧಿಕ.
icon

(8 / 9)

ಉತ್ತರ ಕರ್ನಾಟಕದ ಧಾರವಾಡ ಪೇಡಾ(Dharwad peda)  ಸವಿದವರಿಲ್ಲ. ಹಾಲಿನಿಂದ ತಯಾರಿಸುವ ಈ ಪೇಡಾಕ್ಕೆ ನೂರು ವರ್ಷಕ್ಕೂ ಅಧಿಕ ಇತಿಹಾಸ. ಇದು ಕೂಡ ಆಹಾರ ವಿಭಾಗದಲ್ಲಿ ಜಿಐ ಟ್ಯಾಗ್‌ ಪಡೆದಿದೆ. 
icon

(9 / 9)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು