Mahaveer Jayanti2024: ಕರ್ನಾಟಕದಲ್ಲಿ ಮಹಾವೀರ ಜಯಂತಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ಸಹಿತ ಹಲವೆಡೆ ಧಾರ್ಮಿಕ, ಸೇವಾ ಚಟುವಟಿಕೆ photos
- ಅಹಿಂಸೆಯನ್ನು ಸಾರಿ ಅದನ್ನು ಅನುಸರಿಸಿದ ಮಹಾವೀರರ ಜಯಂತಿ ಕರ್ನಾಟಕದ ನಾನಾ ಕಡೆ ಭಕ್ತಿಭಾವ, ಸೇವಾ ಕಾರ್ಯಗಳಿಂದ ನಡೆದಿದೆ. ಇದರ ಚಿತ್ರನೋಟ ಇಲ್ಲಿದೆ.
- ಅಹಿಂಸೆಯನ್ನು ಸಾರಿ ಅದನ್ನು ಅನುಸರಿಸಿದ ಮಹಾವೀರರ ಜಯಂತಿ ಕರ್ನಾಟಕದ ನಾನಾ ಕಡೆ ಭಕ್ತಿಭಾವ, ಸೇವಾ ಕಾರ್ಯಗಳಿಂದ ನಡೆದಿದೆ. ಇದರ ಚಿತ್ರನೋಟ ಇಲ್ಲಿದೆ.
(1 / 11)
ಬೆಳಗಾವಿ ಜಿಲ್ಲೆಯ ಅಥಣಿ ನಗರದಲ್ಲಿ ಮಹಾವೀರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿ ಮಹಾವೀರರ ಮೆರವಣಿಗೆ ಕೈಗೊಳ್ಳಲಾಯಿತು.
(2 / 11)
ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ನಗರದ ಅನಂತಪುರ ರಸ್ತೆಯ ಸಾಂಸ್ಕøತಿಕ ಸಮುಚ್ಚಯ ಆವರಣದ ಹೊಂಗಿರಣ ಸಭಾಂಗಣದಲ್ಲಿ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು.
(3 / 11)
ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಂಘದ ಕಚೇರಿಯಲ್ಲಿ ಮಹಾವೀರ ಜಯಂತಿ ನಡೆಯಿತು.
(4 / 11)
ಮಹಾವೀರ ಜಯಂತಿ ಅಂಗವಾಗಿ ಬೆಂಗಳೂರಿನ ಯಲಹಂಕದ ಶ್ರೀ1008 ಶ್ರೇಯಾಂಸನಾಥ್ ದಿಗಂಬರ ಜೈನ ಅಸೋಸಿಯೇಷನ್ ಸಹಯೋಗದಲ್ಲಿ ನವಚೇತನ ಆಸ್ಪತ್ರೆ ವತಿಯಿಂದ ಜೈನ ಸಮುದಾಯದವರಿಗೆ ಉಚಿತ ಆರೋಗ್ಯ ಶಿಬಿರ ನಡೆಸಲಾಯಿತು. ಸುಮಾರು 100 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಿ ಮಾರ್ಗದರ್ಶನ ನೀಡಲಾಯಿತು.
(5 / 11)
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ದಿಂಡವಾರ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಮಹಾವೀರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
(6 / 11)
ಕೊಪ್ಪಳ ನಗರದಲ್ಲಿ ಜೈನ ಸಮುದಾಯದವರು ಭಾನುವಾರ ಆಯೋಜಿಸಿದ್ದ ಮಹಾವೀರ ಜಯಂತಿ ಮೆರವಣಿಗೆಯಲ್ಲಿ ಹಲವರು ಭಾಗಿಯಾದರು.
(7 / 11)
ವಿಜಯಪುರ ಬಿಜೆಪಿ ಕಚೇರಿಯಲ್ಲಿ ನಡೆದ ಮಹಾವೀರ ಜಯಂತಿಯಲ್ಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಮಾತನಾಡಿದರು.
(8 / 11)
ದಾವಣಗೆರೆಯಲ್ಲಿ 2662 ನೇ ಮಹಾವೀರ ಜಯಂತಿ ಹಿನ್ನೆಲೆ ದಾವಣಗೆರೆಯ ನರಸರಾಜ ಪೇಟೆಯಲ್ಲಿರುವ ಆದಿನಾಥ್ ದೇವಾಲಯ ಹಾಗೂ ಪಾರ್ಶ್ವನಾಥ್ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.
(9 / 11)
ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಮಹಾವೀರರ ಭಾವಚಿತ್ರವನ್ನು ಇರಿಸಿ ಜೈನ ಸಮುದಾಯ ಪ್ರಮುಖರು ಮೆರವಣಿಗೆಯನ್ನು ಕೈಗೊಂಡರು.
(10 / 11)
ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಮಹಾವೀರ ಜಯಂತಿಯ ಮೆರವಣಿಗೆ ಸಡಗರದಿಂದ ನೆರವೇರಿತು. ಈ ವೇಳೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭಾಗಿಯಾದರು.
ಇತರ ಗ್ಯಾಲರಿಗಳು