ನಿಮ್ಮೂರಲ್ಲಿ ಬಗೆ ಬಗೆಯ ಸಾವಯವ ಮೇಳ ಆಯೋಜಿಸುವ ಸಹಜ ಸಮೃದ್ದ ಕಂಪೆನಿ ವಹಿವಾಟು17.5 ಕೋಟಿ ರೂ., ಲಾಭಾಂಶವೇ 28 ಲಕ್ಷ ರೂ. ಹೀಗಿತ್ತು ಸಂಭ್ರಮ-bangalore news organic farming producer company sahaja samrudda sahaja organics turn over reaches 17 5 crore kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಮ್ಮೂರಲ್ಲಿ ಬಗೆ ಬಗೆಯ ಸಾವಯವ ಮೇಳ ಆಯೋಜಿಸುವ ಸಹಜ ಸಮೃದ್ದ ಕಂಪೆನಿ ವಹಿವಾಟು17.5 ಕೋಟಿ ರೂ., ಲಾಭಾಂಶವೇ 28 ಲಕ್ಷ ರೂ. ಹೀಗಿತ್ತು ಸಂಭ್ರಮ

ನಿಮ್ಮೂರಲ್ಲಿ ಬಗೆ ಬಗೆಯ ಸಾವಯವ ಮೇಳ ಆಯೋಜಿಸುವ ಸಹಜ ಸಮೃದ್ದ ಕಂಪೆನಿ ವಹಿವಾಟು17.5 ಕೋಟಿ ರೂ., ಲಾಭಾಂಶವೇ 28 ಲಕ್ಷ ರೂ. ಹೀಗಿತ್ತು ಸಂಭ್ರಮ

  • Agriculture Business ಯಶಸ್ಸು ಎನ್ನುವುದು ಸುಮ್ಮನೇ ಬರುವುದಿಲ್ಲ. ಕರ್ನಾಟಕದ ನಾನಾ ಭಾಗಗಳಲ್ಲಿ ಸಾವಯವ ಮೇಳ ಆಯೋಜಿಸಿ ಕೃಷಿಕರಿಗೆ ಪ್ರೋತ್ಸಾಹಿಸುವ ಜತೆಗೆ ಬಳಸುವವರನ್ನೂ ಉತ್ತೇಜಿಸುವ ಸಹಜ ಸಮೃದ್ದ ಆರ್ಗ್ಯಾನಿಕ್ಸ್‌ ( Sahaja Organics) ಸಂಸ್ಥೆಯು ಈ ಭಾರೀ ಭರ್ಜರಿ ಆದಾಯವನ್ನೇ ಪಡೆದಿದೆ. ಅದರ ಯಶಸ್ಸಿನ ನೋಟ ಇಲ್ಲಿದೆ. 

ಒಂದೂವರೆ ದಶಕದ ಹಿಂದೆ ಸಾವಯವ ಕೃಷಿ ಹಾಗೂ ಉತ್ಪನ್ನಗಳಿಗೆ ಉತ್ತೇಜನ ನೀಡಲೆಂದೇ ಕರ್ನಾಟಕದಲ್ಲಿ ಆರಂಭಗೊಂಡ ಸಹಜ ಸಮೃದ್ದ ಆರ್ಗಾನಿಕ್ ಪ್ರಡ್ಯೂಸರ್ ಕಂಪನಿ ಬಹಳಷ್ಟು ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.
icon

(1 / 7)

ಸಹಜ ಸಮೃದ್ದ ಆರ್ಗಾನಿಕ್ ಪ್ರಡ್ಯೂಸರ್ ಕಂಪನಿಯ 15 ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಬೆಂಗಳೂರಿನಲ್ಲಿ ನಡೆಯಿತು.‌ 
icon

(2 / 7)

17.5 ಕೋಟಿ ವಹಿವಾಟು ನಡೆಸಿ, 28 ಲಕ್ಷಗಳ‌ ಲಾಭ ಗಳಿಸಿರುವ ಸಹಜ ಆರ್ಗ್ಯಾನಿಕ್ಸ್‌( Sahaja Organics ) ಲಾಭಾಂಷವನ್ನು‌ ತನ್ನ ಸದಸ್ಯರಿಗೆ ಹಂಚಿಕೆ ಮಾಡಿತು. 80 ಲಕ್ಷ ದಷ್ಟು ಹಣ್ಣು ಮತ್ತು ತರಕಾರಿ  ಮಾರಾಟ ಮಾಡಿದ ಮಾಗಡಿಯ ಅಕ್ಕಿನಾಳು ಗ್ರಾಮದ ಸಾವಯವ ಕೃಷಿಕರ ಗುಂಪು 1.6 ಲಕ್ಷ ಬೋನಸ್ ಪಡೆದು ಮೊದಲಿಗರಾದರು. 
icon

(3 / 7)

ಕಂಪನಿಯನ್ಬು  ಯಶಸ್ವಿಯಾಗಿ ಮುನ್ನಡೆಸಿದ ಸಹಜ ಆರ್ಗಾನಿಕ್ಸನ ಕಾರ್ಯನಿರ್ವಹಣಾಧಿಕಾರಿ ಸೋಮೇಶ್‌ ಬಸವಣ್ಣ ಅವರನ್ನು  ಸನ್ಮಾನಿಸಲಾಯಿತು.,
icon

(4 / 7)

ಯಶಸ್ಸಿಗೆ ಕೈ ಜೋಡಿಸಿ ಮಾರ್ಗದರ್ಶನ ನೀಡಿದ ಸ ಹಜ ಆರ್ಗಾನಿಕ್ಸನ ಅಧ್ಯಕ್ಷರಾದ ಎನ್ ಆರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
icon

(5 / 7)

ಸಹಜ ಆರ್ಗಾನಿಕ್ಸ ಸಂಪೂರ್ಣ ಸಾವಯವ ಉತ್ಪನ್ನ ಗಳನ್ನು ಮಾತ್ರ ಕೊಳ್ಳುತ್ತದೆ ಮತ್ತು ಮಾರುತ್ತದೆ. ಕಳೆದ 14 ವರ್ಷಗಳಿಂದ ರಾಜಿಯಾಗದೆ ಸಾವಯವ ತೋಟಗಳಿಂದ ಮಾತ್ರ ಉತ್ಪನ್ನ ಖರೀದಿಸುತ್ತಾ ಬಂದಿದೆ. ಕೆಲ ವರ್ಷದ ಹಿಂದೆ ಕೆಂಪಕ್ಕಿ ಮಾರಾಟಕ್ಕೆ ನಟ ರಮೇಶ್‌ ಭಟ್‌ ಬೆಂಬಲಿಸಿದ್ದರು.
icon

(6 / 7)

ಬರುವ ವರ್ಷ 25 ಕೋಟಿ ವಹಿವಾಟು ಮಾಡುವ ಸಂಕಲ್ಪದೊಂದಿಗೆ ಸದಸ್ಯರು, ದೇಸಿ ಅಡುಗೆ ಸವಿದು ಚದುರಿದರು. ನಿರಂತರವಾಗಿ ಹಣ್ಣು, ತರಕಾರಿ , ಧಾನ್ಯ  ಮತ್ತು ಬೇಳೆಕಾಳುಗಳನ್ನು ಸರಬರಾಜು ಮಾಡಬಲ್ಲ ಪ್ರಾಮಾಣಿಕ ಸಾವಯವ ರೈತರು ಮತ್ತು ರೈತ ಗುಂಪುಗಳನ್ನು ಸಹಜ ಆರ್ಗಾನಿಕ್ಸ  ಎದುರುನೋಡುತ್ತಿದೆ ಎನ್ನುವುದು ಸಂಸ್ಥೆಯ ಅಭಿಪ್ರಾಯ.
icon

(7 / 7)

ಇತರ ಗ್ಯಾಲರಿಗಳು