Bangalore News: ಸೇನಾ ವಿಮಾನ ಓಡಿಸುವ 20 ಯುವತಿಯರೂ ಸೇರಿ ಎಂಜಿನಿಯರ್‌ಗಳಿಗೆ ಬೆಂಗಳೂರಲ್ಲಿ ತರಬೇತಿ, ಹೀಗಿತ್ತು ಅಂತಿಮ ಪರೇಡ್
ಸೇನೆಯ ತರಬೇತಿ ಎಂದರೆ ಅದು ಊಹಿಸಲು ಆಗದು. ಅಷ್ಟು ಕಠಿಣ.ಅದರಲ್ಲೂ ಸೇನಾ ವಿಮಾನ ಓಡಿಸುವ ಎಂಜಿನಿಯರ್‌ಗಳಿಗೆ ತರಬೇತಿ ಹೇಗಿರಬಹುದು. ಬೆಂಗಳೂರಿನಲ್ಲಿರುವ ಏರ್‌ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ(Air Force Technical College) ನಲ್ಲಿ ಮುಗಿದು ನಿರ್ಗಮನ ಪಥ ಸಂಚಲನವೂ ನಡೆಯಿತು. ಹೀಗಿತ್ತು ಕಾರ್ಯಕ್ರಮದ ನೋಟ.
(1 / 8)
ಬೆಂಗಳೂರಿನಲ್ಲಿರುವ ಏರ್‌ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ 60 ಏರೋನಾಟಿಕಲ್ ಎಂಜಿನಿಯರ್‌ಗಳ ತರಬೇತಿ ಪಥ ಸಂಚಲನ ಕಾರ್ಯಕ್ರಮಕ್ಕೆ ಆಗಮಿಸಿದ ಸೇನಾಧಿಕಾರಿ ಏರ್ ಮಾರ್ಷಲ್ ಎಸ್‌ಪಿ ಧನಕರ್ ಅವರನ್ನು ಬರ ಮಾಡಿಕೊಳ್ಳಲಾಯಿತು.
(2 / 8)
ಆಕರ್ಷಕ ಪಥಸಂಚಲನದಲ್ಲಿ ಏರ್ ಮಾರ್ಷಲ್ ಎಸ್‌ಪಿ ಧನಕರ್ ಅವರು ತರಬೇತಿಯಲ್ಲಿ ಭಾಗಿಯಾದ ಎಂಜಿನಿಯರ್ ಗಳಿಂದ ವಂದನೆ ಸ್ವೀಕರಿಸಿದರು.
(3 / 8)
ಸತತ 74 ವಾರಗಳ ಕಾಲ ಕಠಿಣ ತರಬೇತಿಗಳನ್ನು ಪೂರೈಸಿ ಬಂದ ಏರೋನಾಟಿಕಲ್ ಎಂಜಿನಯರ್‌ಗಳ ಪುರುಷರ ತಂಡ ಪಥ ಸಂಚಲನಕ್ಕೆ ಆಗಮಿಸಿತು.
(6 / 8)
ತರಬೇತಿಯಲ್ಲಿ ವೃತ್ತಿಪರತೆ ತೋರಿದ ನುನ್ನೂ ಊಹಾ ಅವರೂ ಬಹುಮಾನವನ್ನು ಏರ್ ಮಾರ್ಷಲ್ ಧನಕರ್ ಅವರಿಂದ ಪಡೆದುಕೊಂಡರು.
(7 / 8)
ಫ್ಲೈಯಿಂಗ್ ಆಫೀಸರ್ ಇವಿ ರಾಹುಲ್ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಖಡ್ಗವನ್ನು ನೀಡಿ ಏರ್ ಮಾರ್ಷಲ್ ಧನಕರ್ ಗೌರವಿಸಿದರು.
ಇತರ ಗ್ಯಾಲರಿಗಳು