Cauvery Water Tourism: ನದಿಯಿಂದ ನೀರು ಬಿಟ್ಟಿದ್ದಾರೆ, ಬೇಸಿಗೆಗೆ ಕಾವೇರಿ ತೀರದ ಬೆಸ್ಟ್ ಪ್ರವಾಸಿ ತಾಣಗಳಿವು Photos
- Cauvery tourist destinations ಕಾವೇರಿ ನದಿ ತೀರ ಪ್ರವಾಸಿಗರ ಸ್ವರ್ಗ. ಅದರಲ್ಲೂ ಬೇಸಿಗೆಯಲ್ಲಿ ನದಿ ತೀರದ ಪ್ರವಾಸ ಎಂದರೆ ಅದೇನೋ ರೋಮಾಂಚನ. ಈಗ ಕಾವೇರಿ ನದಿಯಿಂದ ನೀರು ಹರಿಸಿರುವುದರಿಂದ ವಾತಾವರಣವೂ ಚೆನ್ನಾಗಿದೆ. ಬೆಂಗಳೂರು, ಮೈಸೂರಿಗೆ ಹತ್ತಿರ ಇರುವ ಕಾವೇರಿ ನದಿ ತೀರದ ಪ್ರವಾಸಿ ತಾಣಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
- Cauvery tourist destinations ಕಾವೇರಿ ನದಿ ತೀರ ಪ್ರವಾಸಿಗರ ಸ್ವರ್ಗ. ಅದರಲ್ಲೂ ಬೇಸಿಗೆಯಲ್ಲಿ ನದಿ ತೀರದ ಪ್ರವಾಸ ಎಂದರೆ ಅದೇನೋ ರೋಮಾಂಚನ. ಈಗ ಕಾವೇರಿ ನದಿಯಿಂದ ನೀರು ಹರಿಸಿರುವುದರಿಂದ ವಾತಾವರಣವೂ ಚೆನ್ನಾಗಿದೆ. ಬೆಂಗಳೂರು, ಮೈಸೂರಿಗೆ ಹತ್ತಿರ ಇರುವ ಕಾವೇರಿ ನದಿ ತೀರದ ಪ್ರವಾಸಿ ತಾಣಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
(1 / 10)
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮಕ್ಕೆ ಸಮೀಪದಲ್ಲಿರುವ ತಾಣ ಬಲಮುರಿ. ಕೆಆರ್‌ಎಸ್‌ನಿಂದ ಹೊರಟ ಕಾವೇರಿ ನದಿ ಇಲ್ಲಿ ಎಡ ಹಾಗೂ ಬಲಮುರಿಯಾಗಿ ನೈಸರ್ಗಿಕ ಪ್ರವಾಣ ತಾಣ ರೂಪಿಸಿದೆ. ಮೈಸೂರಿನಿಂದ ಹದಿನೈದು, ಮಂಡ್ಯದಿಂದ ಮೂವತೈದು ಕಿ.ಮಿ ದೂರದಲ್ಲಿದೆ ಬಲಮುರಿ.
(2 / 10)
ಶ್ರೀರಂಗಪಟ್ಟಣ ನಗರದಲ್ಲಿರುವ ನಿಮಿಷಾಂಬ ದೇವಸ್ಥಾನ ಇರುವುದು ಕಾವೇರಿ ತೀರದಲ್ಲಿಯೇ. ಇಲ್ಲಿನ ತಾಣವೂ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ.
(3 / 10)
ಶ್ರೀರಂಗಪಟ್ಟಣ ನಗರದ ಮತ್ತೊಂದು ಕಾವೇರಿ ಜಲತಾಣ ಗೋಸಾಯಿ ಘಾಟ್. ಇಲ್ಲೂ ಕೂಡ ಕಾವೇರಿಯಲ್ಲಿ ಆಟವಾಡಲು, ದಿನ ಕಳೆಯಲು ಉತ್ತಮ ವಾತಾವರಣವಿದೆ. ಕುಟುಂಬ ಸಮೇತ ಹೋಗಲು ಇದು ಬೆಸ್ಟ್ ತಾಣ,
(4 / 10)
ಮೈಸೂರು ಜಿಲ್ಲೆಯ ತ್ರಿವೇಣಿ ಸಂಗಮ ನಗರಿ ತಿ.ನರಸೀಪುರ. ಕಪಿಲಾ ನದಿಯೊಂದಿಗೆ ಸಂಗಮವಾಗುವ ಕಾವೇರಿ ನದಿ ತೀರ ಚೆನ್ನಾಗಿದೆ, ಗುಂಜಾನರಸಿಂಹಸ್ವಾಮಿ ದೇಗುಲ ವೀಕ್ಷಣೆ ಮಾಡಬಹುದು.
(5 / 10)
ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇಗುಲ. ಸಮೀಪದಲ್ಲಿಯೇ ಹರಿಯುವ ಕಾವೇರಿ ನದಿ ತೀರ ಎಂತವರಿಗೂ ಖುಷಿ ಕೊಡುತ್ತದೆ. ತಿ.ನರಸೀಪುರದಿಂದ ಹದಿನೈದು ಕಿ.ಮಿ. ದೂರದಲ್ಲಿದೆ.
(6 / 10)
ಮರಳು ರಾಶಿಯಿಂದ ಕೂಡಿರುವ, ಕುಟುಂಬ ಸಮೇತ ಟ್ರಿಪ್ ಹಾಕಲು ತಲಕಾಡು ಅತ್ಯುತ್ತಮ ಕಾವೇರಿ ನೈಸರ್ಗಿಕ ತಾಣ. ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯದಿಂದ ಇದು ಹತ್ತಿರದ ಪ್ರವಾಸಿ ಸ್ಥಳ.
(7 / 10)
ಕಾವೇರಿ ನದಿ ಜಲಪಾತವಾಗಿ ಧುಮುಕುವ ತಾಣವಿದು. ಇಲ್ಲಿ ಗಗನ ಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳಿವೆ. ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಈ ತಾಣಗಳು ಹಂಚಿ ಹೋಗಿವೆ. ಇಲ್ಲಿಯೂ ಆಟವಾಡಲು, ದಿನ ಕಳೆಯಲು ಒಳ್ಳೆಯ ಪರಿಸರವಿದೆ.
(8 / 10)
ಮಂಡ್ಯ ಜಿಲ್ಲೆಯ ಮುತ್ತತ್ತಿ ಕೂಡ ಅತ್ಯುತ್ತಮ ನೈಸರ್ಗಿಕ ಜಲಧಾಮಗಳಲ್ಲಿ ಒಂದು. ಇಲ್ಲಿ ಫಿಶಿಂಗ್ ಕ್ಯಾಂಪ್ ಕೂಡ ಇದೆ. ಕಾವೇರಿ ನದಿ ತೀರದ ಪರಿಸರ ಮನಸಿಗೆ ಮುದ ನೀಡುತ್ತದೆ. ಬೆಂಗಳೂರಿನಿಂದ ನೂರು ಕಿ.ಮಿ, ಮಂಡ್ಯದಿಂದ ನಲವತ್ತು ಹಾಗೂ ಮೈಸೂರಿನಿಂದ ಅರವತ್ತು ಕಿ.ಮಿ ದೂರದಲ್ಲಿದೆ.
(9 / 10)
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಸಂಗಮ ಹಾಗೂ ಮೇಕೆದಾಟು ಕೂಡ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಕಾವೇರಿ ತೀರ ತಾಣಗಳು. ಬೆಂಗಳೂರಿನಿಂದ ಎಪತ್ತು, ಕನಕಪುರದಿಂದ ಇಪ್ಪತ್ತು ಕಿ. ಮಿ. ದೂರದಲ್ಲಿದೆ ಕಾವೇರಿ ಸಂಗಮ,
ಇತರ ಗ್ಯಾಲರಿಗಳು