BBMP Budget2024: ರಸ್ತೆ, ಕೆರೆ, ಶಾಲೆ, ಹಸುರೀಕರಣ, ಬೆಂಗಳೂರು ಬಜೆಟ್‌ನಲ್ಲಿ ಘೋಷಿಸಿದ ಪ್ರಮುಖ 10 ಕಾರ್ಯಕ್ರಮಗಳು Photos
- Bangalore News ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಂಡಿಸಿದ ಬಜೆಟ್‌ನಲ್ಲಿ ಹಲವಾರು ವಲಯಗಳಿಗೆ ಒತ್ತು ನೀಡಲಾಗಿದೆ. ಯಾವ ವಲಯಕ್ಕೆ ಏನೇನು ದೊರೆತಿವೆ ಎನ್ನುವ ಚಿತ್ರ ನೋಟ ಇಲ್ಲಿದೆ.
- Bangalore News ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಂಡಿಸಿದ ಬಜೆಟ್‌ನಲ್ಲಿ ಹಲವಾರು ವಲಯಗಳಿಗೆ ಒತ್ತು ನೀಡಲಾಗಿದೆ. ಯಾವ ವಲಯಕ್ಕೆ ಏನೇನು ದೊರೆತಿವೆ ಎನ್ನುವ ಚಿತ್ರ ನೋಟ ಇಲ್ಲಿದೆ.
(1 / 10)
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಹೊಸ ಲೇ-ಔಟ್‌ಗಳಲ್ಲಿ ಹೊಸದಾಗಿ ಉದ್ಯಾನವನಗಳ ಅಭಿವೃದ್ಧಿ, ನಿರ್ವಹಣೆ, ಇತ್ಯಾದಿ ಕಾರ್ಯಗಳಿಗಾಗಿ 35 ಕೋಟಿ ರೂ.ಗಳನ್ನು ಈ ಬಾರಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
(2 / 10)
ಪ್ರಸ್ತುತ ಸಾಲಿನಲ್ಲಿ 2 ಲಕ್ಷ ಸಸಿಗಳನ್ನು ಬೆಂಗಳೂರು ಮಹಾನಗರದಲ್ಲಿ ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಸಿಗಳ ಬೇಡಿಕೆಗೆ 2 ಹೊಸ ಹೈಟೆಕ್ ಸಸ್ಯ ಕ್ಷೇತ್ರಗಳನ್ನು ಸ್ಥಾಪಿಸಲಾಗುತ್ತದೆ.
(3 / 10)
ಪಾಲಿಕೆಯು 'ಸಮಗ್ರ ಸದೃಢ ಆರೋಗ್ಯ' ಹೆಸರಿನ ಯೋಜನೆ ಅಡಿಯಲ್ಲಿ ಮುಂದಿನ 3 ವರ್ಷಗಳಲ್ಲಿ ಸಮಗ್ರ ಯೋಜನೆಯನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ ಈ ಸಾಲಿನಲ್ಲಿ 25 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.
(4 / 10)
ಬೆಂಗಳೂರಿನಲ್ಲಿ ಈ ಸಾಲಿನಲ್ಲಿ 50 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಿರ ಅಥವಾ ಮೊಬೈಲ್ ಮೋಡ್‌ನಲ್ಲಿ ಸ್ಥಾಪಿಸಲಾಗುವುದು ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಯೋಜಿಸಲಾಗಿದೆ.
(5 / 10)
ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ಪಾಲಿಕೆಯ ಹೊಸ ರುದ್ರಭೂಮಿ ಹಾಗೂ ಚಿತಾಗಾರಗಳನ್ನು ನಿರ್ಮಾಣ ಮಾಡಲು 15 ಕೋಟಿಗಳನ್ನು ತೆಗೆದಿರಿಸಲಾಗಿದೆ.
(6 / 10)
ಬೆಂಗಳೂರು ಕೆರೆಗಳ ನಗರಿಯೂ ಹೌದು. ಇಲ್ಲಿನ ಕೆರೆಗಳ ಅಭಿವೃದ್ಧಿ ಮತ್ತು ಸುಧಾರಣೆ, ಕೆರೆಗಳ ಗಣಗಳಿಗೆ ತಂತಿಬೇಲಿಯನ್ನು ಹಾಗೂ ಇತ್ಯಾದಿ ಕಾರ್ಯಗಳಿಗಾಗಿ 35 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಬಿಬಿಎಂಪಿ ಮೀಸಲಿಟ್ಟಿದೆ.
(7 / 10)
ಬೆಂಗಳೂರಿನ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಿ 100 ಶೀ ಟಾಯ್ಲೆಟ್ಸ್('She Toilets) ಗಳನ್ನು ತರಲಾಗುವುದು. ಈಗಾಗಲೇ ಚೆನ್ನೈ ನಗರದಲ್ಲಿ ಈ ಶೌಚಾಲಯಗಳು ಜನಪ್ರಿಯವಾಗಿವೆ.
(8 / 10)
ಪಾಲಿಕೆಯ ಶಾಲಾ ಮತ್ತು ಕಾಲೇಜುಗಳ ಕಲಿಕಾ ಸಾಮರ್ಥ್ಯ ವೃದ್ಧಿಸುವ ಸಲುವಾಗಿ ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲ್ಯಾಬ್, ಮಾಹಿತಿ ಮತ್ತು ತಂತ್ರಜ್ಞಾನ ಲ್ಯಾಬ್, ಸೈನ್ಸ್ ಲ್ಯಾಬ್, ಇ- ಗ್ರಂಥಾಲಯಗಳನ್ನು ಸ್ಥಾಪಿಸುವುದಕ್ಕಾಗಿ ಈ ಸಾಲಿನಲ್ಲಿ 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ
(9 / 10)
ಬೆಂಗಳೂರು ನಗರವನ್ನು ಆಕರ್ಷಣೀಯವಾಗಿ ಮಾಡಲು ನಗರದಲ್ಲಿರುವ ಮೇಲ್ಸೇತುವೆ, ಕೆಳಸೇತುವೆ, ರಸ್ತೆ ಕೂಡು ಜಾಗಗಳು, ಉದ್ಯಾನವನಗಳಲ್ಲಿ ಆಕರ್ಷಣೀಯ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲು 100 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದೆ.
ಇತರ ಗ್ಯಾಲರಿಗಳು