ಕರ್ನಾಟಕದಲ್ಲಿ ಬಿಸಿಯ ಜೊತೆಗೆ ಕಿಕ್ ಏರಿಸಿಕೊಳ್ಳುತ್ತಿರುವ ಜನ; ಏಪ್ರಿಲ್ ಮೊದಲ 11 ದಿನದಲ್ಲಿ ದಾಖಲೆಯ 17.67 ಲಕ್ಷ ಲೀಟರ್ ಬಿಯರ್ ಮಾರಾಟ
- ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ 11 ವರೆಗಿನ ಬಿಯರ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಬಿಸಿಯಿಂದಾಗಿ ಜನರು ಚಿಲ್ಡ್ ಬಿಯರ್ ಮೊರೆ ಹೋಗುತ್ತಿರುವುದರಿಂದ ಇದರಿಂದ ಗೊತ್ತಾಗಿದೆ.
- ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ 11 ವರೆಗಿನ ಬಿಯರ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಬಿಸಿಯಿಂದಾಗಿ ಜನರು ಚಿಲ್ಡ್ ಬಿಯರ್ ಮೊರೆ ಹೋಗುತ್ತಿರುವುದರಿಂದ ಇದರಿಂದ ಗೊತ್ತಾಗಿದೆ.
(1 / 7)
2023ರ ಏಪ್ರಿಲ್ 1 ರಿಂದ 11 ರವರೆಗೆ ಕರ್ನಾಟಕದಲ್ಲಿ 13.16 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. ಇದೀಗ ಆ ದಾಖಲೆ ಮುರಿಯಲಾಗಿದೆ.
(2 / 7)
2024ರ ಏಪ್ರಿಲ್ 1 ರಿಂದ 11 ರವರೆಗೆ ರಾಜ್ಯದಲ್ಲಿ ಬರೋಬ್ಬರಿ 17.67 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಬಿಸಿಲಿನಿಂದಾಗಿ ಜನರು ಚಿಲ್ಡ್ ಬಿಯರ್‌ಗೆ ಮೊರೆ ಹೋಗುತ್ತಿದ್ದಾರೆ. ಬಿಸಿಲಿನ ಜೊತೆಗೆ ಯುಗಾದಿ ಹಬ್ಬ ಹಾಗೂ ಹೊಸ ತೊಡಕು ಇದ್ದ ಕಾರಣ ಹೆಚ್ಚಿನ ಮಂದಿ ಚೀಯರ್ಸ್ ಮಾಡಿದ್ದಾರೆ.
(3 / 7)
2021 ರಲ್ಲಿ 8.83 ಲೀಟರ್ ಹಾಗೂ 2022 ರಲ್ಲಿ 9.20 ಲೀಟರ್ ಬಿಯರ್ ಮಾರಾಟವಾಗಿತ್ತು. ಕಳೆದ 3 ವರ್ಷಗಳಿಗೆ ಹೋಲಿಸಿದರೆ 2024ರಲ್ಲಿ ವಿವಿಧ ಬ್ರಾಂಡ್‌ಗಳ ಬಿಯರ್ ಭಾರಿ ಪ್ರಮಾಣದಲ್ಲಿ ಮಾರಾಟವಾಗಿದೆ.
(4 / 7)
ಕರ್ನಾಟಕದಲ್ಲಿ ರಣ ಬಿಸಿಲು ಇರುವ ಕಾರಣ ಮದ್ಯ ಪ್ರಿಯರು ಚಿಲ್ಡ್ ಬಿಯರ್ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದೆ.
(5 / 7)
ರಾಜ್ಯದಲ್ಲಿ ಲೋಕಸಭೆ ಚುನಾವಣೆ ರಂಗೇರಿದ್ದರೂ ಮದ್ಯ ಮಾರಾಟದ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಲೋಕಸಭೆ ಚುನಾವಣೆಗೆ ಹೋಲಿಸಿಕೊಂಡರೆ ವಿಧಾನಸಭೆ ಹಾಗೂ ಇತರೆ ಸ್ಥಳೀಯ ಚುನಾವಣೆಗಳ ಸಂದರ್ಭದಲ್ಲಿ ಮದ್ಯ ಮಾರಾಟ ಹೆಚ್ಚಾಗಿರುತ್ತದೆ.
(6 / 7)
ಬಿಯರ್ ಅಷ್ಟೇ ಅಲ್ಲದೆ, ಇತರೆ ಬ್ರಾಂದಿ, ವಿಸ್ಕಿ ಹಾಗೂ ಇತರೆ ಮದ್ಯಗಳ ಮಾರಾಟದಲ್ಲೂ ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಪ್ರತಿ ಬಾರಿ ಬಜೆಟ್‌ನಲ್ಲಿ ಮದ್ಯದ ಮೇಲಿನ ಸುಂಕವನ್ನು ಹೆಚ್ಚಿಸಲಾಗುತ್ತದೆ. ಆದರೂ ಕೂಡ ಕುಡಿಯೋರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಇತರ ಗ್ಯಾಲರಿಗಳು