Bangalore Rains: ಬಿಸಿಲಿಗೆ ಬೆಂದ ಬೆಂಗಳೂರು ಜನರಿಗೆ ಈ ವಾರವೂ ನಿರಾಸೆ; ಏಪ್ರಿಲ್ 19 ರವರೆಗೆ ಉದ್ಯಾನ ನಗರಿಗೆ ಮಳೆಯಿಲ್ಲ
- Bangalore Weather: ಯುಗಾದಿ ನಂತರ ಬೆೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಶಾಖಾಘಾತದಿಂದ ಇನ್ನೂ ಪರಿಹಾರ ಸಿಗುತ್ತಿಲ್ಲ. ಏಪ್ರಿಲ್ 19 ರವರೆಗೆ ನಗರಕ್ಕೆ ಮಳೆ ಇಲ್ಲ ಎಂಬ ವರದಿ ಜನರನ್ನ ನಿರಾಸೆಗೊಳಿಸಿದೆ.
- Bangalore Weather: ಯುಗಾದಿ ನಂತರ ಬೆೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಶಾಖಾಘಾತದಿಂದ ಇನ್ನೂ ಪರಿಹಾರ ಸಿಗುತ್ತಿಲ್ಲ. ಏಪ್ರಿಲ್ 19 ರವರೆಗೆ ನಗರಕ್ಕೆ ಮಳೆ ಇಲ್ಲ ಎಂಬ ವರದಿ ಜನರನ್ನ ನಿರಾಸೆಗೊಳಿಸಿದೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 10)
ಬೆಂಗಳೂರಿನ ಜನರು ಸುಡುವ ಬಿಸಿಲಿನಿಂದ ಪಾರಾಗಲು ತಂಪು ಪಾನೀಯಗಳು ಹಾಗೂ ಇತರೆ ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ನಿರಾಸೆಯ ವಿಷಯವೆಂದರೆ ನಗರದಲ್ಲಿ ಇನ್ನೂ ಒಂದು ವಾರದ ಮಳೆಯಾಗುವುದಿಲ್ಲ ಎಂದು ವರದಿಯಾಗಿದೆ.
(Hindustan Times)(2 / 10)
ನಗರದ ಜನರು ಮಳೆಯನ್ನು ನೋಡಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಯುಗಾದಿಯ ನಂತರ ಮಳೆ ಬರುತ್ತೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಶಾಖಾಘಾತದಿಂದಲೇ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ.
(Hindustan Times)(3 / 10)
ಏಪ್ರಿಲ್ 19 ರ ನಂತರ ಮಾತ್ರ ಬೆಂಗಳೂರು ನಗರದಲ್ಲಿ ಮಳೆಯನ್ನು ನಿರೀಕ್ಷಿಸಬಹುದಾಗಿದೆ, ಅಲ್ಲಿಯ ವರೆಗೆ ಒಣ ಹವೆ ಕನಿಷ್ಠ ಇನ್ನೂ ಒಂದು ವಾರ ಮುಂದುವರಿಯುತ್ತದೆ.
(4 / 10)
ಬೆಂಗಳೂರಿನಲ್ಲಿ ಏಪ್ರಿಲ್ 19 ವರೆಗೆ ಮಳೆಯ ಮುನ್ಸೂಚನೆ ಇಲ್ಲ ಎಂಬು ವಿಷಯವನ್ನು ಪ್ರಕಟಣೆಯ ಮೂಲಕ ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಹಿರಿಯ ವಿಜ್ಞಾನಿ ಎ. ಪ್ರಸಾದ್ ತಿಳಿಸಿದ್ದಾರೆ.
(Hindustan Times)(5 / 10)
ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಐಎಂಡಿ ವಿಜ್ಞಾನಿ ಹೇಳಿದ್ದಾರೆ. "ಈ ತಿಂಗಳು ಕನಿಷ್ಠ ಒಂದು ಮಳೆಯನ್ನು ಜನರು ನೋಡಲಿದ್ದಾರೆ ಎಂದು ನಾವು ಭಾವಿಸಿದ್ದೇವೆ. ನಿರಂತರ ಮಳೆಯಾಗುವ ಸಾಧ್ಯತೆಯಿಲ್ಲ" ಎಂದು ವಿಜ್ಞಾನಿ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
(Hindustan Times)(6 / 10)
ಕಳೆದ ವಾರದಲ್ಲಿ ಬೆಂಗಳೂರಿನಲ್ಲಿ ತಾಪಮಾನ ಕಡಿಮೆಯಾಗಿತ್ತು. ಏಪ್ರಿಲ್ 6 ರಂದು 37.6 ಡಿಗ್ರಿ ಸೆಲ್ಸಿಯಸ್‌ಗೆ ಹೋಲಿಸಿದರೆ, ಏಪ್ರಿಲ್ 13 ರಂದು ಬೆಂಗಳೂರಿನಲ್ಲಿ ಕೇವಲ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
(7 / 10)
ನಗರದಲ್ಲಿ ಕಳೆದ 2 ತಿಂಗಳಿಂದ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಮಳೆಯ ಅಗತ್ಯವಿದೆ. ಮಳೆ ಬಂದರೆ ಒಣಗಿದ ಕೊಳವೆಬಾವಿಗಳಿಗೆ ಜೀವ ಬರಬಹುದು.
(8 / 10)
ಬಿರು ಬಿಸಿಲು ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಿದ್ದು, ಚುನಾವಣಾ ಅಧಿಕಾರಿಗಳು ಬಿಸಿಲಿನಲ್ಲೇ 85 ವರ್ಷ ಮೇಲ್ಪಟ್ಟ ವೃದ್ಧರ ಮನೆಗಳಿಗೆ ತೆರಳಿ ಅಂಚೆ ಮತದಾನವನ್ನು ಪಡೆದಿದ್ದಾರೆ.
(PTI)(9 / 10)
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಈ ಹಿಂದೆ ಬಿಸಿ ಗಾಳಿಯ ಮುನ್ಸೂಚನೆ ನೀಡಿ ಜಾಗ್ರತೆ ವಹಿಸುವಂತೆ ಸಲಹೆಗಳನ್ನು ನೀಡಿತ್ತು, ಗರಿಷ್ಠ ತಾಪಮಾನದ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಜನರು ಮನೆಯೊಳಗೆ ಇರಬೇಕು ಎಂದು ಹೇಳಿದೆ. ಬಿಸಿಲಿನಿಂದ ಪಾರಾಗಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
(Hindustan Times)ಇತರ ಗ್ಯಾಲರಿಗಳು