Womens Day2024: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಛಾಪು ಮೂಡಿಸಿದ ಮಹಿಳಾ ರಾಜಕಾರಣಿಗಳಿವರು Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Womens Day2024: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಛಾಪು ಮೂಡಿಸಿದ ಮಹಿಳಾ ರಾಜಕಾರಣಿಗಳಿವರು Photos

Womens Day2024: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಛಾಪು ಮೂಡಿಸಿದ ಮಹಿಳಾ ರಾಜಕಾರಣಿಗಳಿವರು Photos

  • ಕರ್ನಾಟಕ ರಾಜಕಾರಣದಲ್ಲಿ ಹಲವು ಮಹಿಳೆಯರು ಆಡಳಿತ ನಡೆಸಿದ್ದಾರೆ. ಕಾಂಗ್ರೆಸ್‌, ಬಿಜೆಪಿ, ಜನತಾಪಕ್ಷ, ಜನತಾದಳ ಸಹಿತ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡು ಛಾಪು ಮೂಡಿಸಿದ್ಧಾರೆ. ಈಗಲೂ ರಾಜಕಾರಣದಲ್ಲಿ ಪುರುಷರೇ ಹೆಚ್ಚಿರುವಾಗ ಮಹಿಳೆಯರು ತಮಗೆ ಸಿಕ್ಕ ಅವಕಾಶ ಬಳಸಿಕೊಂಡಿದ್ದಾರೆ. ಏಳು ದಶಕದಲ್ಲಿ ಕರ್ನಾಟಕದಲ್ಲಿ ಕೆಲಸ ಮಾಡಿದ ಪ್ರಮುಖ ರಾಜಕಾರಣಿಗಳ ವಿವರ ಇಲ್ಲಿದೆ

ಕರ್ನಾಟಕದ ಖ್ಯಾತ ಸಮಾಜ ಸೇವಕ ಕೆಎಚ್‌ ರಾಮಯ್ಯ ಅವರ ಪುತ್ರಿ, ಕೇಂದ್ರದ ಸಚಿವರಾಗಿದ್ದ ದಾಸಪ್ಪ ಅವರ ಪತ್ನಿಯಾಗಿದ್ದರು ಸಮಾಜ ಸೇವೆ ಹಾಗೂ ರಾಜಕಾರಣದಲ್ಲಿ ಹೆಸರು ಮಾಡಿದವರು ಯಶೋಧರಮ್ಮ ದಾಸಪ್ಪ. ಅವರು ಹಾಸನ ಜಿಲ್ಲೆ ಗಂಡಸಿಯಿಂದ ಶಾಸಕರಾಗಿ ನಿಜಲಿಂಗಪ್ಪ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಕೆಲ ಕಾರಣಕ್ಕೆ ರಾಜೀನಾಮೆ ನೀಡಿದ್ದರು.
icon

(1 / 11)

ಸರೋಜಿನಿ ಮಹಿಷಿ ಅವರು ಧಾರವಾಡದ ಸಂಸದರಾಗಿ ಕೇಂದ್ರದಲ್ಲಿ ಸಚಿವರಾಗಿದ್ದವರು. ಕೇಂದ್ರದಲ್ಲಿ ಉನ್ನತ ಹುದ್ದೆ ಹೊಂದಿದವರು. ಉದ್ಯೋಗದ ವಿಚಾರದಲ್ಲಿ ಅವರು ನೀಡಿದ ವರದಿ ಈಗಲೂ ಸದ್ದು ಮಾಡುತ್ತಲೇ ಇರುತ್ತದೆ.
icon

(2 / 11)

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಕ್ಷೇತ್ರದಿಂದ ನಿರಂತರವಾಗಿ ಶಾಸಕರಾಗಿ ಸಚಿವರಾಗಿದ್ದವರು. ಕರ್ನಾಟಕದ ಮೊದಲ ಮಹಿಳಾ ಸ್ಪೀಕರ್‌ ಆಗಿದ್ದವರು ಕೆ.ಎಸ್.ನಾಗರತ್ನಮ್ಮ. ಗಟ್ಟಿಗಿತ್ತಿ ಎಂದು ರಾಜಕಾರಣದಲ್ಲಿ ಹೆಸರು ಪಡೆದವರು 
icon

(3 / 11)

ಮಾರ್ಗರೇಟ್‌ ಆಳ್ವ ಅವರು ರಾಜ್ಯಸಭೆ ಸದಸ್ಯರಾಗಿ ಕೇಂದ್ರದಲ್ಲಿ ನಿರಂತರ ಸಚಿವರಾಗಿದ್ದವರು. ಉತ್ತರಕನ್ನಡದ ಕೆನರಾದಿಂದ ಸಂಸದರಾಗಿ ಆನಂತರ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿ ಛಾಪು ಮೂಡಿಸಿದವರು. ಕಾಂಗ್ರೆಸ್‌ನಲ್ಲಿಯೇ ಬಹುತೇಕ ಅವರ ರಾಜಕೀಯ ಜೀವನ ಸಾಗಿದೆ.
icon

(4 / 11)

ದಾವಣಗೆರೆ ನಗರ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರಗಳ ಶಾಸಕರಾಗಿ ಶಿಕ್ಷಣ ಸಚಿವರಾಗಿಯೂ ಕೆಲಸ ಮಾಡಿದ ನಾಗಮ್ಮ ಕೇಶವಮೂರ್ತಿ ಅವರು ಸಮಾಜ ಸೇವೆಯಲ್ಲಿ ಹೆಸರು ಮಾಡಿದವರು.
icon

(5 / 11)

ಉಡುಪಿ ಜಿಲ್ಲೆಯವರಾದ ಮನೋರಮಾ ಮಧ್ವರಾಜ್‌ ಅವರು ಶಾಸಕರಾಗಿ. ಸಚಿವೆಯಾಗಿ. ಸಂಸದೆಯಾಗಿ ಕೆಲಸ ಮಾಡಿದವರು. ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷದಿಂದ ಚುನಾಯಿತರಾಗಿದ್ದರು.
icon

(6 / 11)

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದ ಬಸವರಾಜೇಶ್ವರಿ ಅವರು ಕೇಂದ್ರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದವರು. ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದವರು
icon

(7 / 11)

ಬಿಟಿ ಲಲಿತಾ ನಾಯಕ್‌ ರಾಯಚೂರು ಜಿಲ್ಲೆ ದೇವದುರ್ಗದಿಂದ ಶಾಸಕರಾಗಿ ಜನತಾದಳ ಸರ್ಕಾರದಲ್ಲಿ ಸಚಿವರಾಗಿದ್ದರು. ವಿಧಾನಪರಿಷತ್‌ ಸದಸ್ಯೆ ಕೂಡ ಆಗಿದ್ದರು. ಕವಿ, ಹೋರಾಟಗಾರರಾಗಿಯೂ ಗಮನ ಸೆಳೆದವರು.
icon

(8 / 11)

ಮೋಟಮ್ಮ ಕೂಡ ಕಾಂಗ್ರೆಸ್‌ ನಾಯಕಿ. ಮೂರು ಬಾರಿ ವಿಧಾನಸಭೆ ಸದಸ್ಯರಾಗಿ ಸಚಿವೆಯಾಗಿಯೂ ದುಡಿದವರು. ಆನಂತರ ವಿಧಾನಪರಿಷತ್‌ ಸದಸ್ಯೆಯಾದವರು.
icon

(9 / 11)

ಗಟ್ಟಿ ಧ್ವನಿಯ ತಾರಾದೇವಿ ಸಿದ್ದಾರ್ಥ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದವರು. ಕಾಫಿ ಬೆಳೆಗಾರರಿಗೆ ಸಂಬಂಧಿಸಿದಂತೆ ಗಟ್ಟಿ ದನಿ ತೋರಿದವರು.
icon

(10 / 11)

ವಿಜಯಪುರ ಜಿಲ್ಲೆ ದೇಶಮುಖ ಕುಟುಂಬದ ವಿಮಲಾ ಬಾಯಿ ದೇಶಮುಖ ಅವರು ಪತಿ ಜಗದೇವರಾವ್‌ ದೇಶಮುಖ ನಂತರ ಮುದ್ದೆಬಿಹಾಳದಿಂದ ಜನತಾದಳ ಶಾಸಕರಾಗಿದ್ದವರು. ಸಚಿವರಾಗಿಯೂ ಕೆಲಸ ಮಾಡಿದವರು.
icon

(11 / 11)

ಇತರ ಗ್ಯಾಲರಿಗಳು