Bangalore Cauvery aarti: ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಮೊದಲ ಬಾರಿಗೆ ಕಾವೇರಿ ಆರತಿ, ಹೀಗಿದ್ದವು ಕ್ಷಣಗಳು
- Bangalore Cauvery aarti: ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಕಾವೇರಿ ಆರತಿಯ ಸಂಭ್ರಮದ ಕ್ಷಣಗಳು ಹೀಗಿದ್ದವು.
- Bangalore Cauvery aarti: ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಕಾವೇರಿ ಆರತಿಯ ಸಂಭ್ರಮದ ಕ್ಷಣಗಳು ಹೀಗಿದ್ದವು.
(1 / 6)
ಕರ್ನಾಟಕದಲ್ಲೇ ಮೊದಲ ಬಾರಿಗೆ ನಮ್ಮ ಬೆಂಗಳೂರು 'ಕಾವೇರಿ ಆರತಿ'ಯ ವೈಭವಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನ ಸ್ಯಾಂಕಿ ಕೆರೆ ಶುಕ್ರವಾರ ರಾತ್ರಿ ಬೆಳಕಿನಿಂದ ಕೂಡಿತ್ತು
(2 / 6)
ಕಾವೇರಿ ಆರತಿ ಅಂಗವಾಗಿ ಬೆಂಗಳೂರು ಜಲಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನಗಳು ಗಮನ ಸೆಳೆದವು.
(3 / 6)
ನೀರಿಲ್ಲದೇ ನಾವಿಲ್ಲ. ನೀರೇ ನಾಗರಿಕತೆ- ನೀರಿಂದಲೇ ಧರ್ಮ. ಬರಗಾಲ ಬಂದಾಗ, ಬಾವಿ ಒಣಗಿದಾಗ ನೀರಿನ ಮಹತ್ವ ನಮಗೆ ತಿಳಿಯುತ್ತದೆ. ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬರಬಾರದೆಂದು ಪ್ರಾರ್ಥನೆ ಮಾಡಲು, ದೇಶದ ಇತಿಹಾಸ- ಸಂಸ್ಕೃತಿ ಉಳಿಸಲು ಈ "ಕಾವೇರಿ ಆರತಿ" ಮಾಡಿದ್ದೇವೆ ಎನ್ನುವುದು ಡಿಸಿಎಂ ಡಿಕೆ ಶಿವಕುಮಾರ್ ಅವರ ವಿವರಣೆ.
(5 / 6)
ಕಾವೇರಿ ಆರತಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಐತಿಹ್ಯವಿರುವ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಇಂದು ಕಾವೇರಿ ಮಾತೆಗೆ ಆರತಿ ಬೆಳಗಿ, ಅಲ್ಲಿ ನೆರೆದಿದ್ದವರೊಂದಿಗೆ ಜಲಸಂರಕ್ಷಣೆಯ ಸಂಕಲ್ಪ ಕೈಗೊಂಡೆ. ಸಾರ್ವಜನಿಕರೆಲ್ಲರೂ ಈ ಪ್ರತಿಜ್ಞೆ ಸ್ವೀಕರಿಸಿ, ನೀರಿನ ಸಂರಕ್ಷಣೆಯ ಪಣ ತೊಡಿ ಎಂದು ಕೋರಿದರು.
ಇತರ ಗ್ಯಾಲರಿಗಳು