Siddaramaiah: ಸದನದಲ್ಲಿ ಬಿಜೆಪಿ ಜೆಡಿಎಸ್ ಧರಣಿ ರಾಜಕಾರಣ, ಸಿಎಂ ಸಿದ್ದರಾಮಯ್ಯ ರೋಷದ ಕ್ಷಣ photos
- ಕರ್ನಾಟಕದ ಸದನದಲ್ಲಿ ಕೆಲವು ದಿನಗಳಿಂದ ಮೈಸೂರು ಮುಡಾ ಹಗರಣ, ವಾಲ್ಮೀಕ ಹಗರಣದ ಗದ್ದಲ. ಬಿಜೆಪಿ ಜೆಡಿಎಸ್‌ನಿಂದ ಅಹೋರಾತ್ರಿ ಧರಣಿ. ಇದಕ್ಕೆ ಸಿಎಂ ಸಿದ್ದರಾಮಯ್ಯ( CM Siddaramaiah) ಅವರು ಗುರುವಾರ ಕೊಂಚ ಸಿಟ್ಟಿನಿಂದಲೇ ನೀಡಿದ ಉತ್ತರದ ಕ್ಷಣಗಳು ಹೀಗಿದ್ದವು.

(1 / 7)
ಬೆಂಗಳೂರಿನಲ್ಲಿ ಗುರುವಾರ ನಡೆದ ವಿಧಾನಪರಿಷತ್‌ನ ಅಧಿವೇಶನಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನಿಯಮಾವಳಿಗಳ ಪುಸ್ತಕದ ಹೊತ್ತು ಕಣ್ಣಾಡಿಸಿದರು.
(2 / 7)
ಸದನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಬಾವಿಗೆ ಇಳಿದು ಧರಣಿ ಮಾಡಲು ಮುಂದಾದಾಗ ಈ ವಿಚಾರ ಬಿಟ್ಟು ಇತರೆ ವಿಷಯ ಚರ್ಚಿಸಿ ಎಂದರು ಸಿದ್ದರಾಮಯ್ಯ.
(3 / 7)
ಈ ವೇಳೆ ಉತ್ತರ ನೀಡಿದ ಸಿದ್ದರಾಮಯ್ಯ, ಯಾವುದೇ ವಿಷಯವನ್ನು ಸದನದಲ್ಲಿ ಚರ್ಚಿಸಲು ಅಡ್ಡಿಯಿಲ್ಲ. ಆದರೆ ಅದಕ್ಕೆ ನಿಯಮಗಳಿವೆ. ಆ ಪ್ರಕಾರ ಅನುಮತಿ ಪಡೆದು ಚರ್ಚಿಸಬಹುದು ಎಂದರು.
(4 / 7)
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಹಣಕಾಸು ದುರುಪಯೋಗ ವಿಚಾರದಲ್ಲಿ ಈಗಾಗಲೇ ತನಿಖೆಗಳು ಬೇರೆ ಬೇರೆ ತನಿಖಾ ಸಂಸ್ಥೆಯಿಂದ ನಡೆದಿವೆ. ವರದಿ ಬರಲಿ ಎಂದರು ಸಿದ್ದರಾಮಯ್ಯ
(5 / 7)
ಬಿಜೆಪಿ ಜೆಡಿಎಸ್‌ನವರು ಇದನ್ನೇ ದೊಡ್ಡದು ಮಾಡಿಕೊಂಡು ಸದನದ ಸಮಯವನ್ನು ಹಾಳು ಮಾಡುವುದು ಎಷ್ಟು ಸರಿ ಎಂದು ಕಾರವಾಗಿಯೇ ಪ್ರಶ್ನೆ ಮಾಡಿದರು ಸಿದ್ದರಾಮಯ್ಯ.
(6 / 7)
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿವೇಶನದ ವಿಚಾರವಾಗಿಯೂ ಬಿಜೆಪಿ ಜೆಡಿಎಸ್ ಗೊಂದಲ ಹುಟ್ಟು ಹಾಕಿವೆ. ತಾವೇ ರೂಪಿಸಿದ್ದ ನಿಯಮದಡಿ ಜಮೀನು ನೀಡಿದ್ದರೂ ದೊಡ್ಡದು ಮಾಡಿ ಹಗರಣ ಎಂದು ಬಿಂಬಿಸುವುದು ಎಷ್ಟು ಸರಿ ಎಂದರು ಸಿದ್ದರಾಮಯ್ಯ.
ಇತರ ಗ್ಯಾಲರಿಗಳು