ಬೆಂಗಳೂರು ಸೀರೆ ಉತ್ಸವ ಇನ್ನೆರಡು ದಿನ, ಭಾರತದ ಕೈಮಗ್ಗ ಪರಂಪರೆಯ ವೈಭವ ಪ್ರದರ್ಶನ, ಮಾರಾಟ - ಆಕರ್ಷಕ ಚಿತ್ರನೋಟ
ಬೆಂಗಳೂರಿನ ಶುಭ ಕನ್ವೆನ್ಶನ್ ಸೆಂಟರ್‌ನಲ್ಲಿ ಬೆಂಗಳೂರು ಸೀರೆ ಉತ್ಸವ ನಡೆಯುತ್ತಿದ್ದು, ಇನ್ನೆರಡು ದಿನ ಬಾಕಿದೆ. ಒಂದು ವಾರದ ಬೆಂಗಳೂರು ಸೀರೆ ಉತ್ಸವವು ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಲು ಮತ್ತು ಕುಶಲಕರ್ಮಿಗಳು ತಮ್ಮ ಕರಕುಶಲತೆ ಪ್ರದರ್ಶನದ ವೇದಿಕೆಯಾಗಿ ಕಂಡುಬಂದಿದೆ. ಇಲ್ಲಿದೆ ಆಕರ್ಷಕ ಚಿತ್ರನೋಟ.
(1 / 8)
ಬೆಂಗಳೂರಿನ ಜೆಪಿ ನಗರದಲ್ಲಿರುವ ಶುಭ ಕನ್ವೆನ್ಶನ್ ಸೆಂಟರ್‌ನಲ್ಲಿ ಬೆಂಗಳೂರು ಸೀರೆ ಉತ್ಸವ 2025 ನಡೆಯುತ್ತಿದ್ದು, ಮಾರ್ಚ್ 20ಕ್ಕೆ ಕೊನೆಗೊಳ್ಳಲಿದೆ. ಈ ಉತ್ಸವವು ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಲು ಮತ್ತು ಕುಶಲಕರ್ಮಿಗಳು ತಮ್ಮ ಕರಕುಶಲತೆಯ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ನೀಡಿದೆ.
(2 / 8)
ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಒಕ್ಕೂಟ ಲಿಮಿಟೆಡ್‌ನ ಅಧ್ಯಕ್ಷ ಬಿ.ಜೆ. ಗಣೇಶ್ ಬೆಂಗಳೂರು ಸೀರೆ ಉತ್ಸವಕ್ಕೆ ಮಾರ್ಚ್ 14 ರಂದು ಚಾಲನೆ ನೀಡಿದರು. ನವದೆಹಲಿಯ ರಾಷ್ಟ್ರೀಯ ವಿನ್ಯಾಸ ಕೇಂದ್ರ (ಎನ್‌ಡಿಸಿ) ಮತ್ತು ಜವಳಿ ಸಚಿವಾಲಯದ (ಕೈಮಗ್ಗಗಳು) ಸಹಯೋಗದಲ್ಲಿ ಈ ಉತ್ಸವ ನಡೆಯುತ್ತಿದೆ.
(3 / 8)
ಬೆಂಗಳೂರು ಸೀರೆ ಉತ್ಸವ 2025 ಮಾರ್ಚ್ 14ಕ್ಕೆ ಶುರುವಾಗಿದ್ದು, ಮಾರ್ಚ್ 20, 2025 ರ ವರೆಗೆ ನಡೆಯಲಿದೆ. ಜೆಪಿ ನಗರದ ಶುಭ್ ಕನ್ವೆನ್ಷನ್ ಸೆಂಟರ್‌ನಲ್ಲಿ ಪ್ರತಿದಿನ ಬೆಳಿಗ್ಗೆ 11:00ರಿಂದ ರಾತ್ರಿ 8:00 ಗಂಟೆಯವರೆಗೆ ಕೈಮಗ್ಗ ಸೀರೆಗಳ ಪ್ರದರ್ಶನ ಮಾರಾಟ ನಡೆಯುತ್ತಿದೆ.
(4 / 8)
"ಕೈಮಗ್ಗ ನೇಯ್ಗೆ ಕೇವಲ ಒಂದು ಕಲೆಯಲ್ಲ, ಬದಲಾಗಿ ಪೀಳಿಗೆಯಿಂದ ಪೀಳಿಗೆಗೆ ಬಂದ ಪರಂಪರೆಯಾಗಿದೆ. ಈ ಉತ್ಸವವು ನಮ್ಮ ನೇಕಾರರ ಸಮರ್ಪಣೆಗೆ ಗೌರವವಾಗಿದೆ. ಅಧಿಕೃತ ಕೈಮಗ್ಗ ಉತ್ಪನ್ನಗಳನ್ನು ಆಯ್ಕೆ ಮಾಡುವ ವಿಧಾನ ಮೂಲಕ ಅವರ ಕರಕುಶಲತೆಯನ್ನು ಬೆಂಬಲಿಸಿ ಶ್ ಮತ್ತು ಪ್ರಶಂಸಿಸಲು ನಾನು ಪ್ರತಿಯೊಬ್ಬರನ್ನು ಕೋರುತ್ತೇನೆ" ಎಂದು ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಒಕ್ಕೂಟ ಲಿಮಿಟೆಡ್‌ನ ಅಧ್ಯಕ್ಷ ಬಿ.ಜೆ. ಗಣೇಶ್ ಹೇಳಿದರು.
(5 / 8)
ಕರ್ನಾಟಕದ ಕೈಮಗ್ಗದ ಮಳಿಗೆಯಲ್ಲಿ ಉತ್ಪನ್ನವನ್ನು ಪ್ರದರ್ಶಿಸಿದ ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಒಕ್ಕೂಟ ಲಿಮಿಟೆಡ್‌ನ ಅಧ್ಯಕ್ಷ ಬಿ.ಜೆ. ಗಣೇಶ್.
(6 / 8)
ಸೀರೆ ಉತ್ಸವದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಜಾರ್ಖಂಡ್, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಮತ್ತು ಬಿಹಾರ ಸೇರಿದಂತೆ ಭಾರತ(ಕೈಮಗ್ಗ)ದ ಪ್ರಮುಖ ರಾಜ್ಯಗಳ 50ಕ್ಕೂ ಹೆಚ್ಚು ಅನನ್ಯ ಕೈಮಗ್ಗ ಸೀರೆ ಬಣವೆಗಳ ಪ್ರದರ್ಶನ ಮತ್ತು ಮಾರಾಟ ನಡೆದಿದೆ.
(7 / 8)
ಬೆಂಗಳೂರು ಸೀರೆ ಉತ್ಸವದಲ್ಲಿ 75ಕ್ಕೂ ಹೆಚ್ಚು ಪರಿಪೂರ್ಣ ಕರಕುಶಲ ವಸ್ತ್ರ ಬಣ್ಣಗಾರರು, ಸ್ವಸಹಾಯ ಗುಂಪುಗಳು (SHGs) ಮತ್ತು ಸಹಕಾರಿ ಸಂಘಗಳು ಭಾಗವಹಿಸುತ್ತಿದ್ದು, ವೀಕ್ಷಕರಿಗೆ ನೇರವಾಗಿ ಬಟ್ಟೆ ಖರೀದಿಸಲು ಅಪರೂಪದ ಅವಕಾಶ ಕಲ್ಪಿಸಿದೆ.
(8 / 8)
ಕೈಮಗ್ಗ ಪ್ರದರ್ಶನವು ನೇಕಾರರು ಮತ್ತು ಖರೀದಿದಾರರ ನಡುವೆ ನೇರ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ, ನ್ಯಾಯಯುತ ವ್ಯಾಪಾರ ಮತ್ತು ಭಾರತದ ಸಾಂಪ್ರದಾಯಿಕ ಜವಳಿಗಳಿಗೆ ವ್ಯಾಪಕ ಮನ್ನಣೆಯನ್ನು ಒದಗಿಸುತ್ತದೆ. ಈ ವಿಶೇಷ ಕಾರ್ಯಕ್ರಮ ಸೀರೆ ಪ್ರಿಯರು, ವಿನ್ಯಾಸಕರು ಮತ್ತು ಉದ್ಯಮ ವೃತ್ತಿಪರರು ಸೇರಿದಂತೆ ಸಾವಿರಾರು ಸಂದರ್ಶಕರನ್ನು ಆಕರ್ಷಿಸುವ ನಿರೀಕ್ಷೆಯಿದೆ, ಇದು ಬೆಂಗಳೂರಿನ ಸಾಂಸ್ಕೃತಿಕ ಮತ್ತು ಜವಳಿ ಕೇಂದ್ರದ ಸ್ಥಾನಮಾನವನ್ನು ಬಲಪಡಿಸುತ್ತದೆ ಎಂದು ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಒಕ್ಕೂಟ ಲಿಮಿಟೆಡ್‌ನ ಅಧ್ಯಕ್ಷ ಬಿ.ಜೆ. ಗಣೇಶ್ ಹೇಳಿದರು.
ಇತರ ಗ್ಯಾಲರಿಗಳು