ಭಾರತ vs ಸೌತ್ ಆಫ್ರಿಕಾ ಫೈನಲ್ ಪಂದ್ಯಕ್ಕಿದೆ ಗುಡುಗು ಸಹಿತ ಮಳೆಯ ಆತಂಕ; ಇಲ್ಲಿದೆ ಬಾರ್ಬಡೋಸ್ ಹವಾಮಾನ ವರದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ Vs ಸೌತ್ ಆಫ್ರಿಕಾ ಫೈನಲ್ ಪಂದ್ಯಕ್ಕಿದೆ ಗುಡುಗು ಸಹಿತ ಮಳೆಯ ಆತಂಕ; ಇಲ್ಲಿದೆ ಬಾರ್ಬಡೋಸ್ ಹವಾಮಾನ ವರದಿ

ಭಾರತ vs ಸೌತ್ ಆಫ್ರಿಕಾ ಫೈನಲ್ ಪಂದ್ಯಕ್ಕಿದೆ ಗುಡುಗು ಸಹಿತ ಮಳೆಯ ಆತಂಕ; ಇಲ್ಲಿದೆ ಬಾರ್ಬಡೋಸ್ ಹವಾಮಾನ ವರದಿ

  • Barbados Weather Forecast: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ 2024 ಫೈನಲ್ ಪಂದ್ಯಕ್ಕೂ ಮುನ್ನ ಎಲ್ಲರ ಕಣ್ಣು ಹವಾಮಾನದ ಮೇಲೆ ನೆಟ್ಟಿದೆ. ಈ ಪಂದ್ಯಕ್ಕೆ ಶೇ 70ರಷ್ಟು ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.

ಗಯಾನಾದಲ್ಲಿ ಜೂನ್ 28ರ ಗುರುವಾರ ನಡೆದ ಭಾರತ vs ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ 2024ರ 2ನೇ ಸೆಮಿಫೈನಲ್​ಗೆ ಮಳೆ ಅಡ್ಡಿಪಡಿಸಿತು. ಮಳೆಯಿಂದಾಗಿ ಪಂದ್ಯವು ನಿಗದಿತ ಸಮಯಕ್ಕಿಂತ ತಡವಾಗಿ ಪ್ರಾರಂಭವಾಯಿತು. ಇದೀಗ ಫೈನಲ್ ಪಂದ್ಯ ಜೂನ್ 29ರಂದು ಬಾರ್ಬಡೋಸ್​​ನಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ,
icon

(1 / 6)

ಫೈನಲ್​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಾಟ ನಡೆಸಲಿವೆ. ಟ್ರಿನಿಡಾಡ್​​ನಲ್ಲಿ ನಡೆದ ಮೊದಲ ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡವನ್ನು 9 ವಿಕೆಟ್​​ಗಳಿಂದ ಸೋಲಿಸಿತ್ತು. ಭಾರತ, ಇಂಗ್ಲೆಂಡ್ ತಂಡವನ್ನು 68 ರನ್ನಿಂದ ಸೋಲಿಸಿ ಫೈನಲ್​ಗೇರಿದೆ.
icon

(2 / 6)

ಮೆಗಾ ಟೂರ್ನಿಯ ಫೈನಲ್​​ಗೂ ಮುನ್ನ ಎಲ್ಲರ ಕಣ್ಣು ಹವಾಮಾನ ಮೇಲೆ ನೆಟ್ಟಿದೆ. ಏಕೆಂದರೆ ವೆಸ್ಟ್ ಇಂಡೀಸ್​ನಲ್ಲಿ ಪ್ರಸ್ತುತ ಮಳೆಗಾಲ. ಹೀಗಾಗಿ ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಮಳೆಯಾಗುವ ಸಾಧ್ಯತೆಯಿದೆ. ಫೈನಲ್ ಪಂದ್ಯಕ್ಕೆ ಮೀಸಲು ದಿನವಿದ್ದರೂ, ಬಾರ್ಬಡೋಸ್​ನ ಬ್ರಿಡ್ಜ್​ಟೌನ್​​ನಲ್ಲಿ ಶನಿವಾರ ಮತ್ತು ಭಾನುವಾರ ಹವಾಮಾನ ಹೇಗಿರಲಿದೆ? ಇಲ್ಲಿದೆ ವಿವರ.
icon

(3 / 6)

accuweather.com ಪ್ರಕಾರ, ಶನಿವಾರ (ಜೂನ್ 29) ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಶೇ.70ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಶೇ.99ರಷ್ಟು ಮೋಡ ಕವಿದ ವಾತಾವರಣವಿರಲಿದೆ.
icon

(4 / 6)

ಮೀಸಲು ದಿನವಾದ ಭಾನುವಾರ (ಜೂನ್ 30), ಹೆಚ್ಚಾಗಿ ಮೋಡ ಕವಿದ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ. ಬೆಳಿಗ್ಗೆ ಗಾಳಿಯ ವೇಗ ಹೆಚ್ಚಿರಲಿದ್ದು, ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
icon

(5 / 6)

ಮಳೆಯಿಂದಾಗಿ ಎರಡೂ ದಿನಗಳಲ್ಲಿ ಆಟಕ್ಕೆ 190 ನಿಮಿಷಗಳ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಅಂತಿಮ ಪಂದ್ಯವು ಮಳೆಯಿಂದಾಗಿ ಅಂತಿಮವಾಗಿ ರದ್ದಾದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡನ್ನೂ ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
icon

(6 / 6)

ಇತರ ಗ್ಯಾಲರಿಗಳು