ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದ್ದ ಮಲಯಾಳಂನ ಸೀರಿಯಲ್‌ ಕಿಲ್ಲರ್‌ ಕಥೆಯಾಧಾರಿತ ಹಾಸ್ಯ ಚಿತ್ರ ಒಟಿಟಿಗೆ ಎಂಟ್ರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದ್ದ ಮಲಯಾಳಂನ ಸೀರಿಯಲ್‌ ಕಿಲ್ಲರ್‌ ಕಥೆಯಾಧಾರಿತ ಹಾಸ್ಯ ಚಿತ್ರ ಒಟಿಟಿಗೆ ಎಂಟ್ರಿ

ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದ್ದ ಮಲಯಾಳಂನ ಸೀರಿಯಲ್‌ ಕಿಲ್ಲರ್‌ ಕಥೆಯಾಧಾರಿತ ಹಾಸ್ಯ ಚಿತ್ರ ಒಟಿಟಿಗೆ ಎಂಟ್ರಿ

ಮಲಯಾಳಂನ ಸ್ಟಾರ್ ನಟ ಬಾಸಿಲ್ ಜೋಸೆಫ್ ಅಭಿನಯದ ʻಮರಣಮಾಸ್ʼ ಚಿತ್ರ ಏಪ್ರಿಲ 10ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಈಗ ಇದೇ ಸಿನಿಮಾ ಒಟಿಟಿಗೆ ಬಂದಿದೆ. ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ, ಬುಧವಾರ (ಮೇ 14) ಮಧ್ಯಾಹ್ನ 3 ಗಂಟೆಯಿಂದ ಸ್ಟ್ರೀಮಿಂಗ್ ಆರಂಭಿಸಿದೆ. ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು.

ಈ ವರ್ಷ ಮಲಯಾಳಂ ಚಿತ್ರರಂಗದಲ್ಲಿ ಸದ್ದು ಮಾಡಿದ, ಟಾಪ್ 10 ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾಗಳಲ್ಲಿ ʻಮರಣಮಾಸ್ʼ ಸಿನಿಮಾ ಸಹ ಒಂದು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 19.5 ಕೋಟಿ ಕಲೆಕ್ಷನ್‌ ಮಾಡಿ ಸೂಪರ್ ಹಿಟ್ ಆಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದರೂ, ಹಿಟ್‌ ಪಟ್ಟ ಪಡೆದಿದೆ. ಐಎಂಡಿಬಿಯಲ್ಲಿಯೂ ಈ ಸಿನಿಮಾಕ್ಕೆ 8 ರೇಟಿಂಗ್ ಸಿಕ್ಕಿದೆ. ಇದೀಗ ಈ ಸಿನಿಮಾ ಇಂದು (ಮೇ 14) ಮಧ್ಯಾಹ್ನದಿಂದ ಸೋನಿಲಿವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
icon

(1 / 5)

(IMDb)

“ದಿ ಮ್ಯಾನ್, ದಿ ಮ್ಯಾಡ್‌ನೆಸ್, ದಿ ಮಾಸ್.. ಲೂಕ್ ಬಂದಿದ್ದಾನೆ” ಎಂಬ ಕ್ಯಾಪ್ಷನ್‌ ನೀಡಿ ಸೋನಿಲಿವ್ ಒಟಿಟಿ ಚಿತ್ರದ ಸ್ಟ್ರೀಮಿಂಗ್ ಬಗ್ಗೆ ಪೋಸ್ಟ್‌ ಹಂಚಿಕೊಂಡಿದೆ. ಅಷ್ಟಕ್ಕೂ ಗುರುವಾರದಿಂದ (ಮೇ 15) ಈ ಸಿನಿಮಾ ಒಟಿಟಿ ಸ್ಟ್ರೀಮಿಂಗ್ ಆರಂಭಿಸಲಿದೆ ಎಂದು ಹೇಳಲಾಗಿತ್ತು. ಇದೀಗ ಒಂದು ದಿನಕ್ಕೂ ಮೊದಲೇ ಪ್ರಸಾರ ಆರಂಭಿಸಿದೆ.
icon

(2 / 5)

ʻಮರಣಮಾಸ್ʼ ಚಿತ್ರವನ್ನು ಶಿವಪ್ರಸಾದ್ ನಿರ್ದೇಶಿಸಿದ್ದಾರೆ. ಮಲಯಾಳಂ ನಟ ಟೊವಿನೋ ಥಾಮಸ್ ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಇದರಲ್ಲಿ ಬಾಸಿಲ್ ಜೋಸೆಫ್ ಮುಖ್ಯ ಪಾತ್ರದಲ್ಲಿದ್ದಾರೆ. ಅವರೊಂದಿಗೆ ರಾಜೇಶ್ ಮಾಧವನ್, ಸಿಜು ಸನ್ನಿ, ಬಾಬು ಆಂಟೋನಿ, ಅನಿಷ್ಮ ಅನಿಲ್ ಕುಮಾರ್, ಸುರೇಶ್ ಕೃಷ್ಣ ನಟಿಸಿದ್ದಾರೆ.
icon

(3 / 5)

ʻಮರಣಮಾಸ್ʼ ಚಿತ್ರವು ಸೀರಿಯಲ್ ಕಿಲ್ಲರ್‌ವೊಬ್ಬನ ಸುತ್ತ ಸುತ್ತುತ್ತದೆ. ಆ ಕಿಲ್ಲರ್‌ ಒಂದು ಸಿಟಿಯನ್ನೇ ನಡುಗುವಂತೆ ಮಾಡುತ್ತಾನೆ. ಅಚಾನಕ್ಕಾಗಿ ಬಸ್‌ನಲ್ಲಿ ಪ್ರಯಾಣಿಸುವಾಗ ತನ್ನ ಇಡೀ ಗ್ಯಾಂಗ್‌ ಜೊತೆಗೆ ಪೊಲೀಸ್‌ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅಲ್ಲಿಂದ ನಂತರದ ಕಥೆ ಹೇಗೆ ಸಾಗುತ್ತದೆ, ಅನಿರೀಕ್ಷಿತ ಕ್ಲೈಮ್ಯಾಕ್ಸ್ ಹೇಗೆ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸುತ್ತದೆ ಎಂಬುದೇ ಈ ಸಿನಿಮಾದ ಹೈಲೈಟ್‌.
icon

(4 / 5)

ʻಮರಣಮಾಸ್ʼ ಚಿತ್ರ ಮಲಯಾಳಂ ಜೊತೆಗೆ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಸೋನಿಲಿವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
icon

(5 / 5)

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು