BBK 11: ಬಿಗ್‌ಬಾಸ್ ಮನೆಯಲ್ಲಿ ಜಿಂಕೆಯಾದ ಧನರಾಜ್! ಅಷ್ಟಕ್ಕೂ ಬಿಗ್‌ಬಾಸ್ ಕೊಟ್ಟ ಟಾಸ್ಕ್ ಏನು ನೋಡಿ
- ಧನರಾಜ್ ಆಚಾರ್ ಅವರು ಬಿಗ್‌ಬಾಸ್ ಮನೆಗೆ ಹೋದಾಗಿನಿಂದಲೂ ಒಂದು ರೀತಿ ಗೊಂದಲದಲ್ಲೇ ಇದ್ದಾರೆ. ಅವರನ್ನು ಬಿಗ್‌ಬಾಸ್ ಕೂಡ ಇನ್ನಷ್ಟು ಆಟ ಆಡಿಸುತ್ತಾ ಇದ್ದಾರೆ. ನೀವು ಜಿಂಕೆಯಾಗಬೇಕು ಎಂದು ಬಿಗ್‌ಬಾಸ್ ಧನರಾಜ್‌ಗೆ ತಿಳಿಸಿದ್ದಾರೆ.
- ಧನರಾಜ್ ಆಚಾರ್ ಅವರು ಬಿಗ್‌ಬಾಸ್ ಮನೆಗೆ ಹೋದಾಗಿನಿಂದಲೂ ಒಂದು ರೀತಿ ಗೊಂದಲದಲ್ಲೇ ಇದ್ದಾರೆ. ಅವರನ್ನು ಬಿಗ್‌ಬಾಸ್ ಕೂಡ ಇನ್ನಷ್ಟು ಆಟ ಆಡಿಸುತ್ತಾ ಇದ್ದಾರೆ. ನೀವು ಜಿಂಕೆಯಾಗಬೇಕು ಎಂದು ಬಿಗ್‌ಬಾಸ್ ಧನರಾಜ್‌ಗೆ ತಿಳಿಸಿದ್ದಾರೆ.
(1 / 7)
ಬಿಗ್‌ಬಾಸ್ ಸೀಸನ್ 11ರ ಆಟದ ಕಾವು ಈಗಷ್ಟೇ ಆರಂಭವಾಗಿದೆ. ಒಬ್ಬರಿಗೊಬ್ಬರು ಸರಿಯಾಗಿ ಅರ್ಥ ಆಗುವ ಮೊದಲೇ ಜಗಳಗಳು ಆರಂಭವಾಗಿದೆ. ಇನ್ನು ಧನರಾಜ್ ಅವರಿಗೆ ಬಿಗ್‌ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. (Facebook\ Colors Kannada)
(2 / 7)
ಧನರಾಜ್ ಅವರನ್ನು ಕನ್ಫೆಷನ್ ರೂಮ್‌ಗೆ ಕರೆಯಲಾಗುತ್ತದೆ. ಆಗ ಅವರು ಅಲ್ಲಿಗೆ ಹೋಗಿ ಕುಳಿತುಕೊಂಡಾಗ, ಬಿಗ್‌ಬಾಸ್ ಮಾತನಾಡುತ್ತಾರೆ. ಆಗ ಧನರಾಜ್ “ನಿಮ್ಮ ಮಾತು ಕೇಳಿಸುತ್ತಿಲ್ಲ ಬಿಗ್‌ಬಾಸ್” ಎಂದು ಹೇಳುತ್ತಾರೆ. (Facebook\ Colors Kannada)
(3 / 7)
ಆ ರೀತಿ ಹೇಳಿದ್ದಕ್ಕಾಗಿ ಬಿಗ್‌ಬಾಸ್ ಹೇಳುತ್ತಾರೆ, ನೀವೇ ನನಗೆ ಮೊದಲು ಮೈಕ್ ಸರಿಯಾಗಿ ಹಾಕಿಕೊಳ್ಳಿ ಎಂದು ಹೇಳಿದ ಮೊದಲ ವ್ಯಕ್ತಿ ಎಂದು. ಆಗ ಧನರಾಜ್ ಅವರಿಗೆ ತಾನು ಏನು ಹೇಳಬೇಕು ಎಂದು ತಿಳಿಯುವುದಿಲ್ಲ. ((Facebook\ Colors Kannada))
(4 / 7)
ನಾನು ಹೇಳಿದ್ದು ಸರಿಯೋ? ಅಥವಾ ತಪ್ಪೋ? ಎಂದೂ ಸಹ ಅವರಿಗೆ ಅರ್ಥ ಆಗುವುದಿಲ್ಲ. ನಂತರ ನೀವು ಇನ್ನು ಮುಂದೆ ಸುದೀಪ್ ಅವರು ಹೇಳಿದ ರೀತಿಯಲ್ಲೇ ಇರಬೇಕು ಎಂದು ಹೇಳುತ್ತಾರೆ. (Facebook\ Colors Kannada)
(5 / 7)
ಜಿಂಕೆಯ ರೀತಿ ನೀವು ಈ ಮನೆಯಲ್ಲಿ ನಡೆದುಕೊಂಡು ಓಡಾಡಬೇಕು. ನಿಮ್ಮ ವರ್ತನೆ ಜಿಂಕೆ ರೀತಿ ಇರಬೇಕು ಎಂದು ಹೇಳಲಾಗುತ್ತದೆ. ಆಗ ಧನರಾಜ್ ಓಕೆ ಎಂದು ಹೇಳಿ ಹೊರಗಡೆ ಜಿಗಿಯುತ್ತಾ ನಡೆಯುತ್ತಾರೆ. (Facebook\ Colors Kannada)
(6 / 7)
ಇವರು ಈ ರೀತಿ ಜಿಗಿಯುತ್ತಾ ಬರುವುದನ್ನು ನೋಡಿ ಮನೆಯಲ್ಲಿ ಎಲ್ಲರಿಗೂ ನಗು ಆರಂಭವಾಗುತ್ತದೆ. ಏನಿದು? ಇವರು ಯಾಕೆ ಈ ರೀತಿ ಮಾಡ್ತಾ ಇದ್ದಾರೆ ಧನರಾಜ್ ಎಂದು ಎಲ್ಲರಿಗೂ ಅನಿಸುತ್ತದೆ. (Facebook\ Colors Kannada)
ಇತರ ಗ್ಯಾಲರಿಗಳು