ಬೆಂಗಳೂರಿಗರೇ, ಈ ಸಲದ ಬಿಬಿಎಂಪಿ ಬಜೆಟ್‌ನಲ್ಲಿ ಏನಿರಬೇಕು; ಸಲಹೆ ಸೂಚನೆಗಳನ್ನು ಸಲ್ಲಿಸಲು ಹೀಗೆ ಮಾಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರಿಗರೇ, ಈ ಸಲದ ಬಿಬಿಎಂಪಿ ಬಜೆಟ್‌ನಲ್ಲಿ ಏನಿರಬೇಕು; ಸಲಹೆ ಸೂಚನೆಗಳನ್ನು ಸಲ್ಲಿಸಲು ಹೀಗೆ ಮಾಡಿ

ಬೆಂಗಳೂರಿಗರೇ, ಈ ಸಲದ ಬಿಬಿಎಂಪಿ ಬಜೆಟ್‌ನಲ್ಲಿ ಏನಿರಬೇಕು; ಸಲಹೆ ಸೂಚನೆಗಳನ್ನು ಸಲ್ಲಿಸಲು ಹೀಗೆ ಮಾಡಿ

BBMP Budget 2025-26: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಸಲದ ಬಜೆಟ್‌ ಮಂಡನೆಗೆ ಸಿದ್ದತೆ ಶುರುಮಾಡಿದೆ. ಹೀಗಾಗಿ, ಬಿಬಿಎಂಪಿಯ 2025-26ನೇ ಸಾಲಿನ ಆಯವ್ಯಯಕ್ಕೆ ಸಾರ್ವಜನಿಕರಿಂದ ಸಲಹೆ/ಸೂಚನೆಗಳನ್ನು ಸಲ್ಲಿಸುವುದಕ್ಕೆ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ಈ ಸಲದ ಬಿಬಿಎಂಪಿ ಬಜೆಟ್‌ನಲ್ಲಿ ಏನಿರಬೇಕು ಎಂಬ ಬಗ್ಗೆ ಸಲಹೆ ಸೂಚನೆಗಳನ್ನು ಸಲ್ಲಿಸಲು ಹೀಗೆ ಮಾಡಿ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಕರಡು ಆಯವ್ಯಯದ ತಯಾರಿಕೆಯ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದೆ. ಈ ಸಲದ ಬಜೆಟ್‌ನಲ್ಲಿ ಏನಿರಬೇಕು ಎಂಬುದರ ಬಗ್ಗೆ ಸಲಹೆ ಸೂಚನೆ ನೀಡಲು ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ.
icon

(1 / 8)

ಸಾರ್ವಜನಿಕ ಸಹಭಾಗಿತ್ವಕ್ಕೆ ಪೂರಕವಾಗಿ ಬಿಬಿಎಂಪಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ಅತ್ಯಮೂಲ್ಯವಾದ ಸಲಹೆಗಳನ್ನು ಸ್ವೀಕರಿಸಲು ಮುಂದಾಗಿರುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
icon

(2 / 8)

ಸಾರ್ವನಿಕರಿಗೆ ಸಲಹೆ ಸೂಚನೆ ಸಲ್ಲಿಸಲು ಫೆ.10ರ ತನಕ ಕಾಲಾವಕಾಶ ನೀಡಲಾಗಿದೆ. ಇದಕ್ಕಾಗಿ ಪಾಲಿಕೆ ಕಚೇರಿ ಎದುರು ಸಲಹೆ/ ಸೂಚನೆ ಪೆಟ್ಟಿಗೆಯನ್ನು ಇರಿಸಲಾಗಿದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್ ರವರು ತಿಳಿಸಿದ್ದಾರೆ.
icon

(3 / 8)

ನಗರದ ಎಲ್ಲಾ ನಾಗರೀಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(RWAs) ಹಾಗೂ ಸಂಘ-ಸಂಸ್ಥೆಗಳು ತಮ್ಮ ಸಲಹೆ/ಸೂಚನೆಗಳನ್ನು ಪಾಲಿಕೆಗೆ ಸಲ್ಲಿಸಲು ಅನುಕೂಲವಾಗುವಂತೆ ಪಾಲಿಕೆ ಕೇಂದ್ರ ಕಚೇರಿಯ ಮುಖ್ಯ ದ್ವಾರದ ಬಳಿ ಸಲಹಾ ಪೆಟ್ಟಿಗೆ(ಬಾಕ್ಸ್) ಅನ್ನು ಇರಿಸಿದ್ದು, ಆ ಸಲಹಾ ಪೆಟ್ಟಿಗೆಯ ಮೂಲಕ ಸಲಹೆಗಳನ್ನು ಬರೆದು ಹಾಕಬಹುದು.
icon

(4 / 8)

ಪಾಲಿಕೆಯ 2025-26ನೇ ಸಾಲಿನ ಕರಡು ಆಯವ್ಯಯಕ್ಕಾಗಿ ನಗರದ ಎಲ್ಲಾ ನಾಗರೀಕರು, ಸಂಘ-ಸಂಸ್ಥೆಗಳು ತಮ್ಮ ಅತ್ಯಮೂಲ್ಯ ಸಲಹೆ/ಸೂಚನೆಗಳನ್ನು bbmpbudget@gmail.com ಇ-ಮೇಲ್  ಮೂಲಕವೂ ಸಲ್ಲಿಸಬಹುದಾಗಿದೆ. 
icon

(5 / 8)

ಬಿಬಿಎಂಪಿ ಬಜೆಟ್‌ನಲ್ಲಿ ಸೇರ್ಪಡೆಗೊಳಿಸಲು ಅಂದರೆ ಸಮರ್ಪಕವಾಗಿ ಅನುಷ್ಠಾನಗೊಳಿಸುವುದಕ್ಕೆ ಯೋಗ್ಯವಾದ ಸಲಹೆ, ಸೂಚನೆಗಳನ್ನು ನೀಡುವುದು ಒಳಿತು. ಮೂಲಸೌಕರ್ಯಗಳಿಗೆ ಸಂಬಂಧಿಸಿದವುಗಳಿಗೆ, ಜನ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ಸಲಹೆ ಸೂಚನೆಗಳಿದ್ದರೆ ಹೆಚ್ಚು ಪ್ರಯೋಜನಕಾರಿ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
icon

(6 / 8)

ಬಿಬಿಎಂಪಿ ಅಧಿಕಾರಿಗಳು ಈ ಸಲಹೆ, ಸೂಚನೆಗಳನ್ನು ಪರಿಶೀಲಿಸಿ, ಅನುಷ್ಠಾನ ಯೋಗ್ಯ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. 
icon

(7 / 8)

ಈ ನಿಟ್ಟಿನಲ್ಲಿ ಬಿಬಿಎಂಪಿ ಆಯವ್ಯಯಕ್ಕಾಗಿ ಸಲಹೆಗಳನ್ನು ನೀಡಲು ಬಯಸುವವರು ಫೆ 10ರ ಒಳಗಾಗಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ನಾಗರೀಕರು/ಸಂಘ-ಸಂಸ್ಥೆಗಳು ತಮ್ಮ ಅತ್ಯಮೂಲ್ಯವಾದ ಸಲಹೆ/ಸೂಚನೆಗಳನ್ನು ನೀಡುವಂತೆ ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು