ಕನ್ನಡ ಸುದ್ದಿ  /  Photo Gallery  /  Bbmp News: Diabetic Foot Ulcer- Keep Your Foot Safe And Prevent Foolt Ulceration

Diabetic Foot Ulcer: ಮಧುಮೇಹದಿಂದ ಪಾದಗಳನ್ನು ರಕ್ಷಿಸಲು ಬಿಬಿಎಂಪಿಯಿಂದ ಸುರಕ್ಷಿತ ಪಾದಗಳು - ಸುರಕ್ಷಿತ ಸವಾರಿ ಅಭಿಯಾನ | ಚಿತ್ರ ಮಾಹಿತಿ

  • ಮಧುಮೇಹದಿಂದ ಪಾದಗಳು ಅಲ್ಸರ್‌ಗೆ ಈಡಾಗುತ್ತದೆ. ಬೆಂಗಳೂರು ಮಹಾನಗರ ಪಾಲಿಕೆಯು ಇಂದು ದ್ವಿಚಕ್ರ ವಾಹನ ಜಾಥಾ ಮೂಲಕ ಡಯಾಬಿಟಿಕ್‌ ಫೂಟ್‌ ಅಲ್ಸರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದೆ. ಈ ಕುರಿತು ಸಚಿತ್ರ ವರದಿ ಇಲ್ಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಧುಮೇಹದಿಂದ ಅಂಗಚ್ಛೇದನವನ್ನು ತಡೆಗಟ್ಟುವ ಸಲುವಾಗಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಗುಂಪು ಇಂದು "ಸುರಕ್ಷಿತ ಪಾದಗಳು - ಸುರಕ್ಷಿತ ಸವಾರಿ"('Safe Feet - Safe Ride') ಘೋಷವಾಕ್ಯದೊಂದಿಗೆ ದ್ವಿಚಕ್ರ ಸವಾರಿ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ರೆಫರಲ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಅದಕ್ಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿದರು. ಈ ವೇಳೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಬಾಲಸುಂದರ್, ವಿಶೇಷಾಧಿಕಾರಿ ಡಾ. ಭಾಸ್ಕರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
icon

(1 / 6)

ಪ್ರತಿ 20 ಸೆಕೆಂಡ್‌ಗಳಿಗೆ ಮಧುಮೇಹದಿಂದ ಒಂದು ಅಂಗಗಳು ಕಳೆದುಹೋಗುತ್ತದೆ ಮತ್ತು ಸುಮಾರು 200 ಮಿಲಿಯನ್ ಜನರು ತಮ್ಮ ಜೀವಿತಾವಧಿಯಲ್ಲಿ ಮಧುಮೇಹದಿಂದ ಪಾದದಲ್ಲಿ ಹುಣ್ಣನ್ನು ಮಾಡಿಕೊಳ್ಳುತ್ತಾರೆ.
icon

(2 / 6)

ಕರ್ನಾಟಕ ಅಂತಃಸ್ರಾವಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ(KIER), ಕರ್ನಾಟಕ ಸರ್ಕಾರ, ಬಿಬಿಎಂಪಿ, ಭಾರತೀಯ ಪೊಡಿಯಾಟ್ರಿ ಅಸೋಸಿಯೇಷನ್(ಐಪಿಎ), ಆರೋಗ್ಯಸೇವಾ ಮತ್ತು ಫೂಟ್ ಸೆಕ್ಯೂರ್ ಜೊತೆಗೆ "ಸುರಕ್ಷಿತ ಪಾದಗಳು - ಸುರಕ್ಷಿತ ಸವಾರಿ"(ಸೇಫ್ ಫೀಟ್-ಸೇಫ್ ರೈಡ್) ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ದ್ವಿಚಕ್ರ ಸವಾರಿ ನಡೆಸಲಾಗಿದೆ.
icon

(3 / 6)

ಭಾರತದಲ್ಲಿ 2021ರ ಹೊತ್ತಿಗೆ ಸುಮಾರು 74 ಮಿಲಿಯನ್ ಗಿಂತಲೂ ಹೆಚ್ಚು ಮಧುಮೇಹಿಗಳಾಗಿದ್ದಾರೆ ಮತ್ತು ಸುಮಾರು 24 ಮಿಲಿಯನ್ ಜನರು ಪಾದದ ಹುಣ್ಣುಗಳನ್ನು ಹೊಂದಿದ್ದಾರೆ. ಇದು 4 ಮಿಲಿಯನ್ ಅಂಗಚ್ಛೇದನೆಗಳಿಗೆ ಕಾರಣವಾಗುತ್ತದೆ. ಮಧುಮೇಹಿಗಳಲ್ಲಿ ನರರೋಗದ ಪರಿಸ್ಥಿತಿಗಳು ಮೂಲಭೂತ ಕಾರ್ಯಗಳನ್ನು ನಿರ್ವಹಿಸಲು ಅಸಮರ್ಥತೆಗೆ ಕಾರಣವಾಗುತ್ತವೆ. ಪಾದದಲ್ಲಿನ ಸಂವೇದನೆಯ ನಷ್ಟದಿಂದಾಗಿ ಸವಾರಿ ಅಥವಾ ಚಾಲನೆಯ ವೇಳೆ ಅನೇಕ ಅಪಘಾತಗಳಿಗೆ ಕಾರಣವಾಗುತ್ತದೆ.
icon

(4 / 6)

ಆದ್ದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 19 ನವೆಂಬರ್ 2022 ರಂದು ವೈದ್ಯರು, ಆರೋಗ್ಯ ಪಾಲಕರು ಆರೋಗ್ಯ ಕಾರ್ಯಕರ್ತರು ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ರೆಫರಲ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲಾಯಿತು.
icon

(5 / 6)

ದ್ವಿಚಕ್ರ ಸವಾರಿಯ ವಿವರ: ಇಂದಿರಾನಗರದ ಕರ್ನಾಟಕ ಅಂತಃಸ್ರಾವಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ(KIER)ಯಿಂದ ಪ್ರಾರಂಭವಾಗಿ ದೊಮ್ಮಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಹಲಸೂರಿನ ದೊಮ್ಮಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಬಿಎಂಪಿ ಕೇಂದ್ರ ಕಛೇರಿ, ದಾಸಪ್ಪ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಪಿ.ಜಿ.ಹಳ್ಳಿ(ಪ್ಯಾಲೆಸ್ ಗುಟ್ಟಹಳ್ಳಿ) ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 14ನೇ ಕ್ರಾಸ್ ಮಲ್ಲೇಶ್ವರದವರೆಗೆ ಸುಮಾರು 50 ದ್ವಿಚಕ್ರ ವಾಹನಗಳ ಮೂಲಕ ಸವಾರಿ ಮಾಡಿ ನಾಗರಿಕ/ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.ಮಧುಮೇಹದಿಂದ ಪಾದಗಳನ್ನು ರಕ್ಷಿಸಲು ಅಮೂಲ್ಯ ಸಲಹೆಗಳನ್ನು ಈ ಚಿತ್ರದಲ್ಲಿ ನೀಡಲಾಗಿದೆ.
icon

(6 / 6)

IPL_Entry_Point

ಇತರ ಗ್ಯಾಲರಿಗಳು