ಭಾರತದ ಮಹಿಳಾ ಕ್ರಿಕೆಟರ್ಸ್ಗೆ ಶುಭ ಸುದ್ದಿ; ವನಿತೆಯರಿಗೂ ಶುರುವಾಗಲಿದೆ ರಣಜಿ ಟ್ರೋಫಿ ಮಾದರಿಯ ಟೂರ್ನಿ
- Women Ranji Trophy: ಮಹಿಳಾ ಕ್ರಿಕೆಟ್ ಬೆಳೆಸುವ ಮತ್ತು ಉತ್ತೇಜಿಸುವ ಸಲುವಾಗಿ ಮಹಿಳೆಯರಿಗೆ ರಣಜಿ ಟ್ರೋಫಿ ಮಾದರಿಯ ಕೆಂಪು ಚೆಂಡಿನ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ.
- Women Ranji Trophy: ಮಹಿಳಾ ಕ್ರಿಕೆಟ್ ಬೆಳೆಸುವ ಮತ್ತು ಉತ್ತೇಜಿಸುವ ಸಲುವಾಗಿ ಮಹಿಳೆಯರಿಗೆ ರಣಜಿ ಟ್ರೋಫಿ ಮಾದರಿಯ ಕೆಂಪು ಚೆಂಡಿನ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ.
(1 / 7)
ಇತ್ತೀಚೆಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯಗಳಲ್ಲಿ ಅತ್ಯುದ್ಭತ ಪ್ರದರ್ಶನ ನೀಡಿದ ಭಾರತ ವನಿತೆಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕ್ರಿಕೆಟ್ ಪ್ರಿಯರಿಂದಲೂ ಉತ್ತಮ ಬೆಂಬಲವೂ ಸಿಕ್ಕಿದೆ.(BCCI Women-X)
(2 / 7)
ಹಾಗಾಗಿ ಮಹಿಳಾ ಕ್ರಿಕೆಟ್ ಬೆಳೆಸುವ ಮತ್ತು ಉತ್ತೇಜಿಸುವ ಸಲುವಾಗಿ ಮಹಿಳೆಯರಿಗಾಗಿ ರಣಜಿ ಟ್ರೋಫಿ ಮಾದರಿಯ ಕೆಂಪು ಚೆಂಡಿನ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ಮಾಧ್ಯಮಗಳು ವರದಿ ಮಾಡಿದ್ದು, ಖಚಿತ ಮೂಲಗಳನ್ನು ಉಲ್ಲೇಖಿಸಿವೆ.(AP)
(3 / 7)
6 ವರ್ಷಗಳ ಅಂದರೆ 2018ರ ಬಳಿಕ ಮಾರ್ಚ್-ಏಪ್ರಿಲ್ನಲ್ಲಿ ಮಹಿಳೆಯರಿಗೆ ಪ್ರಥಮ ದರ್ಜೆ ಕ್ರಿಕೆಟ್ ಆವೃತ್ತಿಯನ್ನು ಪ್ರಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಫೆಬ್ರವರಿ 22ರಿಂದ ಬೆಂಗಳೂರು ಮತ್ತು ದೆಹಲಿಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್ 2ನೇ ಆವೃತ್ತಿ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಬಳಿಕ ರಣಜಿ ಟ್ರೋಫಿ ಮಾದರಿ ಟೂರ್ನಿ ಆರಂಭಿಸಲು ಸಿದ್ಧತೆ ನಡೆಸಿದೆ.(AFP)
(4 / 7)
ಮಹಿಳೆಯರ ರಣಜಿ ಪಂದ್ಯಗಳು 3 ದಿನಕ್ಕೆ ನಡೆಯಲಿವೆ. ಸಮಯದ ಮಿತಿಯಿಂದ ಆರಂಭದಲ್ಲಿ ವಲಯ ಸ್ವರೂಪದಿಂದ ಆರಂಭಿಸಲು ಚಿಂತಿಸುತ್ತಿದ್ದು, ಟೂರ್ನಿ ಮಾರ್ಚ್-ಏಪ್ರಿಲ್ನಲ್ಲಿ ಅಂತ್ಯಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(BCCI Women-X)
(5 / 7)
ಮಹಿಳೆಯರಿಗೆ ಪ್ರಥಮ ದರ್ಜೆ ಕ್ರಿಕೆಟ್ ಆರಂಭಿಸುವ ಉತ್ತಮ ಸಮಯ ಇದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಹಿಳಾ ಕ್ರಿಕೆಟ್ನಲ್ಲಿ ದೇಶೀಯ ಕ್ರಿಕೆಟ್ ಟೂರ್ನಿ ಬಹಳ ಮುಖ್ಯ ಎಂದು ಭಾರತದ ಮಾಜಿ ಆಟಗಾರ್ತಿ ಡಯಾನಾ ಎಡುಲ್ಜಿ ಹಿಂದೆ ಹೇಳಿದ್ದರು.(BCCI Women-X)
(6 / 7)
ಮಹಿಳಾ ಕ್ರಿಕೆಟ್ ಬೆಳೆಸಲು ಮತ್ತು ಕೌಶಲವನ್ನು ಹೆಚ್ಚಿಸಿಕೊಳ್ಳಲು ದೇಶೀಯ ಕ್ರಿಕೆಟ್ ಬಹಳ ಮುಖ್ಯ. ಮೂರು ಅಥವಾ ನಾಲ್ಕು ದಿನಗಳ ಕಾಲ ಪಂದ್ಯ ಆಯೋಜಿಸುವುದು ಉತ್ತಮ ಎಂದು ಎಡುಲ್ಜಿ ಇಂಡಿಯನ್ ಎಕ್ಪ್ರೆಸ್ಗೆ ತಿಳಿಸಿದ್ದರು. (BCCI Women-X)
ಇತರ ಗ್ಯಾಲರಿಗಳು