ಅತ್ಯಂತ ಪ್ರಭಾವಶಾಲಿ ಭಾರತೀಯರ ಪಟ್ಟಿಯಲ್ಲಿ ವಿರಾಟ್, ಧೋನಿ, ರೋಹಿತ್ ಶರ್ಮಾ ಹಿಂದಿಕ್ಕಿದ ಜಯ್ ಶಾ
- 100 Most Powerful Indians: ಜಾಗತಿಕ ಕ್ರಿಕೆಟ್‌ನಲ್ಲಿ ಜಯ್ ಶಾ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಬಣ್ಣಿಸಿದೆ. ಹೀಗಾಗಿ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪೈಕಿ ಕ್ರೀಡಾ ಕ್ಷೇತ್ರವರಲ್ಲಿ ಜಯ್ ಶಾ ಉನ್ನತ ಸ್ಥಾನ ಪಡೆದಿದ್ದಾರೆ. ಅಚ್ಚರಿಯೆಂದರೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡಾ ಶಾಗಿಂತ ಹಿಂದಿದ್ದಾರೆ.

(1 / 6)
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, 2024ರಲ್ಲಿ "100 ಅತ್ಯಂತ ಪ್ರಭಾವಶಾಲಿ ಭಾರತೀಯರ" ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರನ್ನು ಮೀರಿಸಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಉನ್ನತ ಸ್ಥಾನ ಪಡೆದಿದ್ದಾರೆ. (PTI)
(3 / 6)
ಭಾರತದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ 58ನೇ ಸ್ಥಾನದಲ್ಲಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ 68ನೇ ಸ್ಥಾನದಲ್ಲಿದ್ದಾರೆ. ಇವರೆಲ್ಲರನ್ನೂ ಮೀರಿಸಿ ಜಯ್ ಶಾ ಉನ್ನತ ಸ್ಥಾನದಲ್ಲಿದ್ದಾರೆ.(PTI)
(4 / 6)
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯು, ಶಾ ಅವರನ್ನು "ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿ" ಎಂದು ಸುಲಭವಾಗಿ ಬಣ್ಣಿಸಿದೆ. ಶಾ ಕಳೆದ ವರ್ಷ ವಿಮೆನ್ಸ್ ಪ್ರೀಮಿಯರ್ ಲೀಗ್ ಅನ್ನು ಪ್ರಾರಂಭಿಸಿದರು. ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿದರು. (PTI)
(5 / 6)
ಕ್ರೀಡಾಪಟುಗಳ ಪೈಕಿ ಭಾರತದ ಮಾಜಿ ನಾಯಕ ಕೊಹ್ಲಿ ಅತ್ಯುನ್ನತ ಶ್ರೇಣಿಯಲ್ಲಿದ್ದಾರೆ. ಪ್ರಸ್ತುತ ಅವರು ಟೀಮ್ ಇಂಡಿಯಾ ನಾಯಕರಾಗಿಲ್ಲ. ಆದರೆ ಭಾರತೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗಿಂತ ದೊಡ್ಡ ಹೆಸರಿಲ್ಲ ಎಂದು ಎಕ್ಸ್‌ಪ್ರೆಸ್ ಹೇಳಿದೆ.(AP)
ಇತರ ಗ್ಯಾಲರಿಗಳು