ರಣಜಿಯಲ್ಲಿ ರನ್ ಮಳೆ ಹರಿಸಿದರೂ ಚೇತೇಶ್ವರ ಪೂಜಾರ ನಿರ್ಲಕ್ಷ್ಯ; ಅನುಭವಿ ಬದಲು ಪಡಿಕ್ಕಲ್‌ಗೆ ಮಣೆ ಹಾಕಿದ ಬಿಸಿಸಿಐ
- India vs England 3rd Test: ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ. ಈ ನಡುವೆ ಬಿಸಿಸಿಐ ಆಯ್ಕೆ ಸಮಿತಿಯು ದೇವದತ್ ಪಡಿಕಲ್ ಅವರನ್ನು ಟೀಮ್ ಇಂಡಿಯಾಗೆ ಕರೆಸಿಕೊಂಡಿದೆ. ಅತ್ತ ರಣಜಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅನುಭವಿ ಚೇತೇಶ್ವರ ಪೂಜಾರ ಅವರನ್ನು ಕಡೆಗಣಿಸಲಾಗಿದೆ.
- India vs England 3rd Test: ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ. ಈ ನಡುವೆ ಬಿಸಿಸಿಐ ಆಯ್ಕೆ ಸಮಿತಿಯು ದೇವದತ್ ಪಡಿಕಲ್ ಅವರನ್ನು ಟೀಮ್ ಇಂಡಿಯಾಗೆ ಕರೆಸಿಕೊಂಡಿದೆ. ಅತ್ತ ರಣಜಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅನುಭವಿ ಚೇತೇಶ್ವರ ಪೂಜಾರ ಅವರನ್ನು ಕಡೆಗಣಿಸಲಾಗಿದೆ.
(1 / 6)
ಗಾಯದಿಂದಾ ಸಂಪೂರ್ಣ ಗುಣಮುಖರಾಗದ ಕಾರಣದಿಂದ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಸ್ಟಾರ್ ಕ್ರಿಕೆಟಿಗನ ಫಿಟ್‌ನೆಸ್ ಬಗ್ಗೆಯೂ ಮಂಡಳಿ ಅಪ್‌ಡೇಟ್ ನೀಡಿದೆ.(PTI)
(2 / 6)
ಬಿಸಿಸಿಐ ಪ್ರಕಾರ, ಕನ್ನಡಿಗ ರಾಹುಲ್ ಪ್ರಸ್ತುತ 90 ಪ್ರತಿಶತ ಫಿಟ್ ಆಗಿದ್ದಾರೆ. ಹಾಗಾಗಿ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಮೈದಾನಕ್ಕಿಳಿಯಲು ಸಾಧ್ಯವಾಗುತ್ತಿಲ್ಲ. ರಾಹುಲ್ 100 ಶೇಕಡ ಫಿಟ್ ಆದ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.(PTI)
(3 / 6)
ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯ ಎರಡನೇ ಟೆಸ್ಟ್‌ನಿಂದ ರಾಹುಲ್ ಹೊರಗುಳಿದಿದ್ದರು. ಆದರೂ, ಇಂಗ್ಲೆಂಡ್ ಸರಣಿಯ ಕೊನೆಯ ಮೂರು ಟೆಸ್ಟ್‌ಗಳಿಗೆ ಭಾರತ ಆಯ್ಕೆಗಾರರು ಅವರನ್ನು ತಂಡದಲ್ಲಿ ಸೇರಿಸಿಕೊಂಡರು. ಬಿಸಿಸಿಐನ ವೈದ್ಯಕೀಯ ತಂಡವು ರಾಹುಲ್ ಅವರನ್ನು ಫಿಟ್ ಎಂದು ಘೋಷಿಸಿದರೆ, ಅವರು ರಾಜ್‌ಕೋಟ್ ಟೆಸ್ಟ್‌ನಲ್ಲಿ ಮೈದಾನಕ್ಕೆ ಇಳಿಯುತ್ತಿದ್ದರು.(ANI)
(4 / 6)
ಅತ್ತ, ಕರ್ನಾಟಕದ ಅಗ್ರ ಕ್ರಮಾಂಕದ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ರಾಹುಲ್ ಬದಲಿಗೆ ರಾಷ್ಟ್ರೀಯ ಆಯ್ಕೆದಾರರು ಭಾರತದ ಟೆಸ್ಟ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಸದ್ಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಡಿದ ನಾಲ್ಕು ರಣಜಿ ಪಂದ್ಯಗಳಲ್ಲಿ 3 ಶತಕ ಸಿಡಿಸಿದ್ದಾರೆ. ಅಲ್ಲದೆ, ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಸರಣಿಯ 2 ಪಂದ್ಯಗಳಲ್ಲಿ 1 ಶತಕ ಮತ್ತು 1 ಅರ್ಧ ಶತಕ ಗಳಿಸಿದ್ದಾರೆ.(PTI)
(5 / 6)
ಪಂಜಾಬ್ ವಿರುದ್ಧದ ರಣಜಿ ಪಂದ್ಯದಲ್ಲಿ ಪಡಿಕ್ಕಲ್ 193 ರನ್ ಗಳಿಸಿದ್ದರು. ಗೋವಾ ವಿರುದ್ಧ 103 ಮತ್ತು ತಮಿಳುನಾಡು ವಿರುದ್ಧ 151 ರನ್ ಗಳಿಸಿದರು. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಟೆಸ್ಟ್ ಸರಣಿಯ 3 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 105, 65 ಮತ್ತು 21 ರನ್ ಗಳಿಸಿದರು.(PTI)
(6 / 6)
ಚೇತೇಶ್ವರ ಪೂಜಾರಾ ಪ್ರಸಕ್ತ ರಣಜಿ ಟ್ರೋಫಿಯಲ್ಲಿ ಸೊಗಸಾದ ಫಾರ್ಮ್‌ನಲ್ಲಿದ್ದಾರೆ. ಆದರೆ, ರಾಷ್ಟ್ರೀಯ ಆಯ್ಕೆಗಾರರು ಅನುಭವಿ ಆಟಗಾರನನ್ನು ನಿರ್ಲಕ್ಷಿಸಿದ್ದಾರೆ. 6 ರಣಜಿ ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ ಪೂಜಾರ, 74.77 ಸರಾಸರಿಯಲ್ಲಿ 673 ರನ್ ಕಲೆಹಾಕಿದ್ದಾರೆ. ಎಲೈಟ್ ಗ್ರೂಪ್ ಕ್ರಿಕೆಟಿಗರಲ್ಲಿ ಪ್ರಸಕ್ತ ರಣಜಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಚೇತೇಶ್ವರ ಪೂಜಾರಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 2 ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ವರ್ಷದ ರಣಜಿ ಟ್ರೋಫಿಯಲ್ಲಿ ಪೂಜಾರ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಅಜೇಯ 243 ರನ್.(PTI)
ಇತರ ಗ್ಯಾಲರಿಗಳು