ಬಿಯರ್ಡ್ ಆಯಿಲ್: ಗಡ್ಡಕ್ಕೆ ವಿಟಮಿನ್ ಇ ಇರುವ ತೈಲ ಹಚ್ಚುವುದರಿಂದ ದೊರಕುವ 6 ಪ್ರಯೋಜನಗಳು
- ವಿಟಮಿನ್ ಇ ಇರುವ ಬಿಯರ್ಡ್ ಆಯಿಲ್‌ಗಳ ಬಳಕೆಯಿಂದ ಹಲವು ಪ್ರಯೋಜನಗಳು ಇವೆ. ಗಡ್ಡ ಬೆಳೆಸಿ ಸ್ಟೈಲ್ ಮಾಡಲು ಬಯಸುವ ಪುರುಷರಿಗೆ ಗಡ್ಡ ತೈಲ ಅಥವಾ ಗಡ್ಡಕ್ಕೆ ಬಳಸುವ ಎಣ್ಣೆಗಳಿಂದ ಸಾಕಷ್ಟು ಪ್ರಯೋಜನಗಳಿವೆ. ಇಲ್ಲಿ 6 ಪ್ರಯೋಜನಗಳನ್ನು ಲಿಸ್ಟ್ ಮಾಡಲಾಗಿದೆ.
- ವಿಟಮಿನ್ ಇ ಇರುವ ಬಿಯರ್ಡ್ ಆಯಿಲ್‌ಗಳ ಬಳಕೆಯಿಂದ ಹಲವು ಪ್ರಯೋಜನಗಳು ಇವೆ. ಗಡ್ಡ ಬೆಳೆಸಿ ಸ್ಟೈಲ್ ಮಾಡಲು ಬಯಸುವ ಪುರುಷರಿಗೆ ಗಡ್ಡ ತೈಲ ಅಥವಾ ಗಡ್ಡಕ್ಕೆ ಬಳಸುವ ಎಣ್ಣೆಗಳಿಂದ ಸಾಕಷ್ಟು ಪ್ರಯೋಜನಗಳಿವೆ. ಇಲ್ಲಿ 6 ಪ್ರಯೋಜನಗಳನ್ನು ಲಿಸ್ಟ್ ಮಾಡಲಾಗಿದೆ.
(1 / 6)
1. ಗಡ್ಡದ ಪೋಷಣೆ, ತೇವ: ಗಡ್ಡದ ಎಣ್ಣೆಯು ಗಡ್ಡಕ್ಕೆ ಆಳವಾದ ಪೋಷಣೆ ಮತ್ತು ಜಲಸಂಚಯನಕ್ಕೆ ಸಹಾಯ ಮಾಡುತ್ತದೆ. ಗಡ್ಡ ಮೃದುವಾಗುತ್ತದೆ. ಮುಖಕ್ಕೂ ಹಿತವಾಗಿರುತ್ತದೆ. ಗಡ್ಡ ಮತ್ತು ಅದರ ಕೆಳಗಿನ ಚರ್ಮಕ್ಕೂ ಪೋಷಣೆ ಒದಗಿಸುತ್ತದೆ. ಚರ್ಮವು ಒಣಗುವ ಬದಲು ಆದ್ರವಾಗಿರುತ್ತದೆ. ಪುರುಷರಲ್ಲಿ ಒಣಚರ್ಮ ತಡೆಯಲು ಗಡ್ಡದ ಎಣ್ಣೆ ನೆರವಾಗುತ್ತದೆ. (Pixabay)
(2 / 6)
2. ಇನ್ನಷ್ಟು ಚಂದ ಕಾಣುವಿರಿ: ಗಡ್ಡದ ಎಣ್ಣೆಯು ಮುಖದ ಗಡ್ಡವನ್ನು ಹೊಳೆಯುವಂತೆ ಮಾಡುತ್ತದೆ. ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ. (Pixabay)
(3 / 6)
3. ಗಡ್ಡವನ್ನು ಬಲಪಡಿಸುತ್ತದೆ, ದೃಢಗೊಳಿಸುತ್ತದೆ: ಬಿಯರ್ಡ್ ಆಯಿಲ್‌ನಲ್ಲಿರುವ ವಿಟಮಿನ್‌ಗಳು (ವಿಟಮಿನ್ ಇ) ಮತ್ತು ಖನಿಜಗಲೂ ಚರ್ಮದ ಪೋಷಣೆಗೆ ಸಹಕಾರಿ. ಕೂದಲು ಬುಡದಿಂದಲೇ ಬೆಳೆಯಲು ನರವಾಗುತ್ತದೆ. ಗಮನಿಸಿ, ಗಡ್ಡದ ಎಣ್ಣೆ ಬಳಸುವ ಮೊದಲು ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಪೇಸ್‌ವಾಶ್, ಫೇಸ್ ಮಾಸ್ಕ್‌ಗಳು, ಮಾಯಿಶ್ವರೈಸರ್‌ನಂತಹ ಉತ್ಪನ್ನ ಬಳಸಿದ ಬಳಿಕ ಗಡ್ಡದ ಎಣ್ಣೆ ಬಳಸಬಹುದು. (Pixabay)
(4 / 6)
4. ಮೊಡವೆ ಮತ್ತು ಕಿರಿಕಿರಿಯನ್ನು ತಡೆಯುತ್ತದೆ: ಗಡ್ಡ ಬಿಟ್ಟಮೇಲೆ ಗಡ್ಡದೊಳಗೆ ಮೊಡವೆ, ಕಿರಿಕಿರಿ ಹೆಚ್ಚಿರುತ್ತದೆ. ಇಂತಹ ಸಮಸ್ಯೆ ನಿಮಗಿದ್ದರೆ ಗಡ್ಡದ ಎಣ್ಣೆ ಬಳಸಲು ಆರಂಭಿಸಬಹುದು. ಗಡ್ಡದ ಎಣ್ಣೆಯು ವಿಟಮಿನ್ ಇ ಯಂತಹ ಜೀವಸತ್ವಗಳನ್ನು ಹೊಂದಿರುತ್ತದೆ, ಇದು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಆಳವಾದ ಪರಿಣಾಮವನ್ನು ಬೀರುತ್ತದೆ. ಗಡ್ಡದ ಎಣ್ಣೆಯಲ್ಲಿರುವ ವಿಟಮಿನ್ ಇ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯಂತಹ ಪರಿಸರದ ತೊಂದರೆಗಳ ವಿರುದ್ಧ ಹೋರಾಡಲು ಮತ್ತು ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಹೀಗಾಗಿ, ನೀವು ಕೂದಲಿನ ಬೆಳವಣಿಗೆಗೆ ವಿಟಮಿನ್ ಇ ಹೊಂದಿರುವ ಗಡ್ಡ ಎಣ್ಣೆಯನ್ನು ಬಳಸಬಹುದು. ಮೊಡವೆ ಮುಕ್ತ ಚರ್ಮವನ್ನು ಪಡೆಯಬಹುದು. (Pixabay)
(5 / 6)
5. ಡ್ಯಾಂಡ್ರಫ್ ಮತ್ತು ತುರಿಕೆ ನಿವಾರಣೆ: ಮುಖದ ಮೇಲಿನ ಗಡ್ಡದ ಆರೈಕೆ ಮರೆತರೆ ಚರ್ಮದಲ್ಲಿ ತುರಿಕೆ ಆರಂಬವಾಗಬಹುದು. ಒಣ ಚರ್ಮ ಆರಂಭವಾಗಬಹುದು. ಇದರಿಂದ ಡ್ಯಾಂಡ್ರಫ್ ಆರಂಬವಾಗಬಹುದು. ಧೂಳು ಮತ್ತು ಪರಿಸರದ ಕಣಗಳು ಸೇರಿ ಚರ್ಮದ ಆರೋಗ್ಯವೂ ಹಾಳಾಗಬಹುದು. ಇಂತಹ ಸಮಸ್ಯೆ ಹೋಗಲಾಡಿಸಲು ಬಿಯರ್ಡ್ ಆಯಿಲ್ ಬಳಸಬಹುದು.(Pixabay)
ಇತರ ಗ್ಯಾಲರಿಗಳು