Beauty Care: ಕಣ್ಣರಳಿಸುವ ಅಂದಕ್ಕೆ ಬೇಕು ಹಣ್ಣು; ಹೊಳಪಿನ, ಕಾಂತಿಯುತ ತ್ವಚೆಗೆ ಈ ಹಣ್ಣುಗಳನ್ನು ಪ್ರತಿನಿತ್ಯ ಸೇವಿಸಿ
Fruits For Glowing Skin: ಚರ್ಮವನ್ನು ದೇಹದ ಮೇಲಿನಿಂದ ಮಾತ್ರವಲ್ಲ, ಒಳಗಿನಿಂದಲೂ ಆರೈಕೆ ಮಾಡುವುದು ಬಹಳ ಮುಖ್ಯ. ದೇಹಕ್ಕೆ ವಿಟಮಿನ್ ನೀಡುವ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಆದರೆ, ಈ ಹಣ್ಣುಗಳನ್ನು ತಪ್ಪದೇ ನಿರಂತರವಾಗಿ ಸೇವಿಸುವುದು ಅವಶ್ಯ.
(1 / 6)
ತ್ವಚೆಯ ಕಾಳಜಿ ಎಂದರೆ ಚರ್ಮದ ಮೇಲಿನಿಂದ ಆರೈಕೆ ಮಾಡುವುದು ಮಾತ್ರವಲ್ಲ, ದೇಹದ ಒಳಗಿನಿಂದಲೂ ಸೂಕ್ತ ಕಾಳಜಿ ಮಾಡಬೇಕು. ಅಂದರೆ ನಾವು ಸೇವಿಸುವ ಆಹಾರವು ನಮ್ಮ ತ್ವಚೆಯನ್ನು ಸುಂದರವಾಗಿರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಅಂಶ ಇರುವ ಹಣ್ಣುಗಳ ನಿರಂತರ ಸೇವನೆಯು ಚರ್ಮದ ಹೊಳಪನ್ನು ಹೆಚ್ಚಿಸಿ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. (Freepik)
(2 / 6)
ಕಲ್ಲಂಗಡಿ: ಕಲ್ಲಂಗಡಿಯಲ್ಲಿ ಚರ್ಮಕ್ಕೆ ಅಗತ್ಯವಿರುವ ಹಲವಾರು ಪೋಷಕಾಂಶಗಳಿವೆ. ಇದಲ್ಲದೆ, ಕಲ್ಲಂಗಡಿಯಲ್ಲಿ ಸಾಕಷ್ಟು ನೀರಿನಾಂಶವಿರುತ್ತದೆ. ಇದು ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆ ಕಾರಣಕ್ಕೆ ನಿರಂತರವಾಗಿ ಕಲ್ಲಂಗಡಿ ಸೇವಿಸುವುದು ಅವಶ್ಯ. (Freepik)
(3 / 6)
ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಸಿ, ಇ ಮತ್ತು ಕೆ ಅಂಶವಿದೆ. ಈ ವಿಟಮಿನ್ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ತ್ವಚೆಯ ಅಂದ ಹೆಚ್ಚುತ್ತದೆ.( Freepik)
(4 / 6)
ಸ್ಟ್ರಾಬೆರಿ: ಈಗ ಸ್ಟ್ರಾಬೆರಿ ಎಲ್ಲಾ ಕಾಲದಲ್ಲೂ ಸಿಗುವ ಹಣ್ಣು ಮತ್ತು ಇದು ಸಾಮಾನ್ಯ ಮಾರುಕಟ್ಟೆಯಲ್ಲೂ ಲಭ್ಯವಿರುತ್ತದೆ. ಸ್ಟ್ರಾಬೆರಿಯಲ್ಲಿರುವ ಎಲಾಜಿಕ್ ಆಮ್ಲವು ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದರಲ್ಲಿ ವಿಟಮಿನ್ ಎ ಕೂಡ ಇದೆ. ಇದು ಸೇವನೆಗೆ ಹುಳಿ ಎನ್ನಿಸಿದರೂ ತ್ವಚೆಗೆ ಸಿಹಿ.(Freepik)
(5 / 6)
ಸೇಬು: ಸೇಬು ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ವರ್ಣದ್ರವ್ಯದ ವಿರುದ್ಧ ಹೋರಾಡಲು ಮತ್ತು ಫ್ರಿ ರಾಡಿಕಲ್‌ಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ಸಿ ಅಂಶ ಸಾಕಷ್ಟಿದೆ. ಇದು ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ( Freepik)
ಇತರ ಗ್ಯಾಲರಿಗಳು