ನೈಸರ್ಗಿಕ ಕಪ್ಪು ಕೂದಲು ನಿಮ್ಮದಾಗಬೇಕಾ, ಮೆಹಂದಿ ಜೊತೆ ಈ ವಸ್ತುಗಳನ್ನು ಬೆರೆಸಿ ಹಚ್ಚಿ, ಅಚ್ಚರಿಯ ಫಲಿತಾಂಶ ನಿರೀಕ್ಷಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೈಸರ್ಗಿಕ ಕಪ್ಪು ಕೂದಲು ನಿಮ್ಮದಾಗಬೇಕಾ, ಮೆಹಂದಿ ಜೊತೆ ಈ ವಸ್ತುಗಳನ್ನು ಬೆರೆಸಿ ಹಚ್ಚಿ, ಅಚ್ಚರಿಯ ಫಲಿತಾಂಶ ನಿರೀಕ್ಷಿಸಿ

ನೈಸರ್ಗಿಕ ಕಪ್ಪು ಕೂದಲು ನಿಮ್ಮದಾಗಬೇಕಾ, ಮೆಹಂದಿ ಜೊತೆ ಈ ವಸ್ತುಗಳನ್ನು ಬೆರೆಸಿ ಹಚ್ಚಿ, ಅಚ್ಚರಿಯ ಫಲಿತಾಂಶ ನಿರೀಕ್ಷಿಸಿ

ಮೆಹಂದಿ ಹಚ್ಚುವುದರಿಂದ ಕೂದಲು ಕಪ್ಪಾಗುವ ಬದಲು ಕೆಂಪಾಗುತ್ತದೆ ಎಂದು ಹಲವರು ದೂರುತ್ತಾರೆ. ಅದಕ್ಕೆ ಮೆಹಂದಿ ಜೊತೆ ಈ ಕೆಲವು ವಸ್ತುಗಳನ್ನು ಬೆರೆಸಬೇಕು. ಇದರಿಂದ ನೈಸರ್ಗಿಕ ಕಪ್ಪು ಕೂದಲು ನಿಮ್ಮದಾಗುತ್ತದೆ.

ಅಕಾಲಿಕ ಬಾಲನೆರೆಯಿಂದ ಆತ್ಮವಿಶ್ವಾಸ ಕಡಿಮೆಯಾಗುವುದು ಮಾತ್ರವಲ್ಲ, ಬೇಗನೆ ವಯಸ್ಸಾದಂತೆ ಕಾಣುತ್ತದೆ. ಬೂದು ಕೂದಲನ್ನು ಮರೆ ಮಾಡಲು ಜನರು ಪಾರ್ಲರ್‌ಗಳಿಗೆ ಹೋಗಿ ದುಬಾರಿ ಬಣ್ಣಗಳನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಇದರಿಂದ ಸ್ವಲ್ಪ ದಿನಗಳಲ್ಲೇ ಕೂದಲು ಉದುರಲು ಶುರುವಾಗುತ್ತದೆ, ಕೆಲವರಿಗೆ ಅಲರ್ಜಿಯು ಉಂಟಾಗಬಹುದು. ದುಬಾರಿ ಬೆಲೆ ತೆರಲು ಸಾಧ್ಯವಾಗದವರು ಕೂದಲಿಗೆ ಮೆಹಂದಿ ಹಚ್ಚುತ್ತಾರೆ. ಮೆಹಂದಿ ಕೂದಲನ್ನು ಕಪ್ಪಾಗಿಸುವ ಬದಲು ಬಣ್ಣವನ್ನಾಗಿಸುತ್ತದೆ. ಆದರೆ ಮೆಹಂದಿ ಹಚ್ಚುವ ಮುನ್ನ ಈ ಕ್ರಮ ಅನುಸರಿಸಿದ್ರೆ ಖಂಡಿತ ನಿಮ್ಮ ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣ ಬರುತ್ತದೆ.
icon

(1 / 12)

(Pic Credit: Shutterstock)

ಕೂದಲಿಗೆ ಹಚ್ಚಲು ನೈಸರ್ಗಿಕ ಗೋರಂಟಿ ಬಳಸಿ. ಇದರಿಂದ ಕೂದಲಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.
icon

(2 / 12)

2-3 ಟೀ ಚಮಚ ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಿ ತಣ್ಣಗಾಗಿಸಿ. ಇದು ಮೆಹಂದಿಗೆ ಗಾಢ ಕಪ್ಪು ಬಣ್ಣವನ್ನು ನೀಡುತ್ತದೆ. ಇದು ಕೂದಲಿನ ಆರೈಕೆಗೆ ಉತ್ತಮ.
icon

(3 / 12)

ಕಾಫಿಯನ್ನು ನೀರಿನಲ್ಲಿ ಕುದಿಸಿ, ತಣ್ಣಗಾಗಿಸಿ ಮತ್ತು ಗೋರಂಟಿ ಜೊತೆ ಮಿಶ್ರಣ ಮಾಡಿ. ಇದು ಕೂದಲಿನ ಕಪ್ಪು ಬಣ್ಣವನ್ನು ಇನ್ನಷ್ಟು ಗಾಢವಾಗಿಸುತ್ತದೆ.
icon

(4 / 12)

ನೆಲ್ಲಿಕಾಯಿ ಕೂದಲಿಗೆ ಪೋಷಣೆ ನೀಡುತ್ತದೆ. ಇದು ಕೂದಲಿನ ಬಣ್ಣವನ್ನು ಕಪ್ಪಾಗಿಸುತ್ತದೆ. ಆದ್ದರಿಂದ ನೆಲ್ಲಿಕಾಯಿ ರಸವನ್ನು ಕೂಡ ಮೆಹಂದಿಯೊಂದಿಗೆ ಬೆರೆಸಿ ಹಚ್ಚಬಹುದು.
icon

(5 / 12)

ನಿಂಬೆ ಹೆನ್ನಾದ ಬಣ್ಣವನ್ನು ಗಾಢವಾಗಿಸಲು ಸಹಾಯ ಮಾಡುತ್ತದೆ, ಆದರೆ ಕೂದಲನ್ನು ಒಣಗಿಸುವ ಕಾರಣ ಅದನ್ನು ಹೆಚ್ಚು ಬಳಸುವುದು ತಪ್ಪಿಸಿ.
icon

(6 / 12)

ಮೊಸರಿನೊಂದಿಗೆ ಮೆಹಂದಿ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಮೃದುವಾಗುತ್ತದೆ ಮತ್ತು ಕಂಡೀಷನಿಂಗ್ ಆಗುತ್ತದೆ. ಮೊಸರಿನಲ್ಲಿ ಕೂದಲನ್ನು ಮೃದುಗೊಳಿಸುವ ನೈಸರ್ಗಿಕ ಕಿಣ್ವಗಳಿವೆ.
icon

(7 / 12)

ಲವಂಗವು ಗೋರಂಟಿ ಬಣ್ಣವನ್ನು ಗಾಢವಾಗಿಸಲು ಸಹಾಯ ಮಾಡುತ್ತದೆ. ಲವಂಗವನ್ನು ಪುಡಿ ಮಾಡಿ ಮೆಹಂದಿ ಜೊತೆ ಬೆರೆಸಿ.
icon

(8 / 12)

ತೆಂಗಿನ ಎಣ್ಣೆ ಕೂದಲಿಗೆ ತೇವಾಂಶ ನೀಡುತ್ತದೆ ಮತ್ತು ಹೆನ್ನಾ ಹಚ್ಚುವುದನ್ನು ಸುಲಭವಾಗಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹೆನ್ನಾದ ಜೊತೆ ತೆಂಗಿನೆಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿ.
icon

(9 / 12)

ಸಕ್ಕರೆ ಹೆನ್ನಾವನ್ನು ಜಿಗುಟಾದಂತೆ ಮಾಡುತ್ತದೆ, ಇದು ಕೂದಲಿಗೆ ಚೆನ್ನಾಗಿ ಅಂಟಿಕೊಳ್ಳಲು ಸಹಾಯ ಮಾಡುತ್ತದೆ.
icon

(10 / 12)

ಒಂದು ಬಟ್ಟಲಿನಲ್ಲಿ ಹೆನ್ನಾ ಪುಡಿಯನ್ನು ಹಾಕಿ ಮತ್ತು ನಿಧಾನವಾಗಿ ಅದಕ್ಕೆ ಕಪ್ಪು ಚಹಾ ನೀರು ಅಥವಾ ಕಾಫಿ ನೀರನ್ನು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ. ಈಗ ಆಮ್ಲಾ ಪುಡಿ, ನಿಂಬೆ ರಸ, ಮೊಸರು, ಲವಂಗ ಪುಡಿ, ಎಣ್ಣೆ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ಅನ್ನು 6-8 ಗಂಟೆಗಳ ಕಾಲ ಮುಚ್ಚಿಡಿ ಇದರಿಂದ ಬಣ್ಣವು ಗಾಢವಾಗುತ್ತದೆ. ನಿಮ್ಮ ಕೂದಲನ್ನು ತೊಳೆದು ಒಣಗಿಸಿ, ನಂತರ ಗೋರಂಟಿಯನ್ನು ಬೇರುಗಳಿಂದ ನೆತ್ತಿಗೆ ಹಚ್ಚಿ 3-4 ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. 24 ಗಂಟೆಗಳ ನಂತರ ಶಾಂಪೂ ಬಳಸಿ.
icon

(11 / 12)

ರಾಸಾಯನಿಕ ಹೆನ್ನಾ ಹಚ್ಚುವುದನ್ನು ತಪ್ಪಿಸಿ, ಅದು ಕೂದಲಿಗೆ ಹಾನಿ ಮಾಡುತ್ತದೆ. ಮೊದಲು, ಅಲರ್ಜಿಯನ್ನು ಪರೀಕ್ಷಿಸಲು ಚರ್ಮದ ಒಂದು ಸಣ್ಣ ಭಾಗದಲ್ಲಿ ಪ್ಯಾಚ್ ಪರೀಕ್ಷೆಯನ್ನು ಮಾಡಿ. ಹೆನ್ನಾ ಹಚ್ಚಿದ ನಂತರ, 48 ಗಂಟೆಗಳ ಕಾಲ ಬಿಸಿ ನೀರಿನಿಂದ ಕೂದಲನ್ನು ತೊಳೆಯಬೇಡಿ.
icon

(12 / 12)

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು