ಕನ್ನಡ ಸುದ್ದಿ  /  Photo Gallery  /  Beauty Tips For Oily Skin Summer Season Sweating Exfoliating Cleanser Balanced Diet Facewash Skin Care In Kannada Rst

Beauty Tips: ಬೇಸಿಗೆಯಲ್ಲಿ ಅಂದ ಕೆಡಿಸುತ್ತದೆ ಎಣ್ಣೆ ಚರ್ಮ; ನಿವಾರಣೆಗೆ ಇಲ್ಲಿದೆ ಕೆಲವು ಸೌಂದರ್ಯ ಸಲಹೆ

Oily Skin: ಬೇಸಿಗೆಯಲ್ಲಿ ಎಣ್ಣೆ ಚರ್ಮದವರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಎಣ್ಣೆ ಚರ್ಮದಿಂದ ಸೌಂದರ್ಯ ಕೆಡುವುದು ಮಾತ್ರವಲ್ಲ, ಮೊಡವೆ, ಬೆವರುಸಾಲೆಗೂ ಕಾರಣವಾಗುತ್ತದೆ. ಹಾಗಾದರೆ ಇದನ್ನು ನಿವಾರಿಸುವುದು ಹೇಗೆ? ಇಲ್ಲಿದೆ ಸುಲಭ ಸಲಹೆ.

ಬೇಸಿಗೆಯ ಶಾಖ ಮತ್ತು ತೇವಾಂಶವು ಎಣ್ಣೆ ಚರ್ಮವನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಮೊಡವೆಗಳು, ಮತ್ತು ಚರ್ಮದ ಜಿಡ್ಡಿನಂತಹ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಂತ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಚರ್ಮವನ್ನು ತಾಜಾವಾಗಿರಿಸಿ, ಹೊಳೆಯುವಂತೆ ಮಾಡಲು ನೆರವಾಗಲು ಸಲಹೆಗಳು ಇಲ್ಲಿವೆ. 
icon

(1 / 6)

ಬೇಸಿಗೆಯ ಶಾಖ ಮತ್ತು ತೇವಾಂಶವು ಎಣ್ಣೆ ಚರ್ಮವನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಮೊಡವೆಗಳು, ಮತ್ತು ಚರ್ಮದ ಜಿಡ್ಡಿನಂತಹ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಂತ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಚರ್ಮವನ್ನು ತಾಜಾವಾಗಿರಿಸಿ, ಹೊಳೆಯುವಂತೆ ಮಾಡಲು ನೆರವಾಗಲು ಸಲಹೆಗಳು ಇಲ್ಲಿವೆ. (freepik )

ನಿಯಮಿತವಾಗಿ ಎಕ್ಸ್‌ಫೋಲಿಯೇಟ್‌ ಮಾಡಿ: ಎಣ್ಣೆ ಚರ್ಮದವರು ಬೇಸಿಗೆಯಲ್ಲಿ ನಿಯಮಿತವಾಗಿ ಚರ್ಮಕ್ಕೆ ಏಕ್ಸ್‌ಫೋಲಿಯೇಟ್‌ ಮಾಡುವುದು ಅವಶ್ಯ. ಇದು ಚರ್ಮದ ರಂಧ್ರಗಳು ತೆರೆದುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ತ್ವಚೆಯ ಮೇಲಿನ ಜಿಡ್ಡಿನ ನಿವಾರಣೆಗೂ ಸಹಕಾರಿ. ಸ್ಯಾಲಿಸಿಲಿಕ್ ಅಥವಾ ಗ್ಲೈಕೋಲಿಕ್ ಆಮ್ಲದಂತಹ ರಾಸಾಯನಿಕ ಎಕ್ಸ್‌ಫೋಲಿಯಂಟ್‌ಗಳನ್ನು ಬಳಸಬಹುದು.
icon

(2 / 6)

ನಿಯಮಿತವಾಗಿ ಎಕ್ಸ್‌ಫೋಲಿಯೇಟ್‌ ಮಾಡಿ: ಎಣ್ಣೆ ಚರ್ಮದವರು ಬೇಸಿಗೆಯಲ್ಲಿ ನಿಯಮಿತವಾಗಿ ಚರ್ಮಕ್ಕೆ ಏಕ್ಸ್‌ಫೋಲಿಯೇಟ್‌ ಮಾಡುವುದು ಅವಶ್ಯ. ಇದು ಚರ್ಮದ ರಂಧ್ರಗಳು ತೆರೆದುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ತ್ವಚೆಯ ಮೇಲಿನ ಜಿಡ್ಡಿನ ನಿವಾರಣೆಗೂ ಸಹಕಾರಿ. ಸ್ಯಾಲಿಸಿಲಿಕ್ ಅಥವಾ ಗ್ಲೈಕೋಲಿಕ್ ಆಮ್ಲದಂತಹ ರಾಸಾಯನಿಕ ಎಕ್ಸ್‌ಫೋಲಿಯಂಟ್‌ಗಳನ್ನು ಬಳಸಬಹುದು.(Pexels)

ಪದೇ ಪದೇ ಮುಖವನ್ನು ಕೈಗಳಿಂದ ಮುಟ್ಟಬೇಡಿ: ಬೇಸಿಗೆಯಲ್ಲಿ ಅತಿಯಾಗಿ ಬೆವರುವ ಕಾರಣದಿಂದ ಪದೇ ಪದೇ ಮುಖ ಮುಟ್ಟಿಕೊಳ್ಳುತ್ತಿರುತ್ತೇವೆ, ಆದರೆ ಎಣ್ಣೆ ಚರ್ಮದವರು ಮುಖವನ್ನು ಮುಟ್ಟದೇ ಇರುವುದು ಉತ್ತಮ. ಇದರಿಂದ ಕೈಯಲ್ಲಿರುವ ಬ್ಯಾಕ್ಟೀರಿಯಾಗಳು, ಎಣ್ಣೆಯಂಶ ಚರ್ಮಕ್ಕೆ ತಾಕಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು. ಅದರ ಬದಲು ಕರ್ಚೀಫ್‌ ಅಥವಾ ಟಿಶ್ಯೂ ಬಳಸಬಹುದು. 
icon

(3 / 6)

ಪದೇ ಪದೇ ಮುಖವನ್ನು ಕೈಗಳಿಂದ ಮುಟ್ಟಬೇಡಿ: ಬೇಸಿಗೆಯಲ್ಲಿ ಅತಿಯಾಗಿ ಬೆವರುವ ಕಾರಣದಿಂದ ಪದೇ ಪದೇ ಮುಖ ಮುಟ್ಟಿಕೊಳ್ಳುತ್ತಿರುತ್ತೇವೆ, ಆದರೆ ಎಣ್ಣೆ ಚರ್ಮದವರು ಮುಖವನ್ನು ಮುಟ್ಟದೇ ಇರುವುದು ಉತ್ತಮ. ಇದರಿಂದ ಕೈಯಲ್ಲಿರುವ ಬ್ಯಾಕ್ಟೀರಿಯಾಗಳು, ಎಣ್ಣೆಯಂಶ ಚರ್ಮಕ್ಕೆ ತಾಕಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು. ಅದರ ಬದಲು ಕರ್ಚೀಫ್‌ ಅಥವಾ ಟಿಶ್ಯೂ ಬಳಸಬಹುದು. (Instagram)

ಸಮತೋಲಿತ ಆಹಾರ ಸೇವನೆ: ದೇಹಾರೋಗ್ಯಕ್ಕೆ ಮಾತ್ರವಲ್ಲ, ಚರ್ಮದ ಆರೋಗ್ಯಕ್ಕೂ ಸಮತೋಲಿನ ಆಹಾರ ಸೇವನೆ ಅವಶ್ಯ. ಗ್ಲೈಸೆಮಿಕ್‌ ಅಂಶ ಕಡಿಮೆ ಇರುವ ಆಹಾರ ಪದಾರ್ಥಗಳ ಸೇವನೆಗೆ ಒತ್ತು ನೀಡಬೇಕು. ಹಸಿರು ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಒಣಹಣ್ಣುಗಳು, ಲೀನ್‌ ಪ್ರೊಟೀನ್‌ ಕೂಡ ನಿಮ್ಮ ಆಹಾರದ ಪಟ್ಟಿಯಲ್ಲಿರಲಿ. ಇವು ಹಾರ್ಮೋನ್‌ ಹಂತಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ. ಅಲ್ಲದೆ ಚರ್ಮದಲ್ಲಿ ಎಣ್ಣೆಯಂಶ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. 
icon

(4 / 6)

ಸಮತೋಲಿತ ಆಹಾರ ಸೇವನೆ: ದೇಹಾರೋಗ್ಯಕ್ಕೆ ಮಾತ್ರವಲ್ಲ, ಚರ್ಮದ ಆರೋಗ್ಯಕ್ಕೂ ಸಮತೋಲಿನ ಆಹಾರ ಸೇವನೆ ಅವಶ್ಯ. ಗ್ಲೈಸೆಮಿಕ್‌ ಅಂಶ ಕಡಿಮೆ ಇರುವ ಆಹಾರ ಪದಾರ್ಥಗಳ ಸೇವನೆಗೆ ಒತ್ತು ನೀಡಬೇಕು. ಹಸಿರು ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಒಣಹಣ್ಣುಗಳು, ಲೀನ್‌ ಪ್ರೊಟೀನ್‌ ಕೂಡ ನಿಮ್ಮ ಆಹಾರದ ಪಟ್ಟಿಯಲ್ಲಿರಲಿ. ಇವು ಹಾರ್ಮೋನ್‌ ಹಂತಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ. ಅಲ್ಲದೆ ಚರ್ಮದಲ್ಲಿ ಎಣ್ಣೆಯಂಶ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. (Unsplash)

ನೀರು ಕುಡಿಯುವುದು: ಬೇಸಿಗೆಯಲ್ಲಿ ಎಣ್ಣೆ ಚರ್ಮದವರು ಸಾಕಷ್ಟು ನೀರು ಕುಡಿಯಬೇಕು. ಆ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಲ್ಲದೆ ಆರೋಗ್ಯಕರ ಚರ್ಮಕ್ಕೆ ಇದು ಅವಶ್ಯ. ನಿರ್ಜಲೀಕರಣದಿಂದ ದೇಹದಲ್ಲಿ ಎಣ್ಣೆಯಂಶ ಉತ್ಪಾದನೆ ಹೆಚ್ಚುತ್ತದೆ. ಹಾಗಾಗಿ ದೇಹದಲ್ಲಿ ತೇವಾಂಶ ಉಳಿಯಲು ಸಾಕಷ್ಟು ನೀರು ಕುಡಿಯುವುದು ಅವಶ್ಯ.  
icon

(5 / 6)

ನೀರು ಕುಡಿಯುವುದು: ಬೇಸಿಗೆಯಲ್ಲಿ ಎಣ್ಣೆ ಚರ್ಮದವರು ಸಾಕಷ್ಟು ನೀರು ಕುಡಿಯಬೇಕು. ಆ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಲ್ಲದೆ ಆರೋಗ್ಯಕರ ಚರ್ಮಕ್ಕೆ ಇದು ಅವಶ್ಯ. ನಿರ್ಜಲೀಕರಣದಿಂದ ದೇಹದಲ್ಲಿ ಎಣ್ಣೆಯಂಶ ಉತ್ಪಾದನೆ ಹೆಚ್ಚುತ್ತದೆ. ಹಾಗಾಗಿ ದೇಹದಲ್ಲಿ ತೇವಾಂಶ ಉಳಿಯಲು ಸಾಕಷ್ಟು ನೀರು ಕುಡಿಯುವುದು ಅವಶ್ಯ.  (Pexels)

 ದಿನದಲ್ಲಿ ಎರಡು ಬಾರಿ ಕ್ಲೆನ್ಸರ್‌ ಮಾಡಿ: ಎಣ್ಣೆಚರ್ಮದವರು ದಿನದಲ್ಲಿ ಎರಡು ಬಾರಿ ಮುಖಕ್ಕೆ ಕ್ಲೆನ್ಸರ್‌ ಮಾಡುವುದು ಅಥವಾ ಸೋಪ್‌ ಅಥವಾ ಫೇಶ್‌ವಾಶ್‌ನಿಂದ ಮುಖ ತೊಳೆಯಬೇಕು, ಇದರಿಂದ ಎಣ್ಣೆಯಂಶ ಹಾಗೂ ಜಿಡ್ಡಿನಂಶವನ್ನು ಚರ್ಮ ಹೀರಿಕೊಳ್ಳುವುದನ್ನು ತಡೆಯುತ್ತದೆ. ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಕೆನ್ಸರ್‌ ಮಾಡುವುದು ಅವಶ್ಯ. 
icon

(6 / 6)

 ದಿನದಲ್ಲಿ ಎರಡು ಬಾರಿ ಕ್ಲೆನ್ಸರ್‌ ಮಾಡಿ: ಎಣ್ಣೆಚರ್ಮದವರು ದಿನದಲ್ಲಿ ಎರಡು ಬಾರಿ ಮುಖಕ್ಕೆ ಕ್ಲೆನ್ಸರ್‌ ಮಾಡುವುದು ಅಥವಾ ಸೋಪ್‌ ಅಥವಾ ಫೇಶ್‌ವಾಶ್‌ನಿಂದ ಮುಖ ತೊಳೆಯಬೇಕು, ಇದರಿಂದ ಎಣ್ಣೆಯಂಶ ಹಾಗೂ ಜಿಡ್ಡಿನಂಶವನ್ನು ಚರ್ಮ ಹೀರಿಕೊಳ್ಳುವುದನ್ನು ತಡೆಯುತ್ತದೆ. ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಕೆನ್ಸರ್‌ ಮಾಡುವುದು ಅವಶ್ಯ. (Pexels)


ಇತರ ಗ್ಯಾಲರಿಗಳು