Nail Care Tips: ಪದೇ ಪದೇ ಉಗುರು ತುಂಡಾಗುತ್ತಿದೆಯೇ; ಉಗುರಿನ ಅಂದ, ಆರೋಗ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಮನೆಮದ್ದು
Home Remedies to Keep Nail Healthy: ನೀಳವಾದ, ಅಂದದ ಉಗುರು ಕೈಗಳ ಅಂದ ಹೆಚ್ಚಿಸುವುದು ಸುಳ್ಳಲ್ಲ. ಆದರೆ ಕೆಲವರಿಗೆ ಕೈ ಉಗುರು ಬೆಳೆಯುವುದಿಲ್ಲ. ಉಗುರುಗಳು ಪದೇ ಪದೇ ತುಂಡಾಗುತ್ತವೆ. ಉಗುರು ಸುತ್ತು ಕೂಡ ಅಂದ ಕೆಡಿಸಬಹುದು. ಆದರೆ ಮನೆಯಲ್ಲಿ ಉಗುರಿನ ಕಾಳಜಿ ಮಾಡುವುದರಿಂದ ಅಂದ, ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.
(1 / 6)
ಉಗುರು ಸುಂದರವಾಗಿಲ್ಲದಿದ್ದರೆ, ಕೈಗಳ ಸೌಂದರ್ಯವು ಕೆಡುತ್ತದೆ. ಹಲವರಿಗೆ ಉಗುರು ಬೆಳೆಸುವ ಆಸೆ ಇದ್ದರೂ ಸಾಧ್ಯವಾಗುವುದಿಲ್ಲ. ಏಕೆಂದರೆ ಉಗುರುಗಳು ಸ್ವಲ್ಪ ಬೆಳೆದ ತಕ್ಷಣ ತುಂಡಾಗುತ್ತವೆ. ನಿಮಗೂ ಹಾಗೇ ಆಗುತ್ತಿದ್ದರೆ ಈ ಮನೆಮದ್ದುಗಳನ್ನು ಅನುಸರಿಸಿ. ಉಗುರಿನ ಅಂದ, ಆರೋಗ್ಯ ಹೆಚ್ಚಿಸಿಕೊಳ್ಳಿ.
(2 / 6)
ಕೈ ಮತ್ತು ಉಗುರುಗಳಿಗೆ ಮಾಯಿಶ್ಚರೈಸರ್ ಅನ್ನು ಹಚ್ಚಿ. ಗ್ಲೈಸಿನ್, ಆಲ್ಫಾ ಹೈಡ್ರಾಕ್ಸಿ ಆಮ್ಲಗಳು, ಟೈರೋಸಿನ್ ಮತ್ತು ವಿಟಮಿನ್‌ಗಳನ್ನು ಹೊಂದಿರುವ ಮಾಯಿಶ್ಚರೈಸರ್‌ಗಳನ್ನು ಬಳಸಬಹುದು. ಅಲ್ಲದೆ, ಉಗುರುಗಳ ಸುತ್ತಲಿನ ಹೊರಪೊರೆಗಳ ಮೇಲೆ ಮಾಯಿಶ್ಚರೈಸರ್ ಅನ್ನು ಹಚ್ಚಲು ಮರೆಯಬೇಡಿ.
(3 / 6)
ಯಾವಾಗಲೂ ನೇಲ್ ಪಾಲಿಷ್ ಹಚ್ಚಬೇಡಿ. ರಾಸಾಯನಿಕಗಳ ಕಾರಣದಿಂದಾಗಿ, ಉಗುರುಗಳ ಆರೋಗ್ಯವು ಹದಗೆಡುತ್ತದೆ. ಉಗುರುಗಳಿಗೆ ಉಸಿರಾಡಲು ಅವಕಾಶ ನೀಡಬೇಕು. ಅಸಿಟೋನ್ ಹೊಂದಿರುವ ನೇಲ್ ಪಾಲಿಶ್ ರಿಮೂವರ್ ಕೂಡ ಉಗುರಿನ ಆರೋಗ್ಯ ಕೆಡಲು ಕಾರಣವಾಗಬಹುದು. ಒಂದು ವಾರದವರೆಗೆ ನೇಲ್ ಪಾಲಿಶ್ ಬಳಸಿದ ನಂತರ, ಕನಿಷ್ಠ 2 ರಿಂದ 3 ದಿನಗಳವರೆಗೆ ಉಗುರುಗಳನ್ನು ಬಣ್ಣಗಳಿಲ್ಲದೆ ಇರಿಸಿ.
(4 / 6)
ಪಾತ್ರೆಗಳನ್ನು ತೊಳೆಯುವಾಗ ಮತ್ತು ಬಟ್ಟೆ ಒಗೆಯುವಾಗ ಕೈಗವಸುಗಳನ್ನು ಧರಿಸಿ. ಹೂದೋಟ ಮಾಡುವ ಹವ್ಯಾಸವಿದ್ದರೂ ಕೈಗವಸುಗಳನ್ನು ಧರಿಸುವುದನ್ನು ಮರೆಯಬಾರದು. ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆ, ಆಲಿವ್ ಎಣ್ಣೆಯನ್ನು ಕೂಡ ಬಳಸಬಹುದು.
(5 / 6)
ಉಗುರುಗಳು ಪದೇ ಪದೇ ತುಂಡಾಗುತ್ತಿದ್ದರೆ, ತುಂಬಾ ಉದ್ದ ಬೆಳೆಸಬೇಡಿ. ಬದಲಾಗಿ, ಚಿಕ್ಕ ಉಗುರುಗಳಿಗೆ ಚೆಂದದ ಆಕಾರವನ್ನು ನೀಡಿ. ಇದು ಪದೇ ಪದೇ ಉಗುರು ತುಂಡಾಗುವುದನ್ನು ತಡೆಯಲು ಉತ್ತಮ ವಿಧಾನ.
ಇತರ ಗ್ಯಾಲರಿಗಳು