ನೇಲ್ ಆರ್ಟ್ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗಳಿಗೇ ಹೋಗಬೇಕಿಲ್ಲ, ನಿಮಗೊಪ್ಪುವ ವಿನ್ಯಾಸ ಮನೆಯಲ್ಲಿ ನೀವೇ ಮಾಡಿಕೊಳ್ಳಿ
ಇತ್ತೀಚಿನ ದಿನಗಳಲ್ಲಿ ನೇಲ್ ಆರ್ಟ್ ಬಹಳ ಫೇಮಸ್ ಆಗುತ್ತಿದೆ. ಅಂದಕ್ಕೆ ಪ್ರಾಮುಖ್ಯತೆ ನೀಡುವವರು ಎಂದಿಗೂ ಉಗುರುಗಳನ್ನು ನಿರ್ಲಕ್ಷಿಸುವುದಿಲ್ಲ. ಮೊದಲೆಲ್ಲಾ ಉಗುರು ಬಣ್ಣ ಹಚ್ಚುವುದರಿಂದ ಉಗುರುಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತಿದ್ದರು. ಆದರೆ ಈಗ ನೇಲ್ ಆರ್ಟ್ ಬಹಳ ಫೇಮಸ್ ಆಗಿದೆ.
(1 / 7)
ನೇಲ್ ಆರ್ಟ್‌ಗೆಂದೇ ಮಹಿಳೆಯರು ಬ್ಯೂಟಿಪಾರ್ಲರ್‌ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಆದರೆ ಉತ್ತಮ ಕಂಪನಿಗಳ ವಿವಿಧ ಬಣ್ಣಗಳ ನೇಲ್ ಪಾಲಿಶ್ ನಿಮ್ಮ ಬಳಿ ಇದ್ದರೆ, ನೀವೇ ಮನೆಯಲ್ಲಿ ಸುಂದರವಾದ ನೇಲ್ ಆರ್ಟ್ ಮಾಡಿಕೊಳ್ಳಬಹುದು. ಇದರಿಂದ ಹಣವೂ ಉಳಿತಾಯವಾಗುತ್ತದೆ. ಸಮಯವೂ ವ್ಯರ್ಥವಾಗುವುದಿಲ್ಲ.
(2 / 7)
ಮನೆಯಲ್ಲಿ ನೀವೇ ನೇಲ್ ಆರ್ಟ್ ಮಾಡಿಕೊಳ್ಳಲು ಈ ಮಾದರಿ ಸೂಕ್ತವಾಗಿದೆ. ಇದು ನೋಡಲು ತುಂಬಾ ಸುಂದರವಾಗಿದೆ ಮತ್ತು ಮಾಡಲು ಸುಲಭವಾಗಿದೆ. ಈ ವಿನ್ಯಾಸವು ಯಾವುದೇ ವಿಶೇಷ ಸಂದರ್ಭದಲ್ಲಿ ಹಚ್ಚಿಕೊಂಡರೆ ಬಹಳ ಆಕರ್ಷಕವಾಗಿ ಕಾಣುತ್ತದೆ. ಕೆಂಪು, ಗೋಲ್ಡನ್ ಮತ್ತು ಬಿಳಿ ಉಗುರು ಬಣ್ಣಗಳ ಸಂಯೋಜನೆಯೊಂದಿಗೆ ನೀವು ಇದನ್ನು ಸುಲಭವಾಗಿ ಮಾಡಬಹುದು.
(PC: nails_elegantes )(3 / 7)
ಕಡು ನೀಲಿ, ಸಿಲ್ವರ್, ಬಿಳಿ ಬಣ್ಣಗಳನ್ನು ಬಳಸಿ ಬಿಡಿಸಲಾದ ಈ ನೇಲ್ ಆರ್ಟ್ ಎಷ್ಟು ಸುಂದರವಾಗಿದೆ ನೋಡಿ. ಇದನ್ನೂ ನೋಡಿದರೆ ನೀವು ಮನೆಯಲ್ಲೇ ಮಾಡಿಕೊಂಡ ನೇಲ್ ಆರ್ಟ್ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಯಾವುದೇ ಪಾರ್ಟಿ ಅಥವಾ ವಿಶೇಷ ಸಂದರ್ಭಕ್ಕಾಗಿ ನೀವು ಅದನ್ನು ತಕ್ಷಣವೇ ಮನೆಯಲ್ಲಿಯೇ ಮಾಡಬಹುದು.
(PC: unhas.asbelas )(4 / 7)
ಮನೆಯಲ್ಲಿ ನೇಲ್ ಆರ್ಟ್ ಮಾಡಲು ನೀವು ಸರಳ ಮತ್ತು ಸುಂದರವಾದ ಡಿಸೈನ್ ಹುಡುಕುತ್ತಿದ್ದರೆ, ನೀವು ಲವ್ ಶೇಪ್ ವಿನ್ಯಾಸವನ್ನು ಮಾಡಿಕೊಳ್ಳಬಹುದು. ಹೇರ್ ಪಿನ್ ಅಥವಾ ತೆಳುವಾದ ಬ್ರಷ್ ಸಹಾಯದಿಂದ ಬಹಳ ಸುಲಭವಾಗಿ ಲವ್ ಶೇಪ್ ಚಿತ್ರಿಸಬಹುದು. ಕ್ಯಾಶುಯಲ್ ಬಟ್ಟೆಗಳೊಂದಿಗೆ ಇದು ತುಂಬಾ ಚೆನ್ನಾಗಿ ಕಾಣುತ್ತದೆ.
(PC: unhas_encantadoras.nails )(5 / 7)
ಕಿತ್ತಳೆ ಮತ್ತು ಗೋಲ್ಡನ್ ನೇಲ್ ಪೇಂಟ್ ಸಂಯೋಜನೆಯಿಂದ ಮಾಡಿದ ಈ ನೇಲ್ ಆರ್ಟ್ ಎಂಥವರ ಕಣ್ಮನ ಸೆಳೆಯದೆ ಇರಲಾರದು. ಇದು ತಯಾರಿಸಲು ತುಂಬಾ ಸುಲಭ ಮತ್ತು ವೃತ್ತಿಪರ ವಿನ್ಯಾಸಕ್ಕಿಂತ ಕಡಿಮೆಯಿಲ್ಲ. ತೆಳುವಾದ ಬ್ರಷ್ ಅಥವಾ ಪಿನ್ ಸಹಾಯದಿಂದ, ನೀವು ಗೋಲ್ಡನ್ ಮಿನುಗುವ ಉಗುರು ಬಣ್ಣದಿಂದ ಸ್ಟ್ರೋಕ್‌ಗಳನ್ನು ಪ್ರಯತ್ನಿಸಿ.
(PC: unhas_encantadoras.nails)(6 / 7)
ವಧುವಿಗೆ ಈ ನೇಲ್ ಆರ್ಟ್ ಹೇಳಿ ಮಾಡಿಸಿದಂತಿದೆ. ಈ ವಿಶೇಷ ಮಾದರಿಯಲ್ಲಿ ಗೋಲ್ಡನ್ ಗ್ಲಿಟ್ಟರ್ ಮತ್ತು ಕೆಂಪು ನೇಲ್ ಪೇಂಟ್ ಹಚ್ಚುವ ಮೂಲಕ ಮೂಲಕ ಬಹಳ ಸುಂದರವಾದ ನೇಲ್ ಆರ್ಟ್ ಅನ್ನು ರಚಿಸಬಹುದು. ಅದರ ಜೊತೆಗೆ ಸ್ಟೋನ್‌ಗಳನ್ನು ಕೂಡಾ ಬಳಸಿದರೆ ಅಂದ ದುಪ್ಪಟ್ಟಾಗುತ್ತದೆ.
(PC: nail_by_dipenti)ಇತರ ಗ್ಯಾಲರಿಗಳು