Beauty Tips: ಚರ್ಮ, ಕೂದಲ ಕಾಂತಿ ಹೆಚ್ಚಿಸಲು ಇಲ್ಲಿದೆ ಮನೆಮದ್ದು; ಬಳಸಿ ಅಂದ ಹೆಚ್ಚಿಸಿಕೊಳ್ಳಿ
Beauty Tips for Skin and Hair Care: ತ್ವಚೆ ಹಾಗೂ ಕೂದಲ ಅಂದ ಹಾಳಾಗಿದೆ ಎಂದು ಚಿಂತಿಸಬೇಡಿ. ಮನೆಯಲ್ಲೇ ಸಿಗುವ ಉತ್ಪನ್ನಗಳ ಮೂಲಕ ಇವುಗಳ ಕಾಂತಿ ಹೆಚ್ಚಿಸಿಕೊಳ್ಳಬಹುದು. ಆದರೆ ನಿರಂತರವಾಗಿ ಬಳಸುವುದನ್ನು ಮರೆಯದಿರಿ.
(1 / 9)
ಚರ್ಮ ಹಾಗೂ ತ್ವಚೆಗೆ ಸಂಬಂಧಿಸಿದ ಉತ್ಪನ್ನಗಳು ದುಬಾರಿ ಹಾಗೂ ಇವು ರಾಸಾಯನಿಕಗಳಿಂದ ತುಂಬಿರುತ್ತವೆ. ಆ ಕಾರಣಕ್ಕೆ ಹಲವರು ಈಗ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಮನೆಮದ್ದುಗಳ ಮೊರೆ ಹೋಗುತ್ತಿದ್ದಾರೆ. ನೈಸರ್ಗಿಕ ಹಾಗೂ ಮನೆಮದ್ದುಗಳು ಹಣ ಉಳಿಸುವುದು ಮಾತ್ರವಲ್ಲ ಪರಿಣಾಮಕಾರಿಯೂ ಹೌದು. ಅಲ್ಲದೆ ಇದು ಎಲ್ಲಾ ಬಗೆಯ ಚರ್ಮದವರಿಗೂ ಹೊಂದುತ್ತದೆ. ಅಡುಗೆಮನೆಯಲ್ಲಿ ಸಿಗುವ ಈ ಉತ್ಪನ್ನಗಳು ಕೂದಲು ಹಾಗೂ ತ್ವಚೆಯ ಕಾಂತಿ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. (Pexels)
(2 / 9)
ಜೇನುತುಪ್ಪದ ಫೇಸ್‌ಮಾಸ್ಕ್: ಜೇನುತುಪ್ಪದೊಂದಿಗೆ ಸ್ವಲ್ಪ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ಒಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಚರ್ಮದ ತೇವಾಂಶ ಹೆಚ್ಚುವುದು ಮಾತ್ರವಲ್ಲ, ಈ ಮಾಸ್ಕ್ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡುತ್ತದೆ. (Instagram)
(3 / 9)
ಕಾಫಿ ಸ್ಕ್ರಬ್: ಕಾಫಿಪುಡಿ ಹಾಗೂ ತೆಂಗಿನೆಣ್ಣೆ ಜೊತೆಗೆ ಒಂದು ಚಮಚ ಸಕ್ಕರೆ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಚರ್ಮವು ಎಕ್ಸ್‌ಫೋಲಿಯೇಟ್ ಆಗುವುದು ಮಾತ್ರವಲ್ಲ, ಮೃದುವಾಗಿ, ತಾಜಾವಾಗಿ ಕಾಣಿಸುತ್ತದೆ. (Pexels )
(4 / 9)
ಬೆಣ್ಣೆಹಣ್ಣಿನ ಹೇರ್ ಮಾಸ್ಕ್: ಕಳಿತ ಬೆಣ್ಣೆಹಣ್ಣಿನ ತಿರುಳಿನೊಂದಿಗೆ ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ ಕೂದಲಿಗೆ ಹಚ್ಚಿ, ಇದನ್ನು ಹಾಗೆ ಒಣಗಲು ಬಿಡಿ, ನಂತರ ತಲೆಸ್ನಾನ ಮಾಡಿ. ಇದರಿಂದ ಕೂದಲು ಮೃದುವಾಗಿ ಕಾಂತಿಯುವಾಗುತ್ತದೆ. (Unsplash)
(5 / 9)
ಗ್ರೀನ್ ಟೀ ಟೋನರ್: ಒಂದು ಕಪ್ ಗ್ರೀನ್ ಟೀಯನ್ನು ಕುದಿಸಿ, ಅದನ್ನು ತಣ್ಣಗಾಗಲು ಬಿಡಿ. ಇದನ್ನು ಚರ್ಮಕ್ಕೆ ಟೋನರ್ ರೀತಿ ಬಳಸಿ. ಇದು ತ್ವಚೆಯ ಕಾಂತಿ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.(Unsplash)
(6 / 9)
ಮೊಸರಿನ ಫೇಸ್‌ಮಾಸ್ಕ್: ಮೊಸರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ತ್ವಚೆಯ ತೇವಾಂಶ ಹೆಚ್ಚಿ, ಕಾಂತಿಯುತವಾಗಿ ಹೊಳೆಯುತ್ತದೆ. (freepik)
(7 / 9)
ಸನ್‌ಬರ್ನ್ ಆಗಿದ್ದರೆ ಲೋಳೆಸರದ ತಾಜಾ ತಿರುಳನ್ನು ಹಚ್ಚಿ, ಇದರಿಂದ ಚರ್ಮ ಸನ್‌ಬರ್ನ್ ಸಮಸ್ಯೆ ನಿವಾರಣೆಯಾಗುತ್ತದೆ.(Getty Images)
(8 / 9)
ತೆಂಗಿನೆಣ್ಣೆ: ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಉಗುರು ಬೆಚ್ಚಗಿನ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿ. ಇದರಿಂದ ಕೂದಲ ಕಾಂತಿ ಹೆಚ್ಚುತ್ತದೆ. (pexels)
ಇತರ ಗ್ಯಾಲರಿಗಳು