ಕನ್ನಡ ಸುದ್ದಿ  /  Photo Gallery  /  Beauty Tips Skin Care Tips Benefits Of Coconut Water For The Skin Beauty With Coconut Water How To Use Coconut Water Rst

Coconut Water: ದಾಹ ನೀಗಿಸುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತೆ ಎಳನೀರು, ಇದ್ರಿಂದ ತ್ವಚೆಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

  • ಬೇಸಿಗೆಯಲ್ಲಿ ದಾಹ ನೀಗಿಸುವ ಸಲುವಾಗಿ ಎಳನೀರು ಕುಡಿಯುವುದು ಸಹಜ. ಇದು ಬಿಸಿಲಿನ ತಾಪ ತಣಿಸಿ, ದೇಹವನ್ನು ಕೂಲ್‌ ಆಗಿರಿಸುವುದು ಮಾತ್ರವಲ್ಲ, ಅಂದವನ್ನೂ ಹೆಚ್ಚಿಸುತ್ತದೆ. ಎಳನೀರಿನಿಂದ ತ್ವಚೆಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದ್ರೆ ನೀವು ಖಂಡಿತ ಅಚ್ಚರಿ ಪಡ್ತೀರಿ.

ಬೇಸಿಗೆಯಲ್ಲಿ ಎಳನೀರು ಕುಡಿದ್ರೆ ದೇಹ ತಂಪಗಾಗುತ್ತೆ, ಇದ್ರಿಂದ ತೂಕ ಇಳಿಯುತ್ತೆ, ಜೀರ್ಣಕ್ರಿಯೆ ವೃದ್ಧಿಯಾಗುತ್ತೆ ಅಂತೆಲ್ಲಾ ಎಲ್ಲರಿಗೂ ಗೊತ್ತು. ಆದರೆ ತ್ವಚೆಯ ಆರೈಕೆಗೂ ಎಳನೀರು ಉತ್ತಮ ಎನ್ನುವುದು ಹಲವರಿಗೆ ತಿಳಿದಿಲ್ಲ. ಇದರಲ್ಲಿನ ಜೀವಸತ್ವಗಳು ಹಾಗೂ ಪೋಷಕಾಂಶಗಳು ಚರ್ಮದ ಉರಿಯೂತ ಗುಣಪಡಿಸಲು ಸಹಕರಿಸುತ್ತವೆ. ಎಳನೀರಿನಿಂದ ತ್ವಚೆಗೆ ಪ್ರಯೋಜನ ಪಡೆಯಲು ಇದನ್ನು ಕುಡಿಯಬಹುದು ಅಥವಾ ಚರ್ಮಕ್ಕೆ ಹಚ್ಚಬಹುದು. ಹಾಗಾದ್ರೆ ಎಳನೀರಿನಿಂದ ಚರ್ಮಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ. 
icon

(1 / 9)

ಚರ್ಮದ ದದ್ದುಗಳನ್ನು ಶಮನ ಮಾಡುತ್ತದೆ: ಬೇಸಿಗೆಯಲ್ಲಿ ಎಳನೀರು ಕುಡಿಯುವುದರಿಂದ ಚರ್ಮದಲ್ಲಿ ಉಂಟಾಗುವ ದದ್ದು, ಸಿಡುಬು, ದಡಾರದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇದರಿಂದ ಚರ್ಮದಲ್ಲಿ ಉಂಟಾಗುವ ಕಲೆಗಳನ್ನೂ ನಿಯಂತ್ರಿಸುತ್ತದೆ. 
icon

(2 / 9)

ತ್ವಚೆಯ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ: ಬಿಸಿಲಿನ ತಾಪಕ್ಕೆ ದೇಹವು ಬೇಗನೆ ಬಿಸಿಯಾಗುತ್ತದೆ. ಇದರಿಂದ ಚರ್ಮವು ತೇವಾಂಶ ಕಳೆದುಕೊಳ್ಳಬಹುದು. ಎಳನೀರು ಕುಡಿಯುವುದರಿಂದ ದೇಹವನ್ನು ತಂಪಾಗಿಸಬಹುದು. ನಿರ್ಜಲೀಕರಣ ಸಮಸ್ಯೆ ತಡೆಗಟ್ಟುವ ಜೊತೆಗೆ ಚರ್ಮದ ಹೊಳಪನ್ನೂ ಹೆಚ್ಚಿಸುತ್ತದೆ. 
icon

(3 / 9)

ವಯಸ್ಸಾದಂತೆ ಕಾಣುವ ಲಕ್ಷಣಗಳ ವಿರುದ್ಧ ಹೋರಾಡುತ್ತದೆ: ಎಳನೀರಿನಲ್ಲಿ ಸೈಟೊಕಿನಿನ್ಸಿ ಎಂಬ ಅಂಶವಿದೆ. ಜೊತೆಗೆ ಇದರಲ್ಲಿರುವ ಕೈನೆಟಿನ್ ಆಕ್ಸಿಡೇಟಿವ್ ಹಾನಿಯನ್ನು ತಡೆಯುತ್ತದೆ. ಸೆಲ್ಯುಲಾರ್ ಅಂಶವು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಒಟ್ಟಾರೆ ಚರ್ಮದಲ್ಲಿ ಸದಾ ಕಳೆ ಹೆಚ್ಚುವಂತೆ ಮಾಡುತ್ತದೆ.
icon

(4 / 9)

ಕೊಲಾಜನ್‌ ಉತ್ಪತ್ತಿಯನ್ನು ವೃದ್ಧಿಸುತ್ತದೆ: ಎಳನೀರಿನಲ್ಲಿ ವಿಟಮಿನ್‌ ಸಿ ಹಾಗೂ ಲಾರಿಕ್‌ ಆಮ್ಲವಿದ್ದು, ಇದು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ. ವಿಟಮಿನ್ ಸಿ ಯುವಿ ಕಿರಣಗಳು ಹಾಗೂ ಮಾಲಿನ್ಯದಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ. ಕೊಲಾಜನ್‌ ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಇದು ಚರ್ಮವನ್ನು ತಾರುಣ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಲಾರಿಕ್ ಆಮ್ಲವು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಮೊಡವೆಯಂತಹ ಲಕ್ಷಣಗಳನ್ನು ನಿಯಂತ್ರಿಸುತ್ತದೆ. 
icon

(5 / 9)

ಚರ್ಮ ರಚನೆ ಸುಧಾರಿಸುತ್ತದೆ: ಎಳನೀರಿನಿಂದ ಮುಖಕ್ಕೆ ಮಸಾಜ್‌ ಮಾಡುವುದರಿಂದ ಚರ್ಮದ ರಚನೆಯು ಸುಧಾರಿಸಿ, ಮೃದುವಾಗಲು ಸಹಕರಿಸುತ್ತದೆ. 
icon

(6 / 9)

ಸ್ಕಿನ್‌ ಪಿಗ್ಮಂಟೇಷನ್‌ ತಡೆಯುತ್ತದೆ: ಎಳನೀರಿನಲ್ಲಿರುವ ವಿಟಮಿನ್ ಸಿ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳಂತಹ ಅಗತ್ಯ ಪೋಷಕಾಂಶಗಳು ಹೈಪರ್‌ ಪಿಗ್ಮಂಟೇಶನ್‌ ತಡೆಯಲು ಸಹಾಯ ಮಾಡುತ್ತದೆ. ಚರ್ಮದ ವರ್ಣದ್ರವ್ಯ ಹೆಚ್ಚಲು ಇದು ಸಹಕಾರಿ. 
icon

(7 / 9)

ತ್ವಚೆಯ ಅಂದ-ಆರೋಗ್ಯ ಹೆಚ್ಚಲು ಎಳನೀರು ಕುಡಿಯಬಹುದು. ಜೊತೆಗೆ ಇದನ್ನು ಫೇಸ್‌ಪ್ಯಾಕ್‌, ಫೇಸ್‌ಮಾಸ್ಕ್‌ಗಳ ಜೊತೆಗೆ ಬಳಸಬಹುದು. ಎಳನೀರನ್ನು ನೇರವಾಗಿ ಹತ್ತಿ ಉಂಡೆಯಲ್ಲಿ ಅದ್ದಿ ಮುಖಕ್ಕೆ ಹಚ್ಚಿಕೊಳ್ಳಬಹುದು. 
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

IPL_Entry_Point

ಇತರ ಗ್ಯಾಲರಿಗಳು