Hair Care Tips: ಬಾಲನೆರೆ ತಡೆಯಲು ಇಲ್ಲಿದೆ ಸೂಪರ್‌ಫುಡ್‌; ಅಕಾಲಿಕ ಕೂದಲು ಬಿಳಿಯಾಗುವ ಚಿಂತೆಗಿನ್ನು ಹಾಕಿ ಬ್ರೇಕ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hair Care Tips: ಬಾಲನೆರೆ ತಡೆಯಲು ಇಲ್ಲಿದೆ ಸೂಪರ್‌ಫುಡ್‌; ಅಕಾಲಿಕ ಕೂದಲು ಬಿಳಿಯಾಗುವ ಚಿಂತೆಗಿನ್ನು ಹಾಕಿ ಬ್ರೇಕ್‌

Hair Care Tips: ಬಾಲನೆರೆ ತಡೆಯಲು ಇಲ್ಲಿದೆ ಸೂಪರ್‌ಫುಡ್‌; ಅಕಾಲಿಕ ಕೂದಲು ಬಿಳಿಯಾಗುವ ಚಿಂತೆಗಿನ್ನು ಹಾಕಿ ಬ್ರೇಕ್‌

  • Premature Graying Of Hair: ಬಾಲನೆರೆ ಅಥವಾ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಸಾಕಷ್ಟು ಪೋಷಕಾಂಶಗಳನ್ನು ಹೊಂದುವುದು ಅವಶ್ಯ. ಅದಕ್ಕಾಗಿ ನಾವು ಒಂದಿಷ್ಟು ಸೂಪರ್‌ಫುಡ್‌ಗಳನ್ನು ಸೇವಿಸಬೇಕು. ಅವು ಕೂದಲನ್ನು ಸದಾ ಕಪ್ಪಾಗಿರುವಂತೆ ನೋಡಿಕೊಳ್ಳುತ್ತವೆ. ಅಂತಹ ಸೂಪರ್‌ಫುಡ್‌ಗಳ ವಿವರ ಇಲ್ಲಿದೆ. 

ʼಇತ್ತೀಚೆಗೆ ಯುವಜನರಲ್ಲಿ ಕೂದಲು ಬಿಳಿಯಾಗುವ ಬಾಲನೆರೆ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಒತ್ತಡ ಹಾಗೂ ಜೀವನಶೈಲಿಯು ಪ್ರಮುಖ ಕಾರಣವಾಗಿದೆ. ಇದರೊಂದಿಗೆ ಪೋಷಕಾಂಶ ಹಾಗೂ ಸಮರ್ಪಕ ಆಹಾರದ ಕೊರತೆಯೂ ಕಾರಣ. ಗಡಿಬಿಡಿಯಲ್ಲಿ ಊಟ ಮಾಡುವುದು ಹಾಗೂ ಫಾಸ್ಟ್‌ಫುಡ್‌ಗಳ ಸೇವನೆಯ ಈ ಎಲ್ಲಾ ಅಂಶಗಳು ಪೋಷಕಾಂಶಗಳ ಕೊರತೆಯನ್ನು ಉಂಟು ಮಾಡುತ್ತವೆ. ಆದರೆ ಕಪ್ಪು ಕೂದಲನ್ನು ಖಂಡಿತ ಮರಳಿ ತರಲು ಸಾಧ್ಯವಿದೆʼ ಎನ್ನುತ್ತಾರೆ ಪೌಷ್ಟಿಕ ತಜ್ಞೆ ನ್ಮಾಮಿ ಅಗರ್‌ವಾಲ್‌.  
icon

(1 / 6)

(Freepik)

ಪಾಲಕ್‌ ಸೊಪ್ಪು, ಕಡಲೆ, ಕಿತ್ತಳೆ: ಫೋಲಿಕ್‌ ಆಮ್ಲವು ಆಹಾರಕ್ಕೆ ಸರಿಯಾದ ಪೋಷಣೆಯನ್ನು ಒದಗಿಸಲು ಸಹಾಯ ಮಾಡುತ್ತದೆ. ಪಾಲಕ್‌, ಮೆಂತ್ಯೆ, ಸಾಸಿವೆ ಸೊಪ್ಪು, ಚೋಲೆ, ಉದ್ದಿನಬೇಳೆ, ಕಡಲೆ, ಬೀನ್ಸ್‌, ಬಟಾಣಿ, ಕಿತ್ತಳೆ, ದ್ರಾಕ್ಷಿಹಣ್ಣು, ನಿಂಬೆಹಣ್ಣು, ಬಾದಾಮಿ, ಶೇಂಗಾ, ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿಯಂತಹ ತರಕಾರಿಗಳು ಹಾಗೂ ಬೀಜಗಳು ಫೋಲಿಕ್‌ ಆಮ್ಲವನ್ನು ಹೊಂದಿರುತ್ತವೆ. 
icon

(2 / 6)

(Unsplash)

ಡೇರಿ ಉತ್ಪನ್ನಗಳು, ಮೊಟ್ಟೆಯ ಹಳದಿ ಲೋಳೆ: ಮೊಟ್ಟೆಯ ಹಳದಿ ಭಾಗ, ಡೇರಿ ಉತ್ಪನ್ನಗಳು, ಅಣಬೆಗಳಂತಹ ವಿಟಮಿನ್‌ B12 ಅಂಶ ಇರುವ ಆಹಾರಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ಇದು ಬಾಲನೆರೆ ತಡೆಯಲು ಸಹಾಯ ಮಾಡುತ್ತದೆ. 
icon

(3 / 6)

ಸತುವಿನಂಶ ಇರುವ ಆಹಾರಗಳು: ಕುಂಬಳಕಾಯಿ, ಸೂರ್ಯಕಾಂತಿ, ಕಲ್ಲಂಗಡಿ ಮುಂತಾದ ಬೀಜಗಳು, ಪಿಸ್ತಾ, ಬಾದಾಮಿ,  ಕಪ್ಪು ಎಳ್ಳು ಮುಂತಾದವುಗಳಲ್ಲಿ ಸತುವಿನಂಶ ಸಮೃದ್ಧವಾಗಿರುತ್ತದೆ. ಇದು ಕೂದಲು ಬೇಗನೆ ಬಿಳಿಯಾಗುವುದನ್ನು ತಡೆಯುತ್ತವೆ. 
icon

(4 / 6)

(Pixabay)

ತಾಮ್ರದಂಶ ಇರುವ ಆಹಾರಗಳು: ಚಿಪ್ಪುಮೀನು ಮತ್ತು ಸಿಹಿನೀರಿನ ಮೀನುಗಳು, ಎಳ್ಳು, ಗೋಡಂಬಿ ಮತ್ತು ಬಾದಾಮಿ, ಗೋಧಿ ಮತ್ತು ಧಾನ್ಯಗಳ ಸೇವನೆಯು ಕೂದಲು ಬಿಳಿಯಾಗುವುದನ್ನು ತಡೆಯಲು ಉತ್ತಮ ಮಾರ್ಗವಾಗಿದೆ. 
icon

(5 / 6)

ಈ ಆಹಾರಗಳ ಹೊರತಾಗಿ ಅತಿಯಾದ ಒತ್ತಡ, ಸ್ಥೂಲಕಾಯ, ಥೈರಾಯ್ಡ್ ಮತ್ತು ಆನುವಂಶಿಕ ಸಮಸ್ಯೆಗಳಂತಹ ಇತರ ಜೀವನಶೈಲಿಯ ಅಂಶಗಳನ್ನು ಪರಿಗಣಿಸಬೇಕು. ಒತ್ತಡವನ್ನು ನಿವಾರಿಸುವ ಮಾರ್ಗಗಳನ್ನು ಕಂಡುಹಿಡಿಯುವುದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.
icon

(6 / 6)

ಇತರ ಗ್ಯಾಲರಿಗಳು