ಕನ್ನಡ ಸುದ್ದಿ  /  Photo Gallery  /  Beauty Tips Watermelon For Skin Face Mask Lip Scrub Face Mist Summer Skin Health In Kannada Rst

Beauty Tips: ಕಲ್ಲಂಗಡಿ ಹಣ್ಣಿನಲ್ಲಿದೆ ತ್ವಚೆಯ ಅಂದ; ಬೇಸಿಗೆಯಲ್ಲಿ ಕಾಂತಿಯುತ ಚರ್ಮಕ್ಕೆ ಬಳಸಿ ಕಲ್ಲಂಗಡಿ ಮಾಸ್ಕ್‌

  • Skin Care With Watermelon: ಬೇಸಿಗೆಯಲ್ಲಿ ಬೆವರು, ದೂಳು, ಕಲ್ಮಶಗಳ ಕಾರಣದಿಂದ ಚರ್ಮದ ಆರೋಗ್ಯ ಕೆಡುವುದು ಸಹಜ. ಬಿಸಿಲಿನ ಬೇಗೆಯಿಂದ ದೇಹ ತಂಪು ಮಾಡಿಕೊಳ್ಳಲು ಕಲ್ಲಂಗಡಿ ಸೇವಿಸುತ್ತೇವೆ. ಆದರೆ ಈ ಕಲ್ಲಂಗಡಿ ಅಂದವನ್ನೂ ಹೆಚ್ಚಿಸುತ್ತದೆ ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಕಲ್ಲಂಗಡಿಯನ್ನು ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಹೇಗೆಲ್ಲಾ ಬಳಸಬಹುದು ನೋಡಿ.

ಕಲ್ಲಂಗಡಿ ಬೇಸಿಗೆಯಲ್ಲಿ ಹೇರಳವಾಗಿ ಸಿಗುವ, ಅಗ್ಗದ ಹಣ್ಣು. ಇದು ದೇಹ ತಾಪವನ್ನು ತಣಿಸುವ ಗುಣವನ್ನು ಹೊಂದಿದೆ. ಇದರ ಸೇವನೆಯಿಂದ ನಿರ್ಜಲೀಕರಣ ಸಮಸ್ಯೆಯಿಂದಲೂ ದೂರವಿರಬಹುದು. ಇಷ್ಟೆಲ್ಲದರ ಜೊತೆಗೆ ಕಲ್ಲಂಗಡಿ ತ್ವಚೆಯ ಅಂದವನ್ನೂ ಹೆಚ್ಚಿಸುತ್ತದೆ ಎಂದರೆ ನಂಬಲೇಬೇಕು. ಮುಖದ ಚರ್ಮ, ತುಟಿಯ ಅಂದ ಹೆಚ್ಚಿಸಲು ಕಲ್ಲಂಗಡಿ ತಿರುಳನ್ನು ಬಳಸಬಹುದು. 
icon

(1 / 5)

ಕಲ್ಲಂಗಡಿ ಬೇಸಿಗೆಯಲ್ಲಿ ಹೇರಳವಾಗಿ ಸಿಗುವ, ಅಗ್ಗದ ಹಣ್ಣು. ಇದು ದೇಹ ತಾಪವನ್ನು ತಣಿಸುವ ಗುಣವನ್ನು ಹೊಂದಿದೆ. ಇದರ ಸೇವನೆಯಿಂದ ನಿರ್ಜಲೀಕರಣ ಸಮಸ್ಯೆಯಿಂದಲೂ ದೂರವಿರಬಹುದು. ಇಷ್ಟೆಲ್ಲದರ ಜೊತೆಗೆ ಕಲ್ಲಂಗಡಿ ತ್ವಚೆಯ ಅಂದವನ್ನೂ ಹೆಚ್ಚಿಸುತ್ತದೆ ಎಂದರೆ ನಂಬಲೇಬೇಕು. ಮುಖದ ಚರ್ಮ, ತುಟಿಯ ಅಂದ ಹೆಚ್ಚಿಸಲು ಕಲ್ಲಂಗಡಿ ತಿರುಳನ್ನು ಬಳಸಬಹುದು. (Freepik)

ಕಲ್ಲಂಗಡಿ ಸ್ಕ್ರಬ್: ಒಂದು ಬಟ್ಟಲಿನಲ್ಲಿ ಸಕ್ಕರೆ, ತೆಂಗಿನಎಣ್ಣೆ ಮತ್ತು ಕಲ್ಲಂಗಡಿ ರಸವನ್ನು ಮಿಶ್ರಣ ಮಾಡಿ ಸ್ಕ್ರಬ್‌ ತಯಾರಿಸಿ. ಇದನ್ನು ಮುಖದ ಮೇಲೆ ವೃತ್ತಾಕಾರದಲ್ಲಿ ಸ್ವಲ್ಪ ಹೊತ್ತು ಮಸಾಜ್ ಮಾಡಿ. 15 ನಿಮಿಷಗಳ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
icon

(2 / 5)

ಕಲ್ಲಂಗಡಿ ಸ್ಕ್ರಬ್: ಒಂದು ಬಟ್ಟಲಿನಲ್ಲಿ ಸಕ್ಕರೆ, ತೆಂಗಿನಎಣ್ಣೆ ಮತ್ತು ಕಲ್ಲಂಗಡಿ ರಸವನ್ನು ಮಿಶ್ರಣ ಮಾಡಿ ಸ್ಕ್ರಬ್‌ ತಯಾರಿಸಿ. ಇದನ್ನು ಮುಖದ ಮೇಲೆ ವೃತ್ತಾಕಾರದಲ್ಲಿ ಸ್ವಲ್ಪ ಹೊತ್ತು ಮಸಾಜ್ ಮಾಡಿ. 15 ನಿಮಿಷಗಳ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.(Freepik)

ಕಲ್ಲಂಗಡಿ ಫೇಶಿಯಲ್ ಮಿಸ್ಟ್: ಕಲ್ಲಂಗಡಿ ಫೇಶಿಯಲ್ ಮಿಸ್ಟ್ ತಯಾರಿಸಲು, ಕಲ್ಲಂಗಡಿ ತಿರುಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ರಸವನ್ನು ಸೋಸಿಕೊಳ್ಳಿ. ಈ ರಸವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಫ್ರಿಜ್‌ನಲ್ಲಿಡಿ. ನಿಮಗೆ ಬೇಕಾದಾಗ ಸ್ಪ್ರೇ ರೀತಿ ಇದನ್ನು ಬಳಸಬಹುದು. 
icon

(3 / 5)

ಕಲ್ಲಂಗಡಿ ಫೇಶಿಯಲ್ ಮಿಸ್ಟ್: ಕಲ್ಲಂಗಡಿ ಫೇಶಿಯಲ್ ಮಿಸ್ಟ್ ತಯಾರಿಸಲು, ಕಲ್ಲಂಗಡಿ ತಿರುಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ರಸವನ್ನು ಸೋಸಿಕೊಳ್ಳಿ. ಈ ರಸವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಫ್ರಿಜ್‌ನಲ್ಲಿಡಿ. ನಿಮಗೆ ಬೇಕಾದಾಗ ಸ್ಪ್ರೇ ರೀತಿ ಇದನ್ನು ಬಳಸಬಹುದು. (Freepik)

ಕಲ್ಲಂಗಡಿ ಲಿಪ್ ಸ್ಕ್ರಬ್: ಕಲ್ಲಂಗಡಿಯಲ್ಲಿರುವ ಅಮೈನೋ ಆಮ್ಲವು ತುಟಿಗಳನ್ನು ಹೈಡ್ರೇಟ್ ಮಾಡಲು ಮತ್ತು ಮೃದುವಾಗಿಸಲು ಸಹಾಯ ಮಾಡುತ್ತವೆ. ತೆಂಗಿನೆಣ್ಣೆಯೊಂದಿಗೆ ಕಲ್ಲಂಗಡಿ ರಸವನ್ನು ಮಿಶ್ರಣ ಮಾಡಿ ತುಟಿಗಳಿಗೆ ಸ್ಕ್ರಬ್ ಮಾಡಿ. ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. 
icon

(4 / 5)

ಕಲ್ಲಂಗಡಿ ಲಿಪ್ ಸ್ಕ್ರಬ್: ಕಲ್ಲಂಗಡಿಯಲ್ಲಿರುವ ಅಮೈನೋ ಆಮ್ಲವು ತುಟಿಗಳನ್ನು ಹೈಡ್ರೇಟ್ ಮಾಡಲು ಮತ್ತು ಮೃದುವಾಗಿಸಲು ಸಹಾಯ ಮಾಡುತ್ತವೆ. ತೆಂಗಿನೆಣ್ಣೆಯೊಂದಿಗೆ ಕಲ್ಲಂಗಡಿ ರಸವನ್ನು ಮಿಶ್ರಣ ಮಾಡಿ ತುಟಿಗಳಿಗೆ ಸ್ಕ್ರಬ್ ಮಾಡಿ. ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. (Freepik)

ಫೇಸ್ ಮಾಸ್ಕ್: ತ್ವಚೆಯ ಆರೈಕೆಗೆ ಕಲ್ಲಂಗಡಿ ಫೇಸ್ ಮಾಸ್ಕ್ ತುಂಬಾನೇ ಪರಿಣಾಮಕಾರಿ. ಕಲ್ಲಂಗಡಿ ತಿರುಳನ್ನು ಸ್ಮ್ಯಾಶ್‌ ಮಾಡಿಕೊಂಡು ಅದಕ್ಕೆ ಜೇನುತುಪ್ಪ ಹಾಗೂ ಮೊಸರು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಇಡಿ. ನಂತರ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ. 
icon

(5 / 5)

ಫೇಸ್ ಮಾಸ್ಕ್: ತ್ವಚೆಯ ಆರೈಕೆಗೆ ಕಲ್ಲಂಗಡಿ ಫೇಸ್ ಮಾಸ್ಕ್ ತುಂಬಾನೇ ಪರಿಣಾಮಕಾರಿ. ಕಲ್ಲಂಗಡಿ ತಿರುಳನ್ನು ಸ್ಮ್ಯಾಶ್‌ ಮಾಡಿಕೊಂಡು ಅದಕ್ಕೆ ಜೇನುತುಪ್ಪ ಹಾಗೂ ಮೊಸರು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಇಡಿ. ನಂತರ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ. (Freepik)


ಇತರ ಗ್ಯಾಲರಿಗಳು