Bedroom vastu tips: ಹೊಸದಾಗಿ ಮದುವೆಯಾದವರ ಬೆಡ್‌ರೂಂ ಹೇಗಿರಬೇಕು; ಜೀವನ ಸುಖವಾಗಿರಲು ಈ ಅಂಶಗಳು ತಿಳಿದಿರಲಿ
ಹೊಸದಾಗಿ ಮದುವೆಯಾದವರು ವಾಸ್ತು ಶಾಸ್ತ್ರದ ಪ್ರಕಾರ ಬೆಡ್‌ರೂಂ ಅನ್ನು ಇರಿಸಿದರೆ ಅವರ ಜೀವನ ಸಂತೋಷದಿಂದ ತುಂಬಿರುತ್ತದೆ. ಅದರ ವಿವರಗಳು ಇಲ್ಲಿವೆ.
(1 / 8)
ಹೊಸದಾಗಿ ಮದುವೆಯಾದ ದಂಪತಿ ಯಾವಾಗಲೂ ತಮ್ಮ ಬಂಧ ಗಟ್ಟಿಯಾಗಿರಲು ಬಯಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ತಜ್ಞರು ಹೇಳುವ ಪ್ರಕಾರ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸಿ ಬೆಡ್‌ರೂಂ ಅನ್ನು ಅಲಂಕರಿಸಿದರೆ ದಂಪತಿ ಜೀವನದಲ್ಲಿ ಸುಖ, ಸಂತೋಷದಿಂದ ಇರುತ್ತಾರೆ
(2 / 8)
ವಾಸ್ತು ಶಾಸ್ತ್ರದ ಪ್ರಕಾರ ನವ ದಂದಪತಿ ಮಲಗುವ ಕೋಣೆ ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ಹೀಗಿದ್ದಾಗ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗುತ್ತದೆ.
(3 / 8)
ಮಲಗುವ ಕೋಣೆಯಲ್ಲಿ ದೀಪ ಇದ್ದು, ಒಂದೇ ಕಿಟಕಿ ಇರಬೇಕು. ಈ ರೀತಿ ಇದ್ದರೆ ದಂಪತಿ ನಡುವಿನ ಒತ್ತಡ ಕಡಿಮೆಯಾಗುತ್ತದೆ.
(4 / 8)
ಹೊಸದಾಗಿ ಮದುವೆಯಾದವರುು ತಲೆಯಲ್ಲಿ ಯಾವ ಕಡೆಗೆ ಇಟ್ಟು ಮಲಗಿದ್ದಾರೆ ಎಂಬುದನ್ನು ಖಚಿತವಾಗಿ ತಿಳಿದುಕೊಳ್ಳಬೇಕು. ಎದ್ದಾಗ ಪೂರ್ವಾಭಿಮುಖವನ್ನು ನೋಡುವಂತೆ ಮಲಗಿರಬೇಕು. ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಇಟ್ಟು ಮಲಗಬಹುದು.
(5 / 8)
ವಾಸ್ತು ಶಾಸ್ತ್ರದ ಪ್ರಕಾರ ಬೆಡ್‌ರೂಂನಲ್ಲಿ ಒಂದು ಕನ್ನಡಿ ಇದ್ದರೆ ಒಳ್ಳೆಯದು. ದಂಪತಿ ನಡುವೆ ಜಗಳವಿಲ್ಲದೆ, ಪೀತಿಯಿಂದ ಜೀವನ ಸಾಗಿಸುತ್ತಾರೆ.
(6 / 8)
ಮಲಗುವ ಕೋಣೆಯಲ್ಲಿ ಸುಂದರವಾದ ಪಕ್ಷಿಗಳ ಫೋಟೊಗಳು ಇಡಬೇಕು. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಗೋಡೆಗಳಿಗೆ ಸಾಫ್ಟ್ ಬಣ್ಣವಿರಬೇಕು. ಆಗ ಇಬ್ಬರ ನಡುವಿನ ಆಪ್ತತೆ ಹೆಚ್ಚಾಗುತ್ತದೆ.
(7 / 8)
ಬೆಡ್‌ರೂಂನಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಇಲ್ಲದಿದ್ದರೆ ಉತ್ತಮ. ಈ ಸಾಧನಗಳಿದ್ದರೆ ದಂಪತಿ ನಡುವೆ ಧನಾತ್ಮಕ ಶಕ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಸಂಬಂಧಕ್ಕೂ ಇದು ಹಾನಿಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ
ಇತರ ಗ್ಯಾಲರಿಗಳು