ಬೋರ್‌ವೆಲ್ ನೀರು ಸೇವಿಸಿದ ಗ್ರಾಮಸ್ಥರಿಗೆ ಶುರುವಾಯ್ತು ವಾಂತಿ ಭೇದಿ; ಸವದತ್ತಿ ತಾಲೂಕಿನ 41 ಜನ ಅಸ್ವಸ್ಥ, ಒಬ್ಬ ಮಹಿಳೆ ಸ್ಥಿತಿ ಗಂಭೀರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೋರ್‌ವೆಲ್ ನೀರು ಸೇವಿಸಿದ ಗ್ರಾಮಸ್ಥರಿಗೆ ಶುರುವಾಯ್ತು ವಾಂತಿ ಭೇದಿ; ಸವದತ್ತಿ ತಾಲೂಕಿನ 41 ಜನ ಅಸ್ವಸ್ಥ, ಒಬ್ಬ ಮಹಿಳೆ ಸ್ಥಿತಿ ಗಂಭೀರ

ಬೋರ್‌ವೆಲ್ ನೀರು ಸೇವಿಸಿದ ಗ್ರಾಮಸ್ಥರಿಗೆ ಶುರುವಾಯ್ತು ವಾಂತಿ ಭೇದಿ; ಸವದತ್ತಿ ತಾಲೂಕಿನ 41 ಜನ ಅಸ್ವಸ್ಥ, ಒಬ್ಬ ಮಹಿಳೆ ಸ್ಥಿತಿ ಗಂಭೀರ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ಬೋರ್‌ವೆಲ್ ನೀರು ಸೇವಿಸಿದ 41 ಗ್ರಾಮಸ್ಥರು ವಾಂತಿ ಭೇದಿಗೆ ಒಳಗಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಕಲುಷಿತ ನೀರು ಸೇವಿಸಿದವರ ಪೈಕಿ ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯಾಡಳಿತದ ಮೂಲಗಳು ತಿಳಿಸಿವೆ. 

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ಬೋರ್‌ವೆಲ್ ನೀರು ಸೇವಿಸಿದ 41 ಜನ ಅಸ್ವಸ್ಥರಾಗಿದ್ದಾರೆ. ಈ ಪೈಕಿ ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
icon

(1 / 5)

ಈ ಪೈಕಿ ನಾಲ್ವರ ಆರೋಗ್ಯ ಗಂಭೀರವಾಗಿದ್ದು, ಒಬ್ಬ ಮಹಿಳೆಯ ಸ್ಥಿತಿ ತೀರಾ ಹದಗೆಟ್ಟಿರುವ ಕಾರಣ ಅವರನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನಡೆದಿದೆ.
icon

(2 / 5)

ಅಸ್ವಸ್ಥರಾದ ಬಹುತೇಕ ಗ್ರಾಮಸ್ಥರನ್ನು ಚಚಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಬೈಲಹೊಂಗಲ ತಾಲೂಕು ಆಸ್ಪತ್ರೆಯಲ್ಲಿ ಮೂವರನ್ನು ದಾಖಲಿಸಿದ್ದು ಅವರಿಗೆ ಅಲ್ಲಿ ಚಿಕಿತ್ಸೆ ಮುಂದುವರಿದಿದೆ. 
icon

(3 / 5)

ಅಧಿಕಾರಿಗಳು ಗ್ರಾಮದ ಬೋರ್ ವೆಲ್ ನೀರನ್ನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ ಮುಂದಿನ ಕ್ರಮ ತಗೊಳ್ಳುವುದಾಗಿ ತಿಳಿಸಿದ್ದಾರೆ.   
icon

(4 / 5)

ಆರೋಗ್ಯಾಧಿಕಾರಿಗಳು ಚಚಡಿ ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಡಿಎಚ್‌ಒ ಮಹೇಶ್ ಕೋಣಿ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಗ್ರಾಮಸ್ಥರ ಜೊತೆಗೆ ತುರ್ತು ಸಭೆ ನಡೆಸಿ ಟ್ಯಾಂಕರ್ ಮೂಲಕ ನೀರು ಸಪ್ಲೈ ಮಾಡಲು ಸೂಚನೆ ನೀಡಲಾಗಿದೆ. ಅಲ್ಲದೆ, ಸದ್ಯಕ್ಕೆ ಬೋರ್ ವೆಲ್ ನೀರು ಕುಡಿಯದಂತೆ ಗ್ರಾಮಸ್ಥರಿಗೆ ಸೂಚಿಸಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು