ಅಂದು ಬಸ್‌ಗೆ ನಮಸ್ಕರಿಸಿದ ಅಮ್ಮ, ಇಂದು ಹೋಳಿಗೆ ತಿನ್ನಿಸಿದ ಅಕ್ಕ;ಬೆಳಗಾವಿ ಅಮ್ಮಂದಿರ ಗ್ಯಾರಂಟಿ ಯೋಜನೆ ಖುಷಿಯ ಕ್ಷಣಗಳು photos-belagavi news karnataka guarantee scheme happiness woman bow bus gruhalakshmi beneficiary offered holige kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂದು ಬಸ್‌ಗೆ ನಮಸ್ಕರಿಸಿದ ಅಮ್ಮ, ಇಂದು ಹೋಳಿಗೆ ತಿನ್ನಿಸಿದ ಅಕ್ಕ;ಬೆಳಗಾವಿ ಅಮ್ಮಂದಿರ ಗ್ಯಾರಂಟಿ ಯೋಜನೆ ಖುಷಿಯ ಕ್ಷಣಗಳು Photos

ಅಂದು ಬಸ್‌ಗೆ ನಮಸ್ಕರಿಸಿದ ಅಮ್ಮ, ಇಂದು ಹೋಳಿಗೆ ತಿನ್ನಿಸಿದ ಅಕ್ಕ;ಬೆಳಗಾವಿ ಅಮ್ಮಂದಿರ ಗ್ಯಾರಂಟಿ ಯೋಜನೆ ಖುಷಿಯ ಕ್ಷಣಗಳು photos

  • Guarantee happiness ಗ್ಯಾರಂಟಿ ಯೋಜನೆಗಳ ಕುರಿತು ಪರ ವಿರೋಧದ ಮಾತುಗಳೇನೂ ಇರಬಹುದು. ಅವುಗಳ ಬಳಕೆಯಿಂದ ಖುಷಿಗೊಂಡವರ ಕಣ್ಣಲ್ಲಿ ಅರಳಿದ ಆನಂದಕ್ಕೆ ಪಾರವೇ ಇರುವುದಿಲ್ಲ. ಅಂದು ಬಸ್‌ಗೆ ಹತ್ತುವಾಗ ನಮಸ್ಕರಿಸಿದ ಮಹಿಳೆ. ಇಂದು ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಹಾಕಿಸಿದ ಹೋಳಿಗೆ ಊಟ. ಎರಡೂ ನಿಜಕ್ಕೂ ಸಂತಸದ ಕ್ಷಣಗಳೇ.

ಕರ್ನಾಟಕದಲ್ಲಿ ಕಳೆದ ವರ್ಷದ ಜೂನ್‌ನಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಕೆಲವೇ ದಿನದಲ್ಲಿ ಜಾರಿಯಾಗಿದ್ದ ಮಹಿಳೆಯರಿಗೆ ಉಚಿತವಾಗಿ ಬಸ್‌ ಪ್ರಯಾಣದ ಶಕ್ತಿ ಯೋಜನೆ. ಅದನ್ನು ಬೆಳಗಾವಿ ಜಿಲ್ಲೆ ಸಂಗೊಳ್ಳಿ ಗ್ರಾಮ ನಿಂಗವ್ವ ಸಿಂಗಾಡಿ ಸ್ವಾಗತಿಸಿದ್ದು ಹೀಗೆ.
icon

(1 / 6)

ಧಾರವಾಡಕ್ಕೆ ಬಂದ ಬೆಳಗಾವಿ ಜಿಲ್ಲೆ ಸಂಗೊಳ್ಳಿ ಗ್ರಾಮ ನಿಂಗವ್ವ ಸಿಂಗಾಡಿ ಅವರು ಬಸ್‌ ಅನ್ನು ಏರಿ ಹಂಚಿಕೊಂಡ ಖುಷಿಗೆ ಪಾರವೇ ಇರಲಿಲ್ಲ. 
icon

(2 / 6)

ಬೆಂಗಳೂರಿನಲ್ಲಿ ಶಕ್ತಿ ಯೀಜನೆಗೆ ಚಾಲನೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನಂತರ ಬಸ್‌ ಏರಿದ್ದರು.
icon

(3 / 6)

ಗೃಹಲಕ್ಷ್ಮಿ ಯೋಜನೆಯಡಿ ನೆರವು ಪಡೆಯುತ್ತಿರುವ ಬೆಳಗಾವಿ ಜಿಲ್ಲೆಯ  ರಾಯಬಾಗ್ ತಾಲ್ಲೂಕಿನ‌ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಮುಖ್ಯಮಂತ್ರಿಗಳಿಗೆ ಹೋಳಿಗೆ ತಿನ್ನಿಸಿದರು. ಭಾನುವಾರ ಊರವರಿಗೆ ಅಕ್ಕಾತಾಯಿ ಹೋಳಿಗೆ ಊಟ ಹಾಕಿಸಿದ್ದರು.ಅಕ್ಕಾತಾಯಿ ಮತ್ತು ಗ್ರಾಮದ ತಾಯಂದಿರು ಆಶೀರ್ವಾದ ಸ್ವೀಕರಿಸಿದ ಮುಖ್ಯಮಂತ್ರಿಗಳು ನಿಮ್ಮ ಆಶೀರ್ವಾದ ಹೀಗೇ ಇರಲಿ. ನಮ್ಮ ಸರ್ಕಾರ ಇರುವವರೆಗೂ ಗೃಹಲಕ್ಷ್ಮಿ ಯೋಜನೆ ನಿಲ್ಲಲ್ಲ. ಹೀಗೇ ಪ್ರತೀ ತಿಂಗಳು ನಿಮ್ಮ ಮಡಿಲು ಸೇರುತ್ತಿರುತ್ತದೆ ಎಂದರು. 
icon

(4 / 6)

ಗೃಹಲಕ್ಷ್ಮಿ ಹಣದಲ್ಲಿ ಗ್ರಾಮಕ್ಕೇ ಹೋಳಿಗೆ ಊಟ ಹಾಕಿದ ಅಕ್ಕಾತಾಯಿ ಲಂಗೂಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ವಿಮಾನ‌ನಿಲ್ದಾಣದಲ್ಲಿ‌ ಸನ್ಮಾನಿಸಿದರು.
icon

(5 / 6)

ಸನ್ಮಾನ ಸ್ವೀಕರಿಸಿದ ಬಳಿಕ‌ ಅಕ್ಕಾತಾಯಿ ಸಿಎಂಗೆ ತುಂಬು ಹೃದಯದಿಂದ ಆಶೀರ್ವದಿಸಿದರು.ನಾಡಿಗೆ ಅನ್ನ ಕೊಡೋ ದೊರೆ ನೀನು. ನಿಮ್ಮ ಕೈ ಇನ್ನೂ ಮೇಲಾಗ್ಲಿ. ನಾಡ ಆಳುವ ದೊರೆ ನೀನು ದೇಶ ಆಳ್ಬೇಕು. ಹಿಂಗಾ ಆಳ್ಕೊತಾ ಹೋಗ್ತಾ ಇರ್ಬೇಕು. ನಾಡಿಗೆ ಒಳ್ಳೇದಾಗೈತ್ರಿ ಎಂದರು.
icon

(6 / 6)

ಇತರ ಗ್ಯಾಲರಿಗಳು