Mahindra Rally: ಬೆಳಗಾವಿಗೆ ಬಂತು ಕಾರ್ಗಿಲ್ ವಿಜಯದಿವಸ್ ರಜತ ನೆನಪಿಗೆ ಮಹೀಂದ್ರ ಕಾರ್ ರ್‍ಯಾಲಿ, ಹೀಗಿತ್ತು ಅಭಿಮಾನದ ಮೆರವಣಿಗೆ photos
Kargil vijay Diwas rally ನಮ್ಮ ಯೋಧರಿಗೆ ಅಭಿಮಾನ ತೋರಲು ಹಲವು ಹಾದಿಗಳಿವೆ. ಮಹೀಂದ್ರ ಸಂಸ್ಥೆಯು ತನ್ನ ವಾಹನಗಳ ಮೂಲಕ ಕಾರು ರ್‍ಯಾಲಿ(MAHINDRA CAR RALLY) ರೂಪಿಸಿದೆ. ಕೇರಳದಿಂದ ಕಾರ್ಗಿಲ್‌ವರೆಗೂ ಇದು ತೆರಳಿದ್ದು, ಬೆಳಗಾವಿಗೆ ಆಗಮಿಸಿತ್ತು. ಹೀಗಿತ್ತು ಇಲ್ಲಿನ ಕ್ಷಣಗಳು.
(1 / 6)
ಕಾರ್ಗಿಲ್ ವಿಜಯ ದಿವಸ್‌ನ ನೆನಪಿಗಾಗಿ ಮಹೀಂದ್ರ ಹಮ್ಮಿಕೊಂಡಿರುವ ಕಾರುಗಳ ರ್‍ಯಾಲಿಗೆ ಮರಾಠಾ ಎಲ್‌ಐಆರ್‌ಸಿ ಕಮಾಂಡೆಂಟ್ ಬ್ರಿಗ್ ಜೋಯ್‌ಡಿಪ್ ಮುಖರ್ಜಿ ಬೆಳಗಾವಿಯಲ್ಲಿ ಚಾಲನೆ ನೀಡಿದರು.
(2 / 6)
ಕೇರಳದಿಂದ ಆರಂಭಿಸಿ ಕರ್ನಾಟಕದ ಬೆಳಗಾವಿಗೆ ಆಗಮಿಸಿದ ಕಾರುಗಳು ಹಾಗೂ ಇಡೀ ತಂಡವನ್ನು ಆತ್ಮೀಯವಾಗಿ ಬರ ಮಾಡಿಕೊಂಡು ಗುರುವಾರ ಬೀಳ್ಕೊಡಲಾಯಿತು.
(3 / 6)
ಕ್ಯಾಪ್ಟನ್ (ಐಎನ್) ಉತ್ಪಲ್ ದತ್ತಾ (ನಿವೃತ್ತ) ನೇತೃತ್ವದ ರ್‍ಯಾಲಿಯು ಕೊಚ್ಚಿಯಿಂದ 9 ಸದಸ್ಯರು ಮತ್ತು 7 ಸಹಾಯಕ ಸಿಬ್ಬಂದಿಯೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದು ಒಟ್ಟು 4,000 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ, ದೆಹಲಿಯ ಮೂಲಕ ಹಾದು ಅಂತಿಮ ತಾಣವಾದ ಡ್ರಾಸ್ ತಲುಪಲಿದೆ
(4 / 6)
ಕಾರ್ಗಿಲ್ ಯುದ್ಧದ ಕೆಚ್ಚೆದೆಯ ಹೃದಯಗಳಿಗೆ ಶ್ರದ್ಧಾಂಜಲಿ ಸಲ್ಲಿಸಲು ಮತ್ತು ಐತಿಹಾಸಿಕ ಘಟನೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಇದು ವಿವಿಧ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಸಂಚರಿಸಿ ದೇಶಭಕ್ತಿ ಮತ್ತು ತ್ಯಾಗದ ಸಂದೇಶವನ್ನು ಪಸರಿಸಲಿದೆ..
(5 / 6)
ಬೆಳಗಾವಿಯಲ್ಲಿರುವ ಶರ್ಕತ್ ಯುದ್ಧ ಸ್ಮಾರಕದಲ್ಲಿ ಧ್ವಜಾರೋಹಣ ನಂತರ ಸ್ಥಳೀಯರೊಂದಿಗೆ ಮಹೀಂದ್ರ ತಂಡದ ಸದಸ್ಯರು ಸಂವಾದ ನಡೆಸಿದರು.
ಇತರ ಗ್ಯಾಲರಿಗಳು