Savadatti Jatre 2025: ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಾರತ್ ಹುಣ್ಣಿಮೆ ಸಡಗರ, ಎಲ್ಲೆಲ್ಲೂ ಭಂಡಾರ, ಚಕ್ಕಡಿಗಳಲ್ಲಿ ಬಂದ ಕುಟುಂಬಗಳು
Savadatti Jatre 2025: ಸವದತ್ತಿಯಲ್ಲಿ ಹುಣ್ಣಿಮೆ ವೇಳೆ ವಿಶೇಷ ಪೂಜೆಗಳು ಇರುತ್ತವೆ. ಅದರಲ್ಲೂ ಭಾರತ್ ಹುಣ್ಣಿಮೆಗೆ ಜಾತ್ರೆಯ ಸಡಗರ. ಬರೋಬ್ಬರಿ ಹತ್ತು ಲಕ್ಷ ಭಕ್ತರು ಈ ಬಾರಿ ಭಾರತ್ ಹುಣ್ಣಿಮೆ ಜಾತ್ರೆಗೆ ಬಂದಿದ್ದರು. ಅದರ ವೈಭವದ ನೋಟ ಇಲ್ಲಿದೆ.
(1 / 8)
ಭಾರತ್ ಹುಣ್ಣಿಮೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಸವದತ್ತಿಯ ರೇಣುಕಾ ಎಲ್ಲಮ್ಮ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
(2 / 8)
ಬಂಡಿಗಳ ಜಾತ್ರೆ, ಭಂಡಾರದ ಜಾತ್ರೆ ಎಂದೇ ಪ್ರಸಿದ್ಧವಾದ ಸವದತ್ತಿ ಯಲ್ಲಮ್ಮದೇವಿ ಸನ್ನಿಧಿಯಲ್ಲಿನ ಭಾರತ ಹುಣ್ಣಿಮೆಯ ಜಾತ್ರೆ ಬಳೆಗಳ ಜಾತ್ರೆ ಎಂದೂ ಹೆಸರುವಾಸಿ.
(3 / 8)
ಭಕ್ತರು ತಮ್ಮ ಊರುಗಳಿಂದ ಸವದತ್ತಿಗೆ ಎತ್ತಿನ ಬಂಡಿಯನ್ನು ಕಟ್ಟಿಕೊಂಡು ಕುಟುಂಬದೊಂದಿಗೆ ಬಂದು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.
(4 / 8)
ಯಲ್ಲಮ್ಮನಗುಡ್ಡದಲ್ಲಿ ಬುಧವಾರ ನಡೆದ ಭಾರತ ಹುಣ್ಣಿಮೆ ಜಾತ್ರೆಗೆ ಪ್ರವಾಹೋಪಾದಿಯಲ್ಲಿ ಭಕ್ತರ ದಂಡು ಹರಿದುಬಂದು ದೇವಿಯ ದರ್ಶನ ಪಡೆದುಕೊಂಡಿದ್ದು ಕಂಡು ಬಂದಿತು.
(7 / 8)
ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನದಲ್ಲಿ ಜರುಗಿದ ಭಾರತ ಹುಣ್ಣಿಮೆ ಜಾತ್ರೆಯ ಪ್ರಯುಕ್ತವಾಗಿ ಭಂಡಾರದ ಸಡಗರವೂ ಜೋರಾಗಿತ್ತು. ಭಕ್ತರು ಪರಸ್ಪರ ಭಂಡಾರ ಎರಚಿದರು.
ಇತರ ಗ್ಯಾಲರಿಗಳು