Bellary Jail: ದರ್ಶನ್ ಸ್ಥಳಾಂತರಗೊಳ್ಳುವ ಶತಮಾನದ ಇತಿಹಾಸದ ಬಳ್ಳಾರಿ ಜೈಲು ಹೇಗಿದೆ photos
- ನಿನ್ನನ್ನು ಬಳ್ಳಾರಿಗೆ ಜೈಲಿಗೆ ಕಳುಹಿಸುತ್ತೇನೆ ಎಂದರೆ ಅದು ಎಷ್ಟು ಕಠಿಣ ಇರಬಹುದು ಎನ್ನುವ ಭಯವಿತ್ತು. ಈಗ ಆ ಜೈಲಿಗೆ ನಟ ದರ್ಶನ್ ಬರುತ್ತಿದ್ದಾರೆ. ಹೇಗಿದೆ ಬಳ್ಳಾರಿ ಜೈಲು, ಅದರ ಇತಿಹಾಸದ ನೋಟ ಇಲ್ಲಿದೆ.
- ನಿನ್ನನ್ನು ಬಳ್ಳಾರಿಗೆ ಜೈಲಿಗೆ ಕಳುಹಿಸುತ್ತೇನೆ ಎಂದರೆ ಅದು ಎಷ್ಟು ಕಠಿಣ ಇರಬಹುದು ಎನ್ನುವ ಭಯವಿತ್ತು. ಈಗ ಆ ಜೈಲಿಗೆ ನಟ ದರ್ಶನ್ ಬರುತ್ತಿದ್ದಾರೆ. ಹೇಗಿದೆ ಬಳ್ಳಾರಿ ಜೈಲು, ಅದರ ಇತಿಹಾಸದ ನೋಟ ಇಲ್ಲಿದೆ.
(1 / 6)
ಬಳ್ಳಾರಿಯಲ್ಲ ಮೂರು ಕಾರಾಗೃಹ ಕಟ್ಟಡಗಳು ಶತಮಾನದ ಹಿಂದೆಯೇ ಇದ್ದವು. ಇದರಲ್ಲಿ ವಿಶ್ವ ಯುದ್ದದ ಕೈದಿಗಳನ್ನು ಇಲ್ಲಿಗೆ ಕರೆ ತರಲಾಗುತ್ತಿತ್ತು. ಅಲ್ಲದೇ ಸ್ವಾತಂತ್ರ್ಯ ಹೋರಾಟದ ವೇಳೆ ಬಂಧಿಸಲ್ಪಟ್ಟವರು ಇಲ್ಲಿಗೆ ಬರುತಿದ್ದರು. ಈಗ ಮೂರು ಕಟ್ಟಡಗಳಲ್ಲಿ ಒಂದೇ ಕಟ್ಟಡ ಉಳಿದುಕೊಂಡಿದೆ. ಎರಡು ಆಸ್ಪತ್ರೆಗಳಾಗಿವೆ.
(2 / 6)
ಅಂಡಮಾನ್‌ನ ಜೈಲಿನಷ್ಟೇ ಕಠಿಣವಾಗಿ ಈ ಜೈಲು ಎನ್ನುತ್ತವೆ ಇತಿಹಾಸ. ಈಗಲೂ ಕೇಂದ್ರ ಕಾರಾಗೃಹ ಕಠಿಣವಾಗಿಯೇ ಇದೆ.2ನೇ ಮಹಾಯುದ್ಧಕ್ಕೂ ಮುಂಚಿತವಾಗಿ ಆರಂಭವಾದ ಬಳ್ಳಾರಿ ಜೈಲು ದೇಶದಲ್ಲಿ ಹೆಸರುವಾಸಿ.
(3 / 6)
ಪಾರಂಪರಿಕ ಹಿನ್ನೆಲೆಯ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಆರು ನೂರಕ್ಕೂ ಅಧಿಕ ಕೈದಿಗಳನ್ನು ಇರಿಸಬಹುದು. ಈಗಲೂ ಕೆಲವು ಕಟ್ಟಡಗಳು ಹಳೆಯ ಶೈಲಿಯಲ್ಲಿಯೇ ಇವೆ.
(4 / 6)
ಭದ್ರತೆ ವಿಚಾರವಾಗಿ ಇಲ್ಲಿನ ಕಾರಾಗೃಹ ಕಟ್ಟುನಿಟ್ಟು. ವಿಶಾಲವಾಗಿರುವ ಜೈಲು ಈಗಲೂ ಬಿಗಿ ಭದ್ರತೆಯಿಂದ ಗಮನ ಸೆಳೆದಿದೆ.
(5 / 6)
ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಹೊರಗಿನಿಂದ ಈಗಲೂ ಆರೋಪಿಗಳನ್ನು ಕರೆ ತರಲಾಗುತ್ತದೆ. ಗಣಿ ಪ್ರಕರಣಗಳ ಆರೋಪಿಗಳು ಇದ್ದಾರೆ. ಹೋರಾಟಗಳಲ್ಲಿ ಭಾಗಿಯಾಗುವವರನ್ನು ಇಲ್ಲಿಗೆ ಕರೆತರುವುದುಂಟು.
(6 / 6)
ವೈದ್ಯಕೀಯ ಕಾಲೇಜು ವಿಶಾಲವಾದ ಹಿಂದಿನ ಅಲ್ಲೀಪುರ ಜೈಲ್ ಕಾಂಪ್ಲೆಕ್ಸ್‌ನಲ್ಲಿದೆ, ಇದು 173 ಎಕರೆ ಪ್ರದೇಶದಲ್ಲಿ ಹರಡಿದೆ. ಬ್ರಿಟಿಷ್ ಸರ್ಕಾರವು 19 ನೇ ಶತಮಾನದಲ್ಲಿ ಅಲ್ಲೀಪುರ ಜೈಲನ್ನು ಈ ಉನ್ನತ ಭದ್ರತೆ ಮತ್ತು ಉನ್ನತ ಪ್ರೊಫೈಲ್ ಅನ್ನು ಸ್ಥಾಪಿಸಿತು. ಈ ಜೈಲಿನ ಸಂಕೀರ್ಣದಲ್ಲಿರುವ ಎಲ್ಲಾ ಬ್ಯಾರಕ್‌ಗಳನ್ನು 19 ನೇ ಶತಮಾನದ ಅಂತ್ಯದಲ್ಲಿ ನಿರ್ಮಿಸಲಾಗಿದೆ. ಬೋಯರ್ ಯುದ್ಧ ಮತ್ತು ಎರಡು ವಿಶ್ವ ಯುದ್ಧಗಳಿಂದ ಬಂದ ಕೈದಿಗಳನ್ನು ಈ ವಿಶ್ವವಿಖ್ಯಾತ ಜೈಲಿನಲ್ಲಿ ಬಂಧಿಸಲಾಯಿತು. ಆರ್ಥರ್ ವೆಲ್ಲಿಸ್ಲಿ ಟಿ ಬಿ ಸ್ಯಾನಿಟೋರಿಯಂ ಜೈಲು ಕಿವುಡು ಮತ್ತು ಮೂಗು ಮಕ್ಕಳ ಆಶ್ರಮವಾಗಿ ಮಾರ್ಪಾಟಾಗಿದೆ.
ಇತರ ಗ್ಯಾಲರಿಗಳು