ಇಪ್ಪತ್ತಾರೇ ಎಸೆತಗಳಲ್ಲಿ 50 ರನ್; ಟೆಸ್ಟ್ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿ 30 ವರ್ಷಗಳ ಹಳೆಯ ದಾಖಲೆ ಮುರಿದ ಇಂಗ್ಲೆಂಡ್
- England create world record: ಇಂಗ್ಲೆಂಡ್ ಕೇವಲ 4.2 ಓವರ್ಗಳಲ್ಲಿ ಅತಿ ವೇಗದ ಅರ್ಧಶತಕವನ್ನು ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.
- England create world record: ಇಂಗ್ಲೆಂಡ್ ಕೇವಲ 4.2 ಓವರ್ಗಳಲ್ಲಿ ಅತಿ ವೇಗದ ಅರ್ಧಶತಕವನ್ನು ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.
(1 / 5)
ನಾಟಿಂಗ್ಹ್ಯಾಮ್ನ ಟ್ರೆಂಟ್ಬ್ರಿಡ್ಜ್ನಲ್ಲಿ ಜುಲೈ 18ರ ಗುರುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕೇವಲ 4.2 ಓವರ್ಗಳಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಗಳಿಸಿತು. ಮೊದಲ ದಿನದಂದು ಇಂಗ್ಲೆಂಡ್ ಈ ಮೈಲಿಗಲ್ಲನ್ನು ತಲುಪಿದೆ.
(2 / 5)
ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಬೆನ್ ಡಕೆಟ್ ಮತ್ತು ಒಲ್ಲಿ ಪೋಪ್ ಜೋಡಿ ಕೇವಲ 26 ಎಸೆತಗಳಲ್ಲಿ 50 ರನ್ ಗಳಿಸಿತು. ಬೆನ್ ಡಕೆಟ್ 14 ಎಸೆತಗಳಲ್ಲಿ 33 ರನ್ ಗಳಿಸಿದರೆ, ಒಲ್ಲಿ ಪೋಪ್ 9 ಎಸೆತಗಳಲ್ಲಿ 16 ರನ್ ಗಳಿಸಿದರು. ಈ ಹಿಂದೆ ಟೆಸ್ಟ್ ಕ್ರಿಕೆಟ್ನಲ್ಲಿ ಯಾವುದೇ ತಂಡ ಇಷ್ಟು ವೇಗವಾಗಿ 50 ರನ್ ಗಳಿಸಿಲ್ಲ.
(3 / 5)
30 ವರ್ಷಗಳ ಹಿಂದೆಯೂ ಇಂಗ್ಲೆಂಡ್ ತಂಡವೇ ದಾಖಲೆ ನಿರ್ಮಿಸಿತ್ತು. ಇದೀಗ ತನ್ನ ದಾಖಲೆಯನ್ನು ಮುರಿದಿದೆ. 1994ರಲ್ಲಿ ಓವಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ 4.3 ಓವರ್ಗಳಲ್ಲಿ 50 ರನ್ ಗಳಿಸಿತ್ತು. 2002ರಲ್ಲಿ ಮ್ಯಾಂಚೆಸ್ಟರ್ನಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಮತ್ತೆ4.6 ಓವರ್ಗಳಲ್ಲಿ 50 ರನ್ ಗಳಿಸಿತು. 2004ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 5.2 ಓವರ್ ಗಳಲ್ಲಿ 50 ರನ್ ಗಳಿಸಿತ್ತು. 2008ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 5.3 ಓವರ್ ಗಳಲ್ಲಿ 50 ರನ್ ಗಳಿಸಿತ್ತು. ಪೋರ್ಟ್ ಆಫ್ ಸ್ಪೇನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 5.3 ಓವರ್ಗಳಲ್ಲಿ 50 ರನ್ ಗಳಿಸಿತ್ತು.
(4 / 5)
2004ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 5.2 ಓವರ್ ಗಳಲ್ಲಿ 50 ರನ್ ಗಳಿಸಿತ್ತು. 2008ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 5.3 ಓವರ್ ಗಳಲ್ಲಿ 50 ರನ್ ಗಳಿಸಿತ್ತು. ಪೋರ್ಟ್ ಆಫ್ ಸ್ಪೇನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 5.3 ಓವರ್ಗಳಲ್ಲಿ 50 ರನ್ ಗಳಿಸಿತ್ತು. ಆದರೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ತಂಡದ ಪಟ್ಟಿಯಲ್ಲಿ ಇಂಗ್ಲೆಂಡ್ ಅಗ್ರ 3 ಸ್ಥಾನಗಳಲ್ಲಿ ಉಳಿದಿದೆ.
ಇತರ ಗ್ಯಾಲರಿಗಳು