ವಿಷ್ಣುಸಹಸ್ರನಾಮ ಪಠಣೆಯಿಂದ ದೊರೆಯುವ ಫಲಗಳು: ಸಿಂಹದಿಂದ ವೃಶ್ಚಿಕ ರಾಶಿಯವರೆಗಿನವರಿಗೆ ಸಿಗುವ ಪ್ರಯೋಜನಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಷ್ಣುಸಹಸ್ರನಾಮ ಪಠಣೆಯಿಂದ ದೊರೆಯುವ ಫಲಗಳು: ಸಿಂಹದಿಂದ ವೃಶ್ಚಿಕ ರಾಶಿಯವರೆಗಿನವರಿಗೆ ಸಿಗುವ ಪ್ರಯೋಜನಗಳು

ವಿಷ್ಣುಸಹಸ್ರನಾಮ ಪಠಣೆಯಿಂದ ದೊರೆಯುವ ಫಲಗಳು: ಸಿಂಹದಿಂದ ವೃಶ್ಚಿಕ ರಾಶಿಯವರೆಗಿನವರಿಗೆ ಸಿಗುವ ಪ್ರಯೋಜನಗಳು

ಪ್ರತಿದಿನವೂ ವಿಷ್ಣು ಸಹಸ್ರನಾಮವನ್ನು ಪಠಿಸಿದಲ್ಲಿ ಘೋರ ತಪಸ್ಸಿನಿಂದ ದೊರೆವ ಫಲಕ್ಕೆ ಸರಿಸಮಾನವಾದ ಶುಭಫಲಗಳು ದೊರೆಯುತ್ತವೆ. ಹೆಸರೆ ಸೂಚಿಸುವಂತೆ ಇದರಲ್ಲಿ ಭಗವಾನ್ ವಿಷ್ಣುವಿನ ಒಂದು ಸಾವಿರ ನಾಮಗಳು ಅಡಗಿವೆ. ಸಕಲ ರೋಗಗಳು ನಿವಾರಣೆ ಆಗುತ್ತವೆ. ಚರಕಸೃತಿಯಲ್ಲಿ ಇದರ ಬಗ್ಗೆ ವರ್ಣನೆ ಇದೆ. ಪತಿಯೊಂದು ಗ್ರಹಗಳಿಗೂ ಪ್ರತ್ಯೇಕವಾದ ದೇವತೆಗಳಿದ್ದಾರೆ.

ಯಾವುದೇ ದೇವರಿಗೆ ಸಂಬಂಧಿಸಿದ ಶ್ಲೋಕಗಳು ಅಥವ ಮಂತ್ರಗಳನ್ನು ಪಠಿಸುವುದರಿಂದ ಧನಾತ್ಮಕ ಫಲಗಳು ದೊರೆಯುತ್ತವೆ. ವಿಷ್ಣುಸಹಸ್ರನಾಮದಿಂದಲೂ ಅನೇಕ ಪ್ರಯೋಜನಗಳು ದೊರೆಯುತ್ತವೆ. ಯಾವುದೇ ಮಂತ್ರವನ್ನು ಪಠಿಸುವಾಗ ಅವಶ್ಯಕವಾಗಿ ಅದರಲ್ಲಿರುವ ಭೀಜಾಕ್ಷರಗಳನ್ನು ಉಚ್ಚರಿಸಬೇಕು. ಆರಂಭದಲ್ಲಿಯೇ ಸಂಕಲ್ಪವನ್ನು ಮಾಡಬೇಕು. ಇದರ ಫಲಗಳು ದೊರೆಯಬೇಕೆಂದಲ್ಲಿ ಫಲಶೃತಿಯ ಭಾಗವನ್ನು ಪಠಿಸಲೇಬೇಕಾಗುತ್ತದೆ. ಪಠಿಸಲು ಸಾಧ್ಯವಾಗದ ವೇಳೆ ಯಾವುದೇ ಮಾಧ್ಯಮದ ಮೂಲಕ ಕೇಳುವುದು ಸಹ ಫಲದಾಯಕವಾಗಿದೆ. ಪ್ರತಿದಿನವೂ ವಿಷ್ಣು ಸಹಸ್ರನಾಮವನ್ನು ಪಠಿಸಿದಲ್ಲಿ ಘೋರ ತಪಸ್ಸಿನಿಂದ ದೊರೆವ ಫಲಕ್ಕೆ ಸರಿಸಮಾನವಾದ ಶುಭಫಲಗಳು ದೊರೆಯುತ್ತವೆ. ಹೆಸರೆ ಸೂಚಿಸುವಂತೆ ಇದರಲ್ಲಿ ಭಗವಾನ್ ವಿಷ್ಣುವಿನ ಒಂದು ಸಾವಿರ ನಾಮಗಳು ಅಡಗಿವೆ. ಸಕಲ ರೋಗಗಳು ನಿವಾರಣೆ ಆಗುತ್ತವೆ. ಚರಕಸೃತಿಯಲ್ಲಿ ಇದರ ಬಗ್ಗೆ ವರ್ಣನೆ ಇದೆ. ಪತಿಯೊಂದು ಗ್ರಹಗಳಿಗೂ ಪ್ರತ್ಯೇಕವಾದ ದೇವತೆಗಳಿದ್ದಾರೆ. ಈ ಕಾರಣದಿಂದಾಗಿ ಪ್ರತಿಯೊಂದು ಗ್ರಹಗಳು ತನ್ನದೇ ಆದ ಫಲಗಳನ್ನು ನೀಡುತ್ತವೆ. ಇದೇ ರೀತಿ ಪ್ರತಿಯೊಂದು ದೇವತೆಗಳೂ ತನ್ನನ್ನು ಪೂಜಿಸಿದವರಿಗೆ ವಿಭಿನ್ನರೀತಿಯ ಫಲಗಳನ್ನು ನೀಡುತ್ತಾರೆ. ಇದಕ್ಕೆ ಕಾರಣ ಜನ್ಮಕುಂಡಲಿಯೂ ಕಾರಣವಾಗುತ್ತದೆ. ಆದರೆ ಯಾವುದೇ ಮಂತ್ರದ ಪಠಣೆಯ ನಂತರ ಸಂಬಂಧಿತ ದೇವತೆಗಳ ಪೂಜೆಯನ್ನು ಮಾಡಬೇಕಾಗುತ್ತದೆ.
icon

(1 / 7)

ಶ್ರೀ ವಿಷ್ಣುಸಹಸ್ರನಾಮ ಪಠಣೆಯಿಂದ ಜನ್ಮ ಲಗ್ನ ಅಥವ ಜನ್ಮ ರಾಶಿಗಳಿಗ ಪ್ರತ್ಯೇಕವಾದ ಫಲಿತಾಂಶಗಳು ದೊರೆಯುತ್ತವೆ. ಅದರ ಸಂಕ್ಷಿಪ್ತ ವಿವರವನ್ನು ಇಲ್ಲಿ ನೀಡಲು ಪ್ರಯತ್ನಿಸಿದ್ದೇನೆ. ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ಸಂಪತ್ತಾರೆ, ಕ್ಷೇಮತಾರೆ, ಮಿತ್ರತಾರೆ ಅಥವ ಪರಮಮಿತ್ರತಾರೆಗಳಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಠಣೆಯನ್ನು ಆರಂಭಿಸುವುದು ಒಳ್ಳೆಯದು. ಇದರಿಂದ ಶೀ ವಿಷ್ಣುವಿನ ಜೊತೆಯಲ್ಲಿ ಶ್ರೀಮಹಾಲಕ್ಷ್ಮಿಯ ಕೃಪೆಯೂ ದೊರೆತು ಹಣಕಾಸಿನ ಸ್ಥಿತಿಯಲ್ಲಿ ಪಗತಿ ಕಂಡುಬರುತ್ತದೆ.
icon

(2 / 7)

ಸಿಂಹ: ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ವಿಶ್ವಾಸವು ಮೂಡುತ್ತದೆ. ಎಲ್ಲರನ್ನೂ ಟೀಕಿಸುವುದರ ಬದಲು ಪ್ರೀತಿ ವಿಶ್ವಾಸದಿಂದ ಕಾಣಲು ಸಾಧ್ಯವಾಗುತ್ತದೆ. ಕಷ್ಟ ನಷ್ಟಕ್ಕೆ ಬೆದರದೆ ಕೆಲಸ ನಿರ್ವಹಿಸುವ ಮನಸ್ಸು ಮೂಡುತ್ತದೆ. ಉತ್ತಮ ಮಾತಿನಿಂದ ಎಲ್ಲರನ್ನು ಮೋಡಿ ಮಾಡುವ ಚತುರತೆ ಲಭಿಸುತ್ತದೆ. ಮಾಡಿದ ಸಾಲವನ್ನು ತ್ವರಿತ ಗತಿಯಲ್ಲಿ ಮರಳಿ ನೀಡಲು ಸಾಧ್ಯವಾಗುತ್ತದೆ. ಯುವಕ ಯುವತಿಯರ ಮನಸ್ಸಿನಲ್ಲಿ ಆಸ್ತಿ ಅಂತಸ್ತು ಗಳಿಸುವ ನಿರ್ಧಾರ ಉಂಟಾಗುತ್ತದೆ. ಉನ್ನತ ವಿದ್ಯಾಭ್ಯಾಸದ  ಅವಕಾಶ ದೊರೆಯುತ್ತದೆ. ವದಂತಿಯನ್ನು ನಂಬುವುದಿಲ್ಲ. ದಂಪತಿಗಳ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಶಾಂತಿ ನೆಮ್ಮದಿಯಿಂದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಮಾತಿನ ಮೇಲೆ ಹತೋಟಿ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಲಾಭವಿರುತ್ತದೆ. ಮಾತಿನ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುತ್ತದೆ.
icon

(3 / 7)

ಕನ್ಯಾ: ಎಲ್ಲರೂ ಮೆಚ್ಚುವಂತಹ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಧೈರ್ಯ ಸಾಹಸದ ಗುಣ ಇರುತ್ತದೆ. ಕೇವಲ ಕುಟುಂಬವಲ್ಲದೆ ಸಮಾಜದಲ್ಲಿಯೂ ಕೀರ್ತಿ ಪ್ರತಿಷ್ಠೆ ಹೆಚ್ಚುತ್ತದೆ. ಆತ್ಮ ವಿಶ್ವಾಸವು ಹೆಚ್ಚುತ್ತದೆ. ಕಣ್ಣಿನ ದೋಷವಿದ್ದರೆ ಗುಣ ಹೊಂದುತ್ತದೆ. ಶಾಸ್ತ್ರ ಸಂಪ್ರದಾಯದ ಬಗ್ಗೆ ಆಸಕ್ತಿ ಮತ್ತು ನಂಬಿಕೆ ಮೂಡುತ್ತದೆ. ಕೆಲಸ ಕಾರ್ಯಗಳಿಗೆ ಆತಂಕಗಳು ದೂರವಾಗುತ್ತದೆ. ಸ್ವತಂತ್ರವಾಗಿ ಕೆಲಸ ನಿರ್ವಹಿಸುವ ಅವಕಾಶ ದೊರೆಯುತ್ತದೆ. ಉನ್ನತ ವಿದ್ಯಾಭ್ಯಾಸದಲ್ಲಿನ ತೊಂದರೆಯೂ ದೂರವಾಗುತ್ತದೆ. ಕುಟುಂಬದಲ್ಲಿ ಎದುರಾಗುವ ಇಕ್ಕಟ್ಟಿನ ಸನ್ನಿವೇಶದಿಂದ ಪಾರಾಗಬಹುದು. ಯಂತ್ರ ಅಥವಾ ವಾಹನದಿಂದ ಉಂಟಾಗುವ ತೊಂದರೆಯಿಂದ ಪಾರಾಗಲು ಸಾಧ್ಯವಾಗುತ್ತದೆ. ಮಾತಿನಿಂದಲೇ ಸಮಸ್ಯೆಗಳನ್ನು ಪರಿಹರಿಸುವ ಬುದ್ಧಿ ಚಾತುರ್ಯ ಲಭಿಸುತ್ತದೆ. ಚಂಚಲದ ಸ್ವಭಾವವು ದೂರವಾಗಿ ಆತ್ಮವಿಶ್ವಾಸವು ಹೆಚ್ಚುತ್ತದೆ.
icon

(4 / 7)

ತುಲಾ: ಸಾರ್ವಜನಿಕ ಜೀವನದಲ್ಲಿ ಇದ್ದ ಸಮಸ್ಯೆಗಳು ದೂರವಾಗುತ್ತವೆ. ಮನೆತನದ ವಿಚಾರದಲ್ಲಿ ಏಕಸ್ವಾಮ್ಯತೆ ದೊರೆಯುತ್ತದೆ. ಸಂಗೀತ ನಾಟ್ಯದಂತದ ಸಾಂಪ್ರದಾಯಿಕ ಕಲೆಗಳಲ್ಲಿ ಆಸಕ್ತಿ ಮೂಡುತ್ತದೆ. ಮಾತಿನ ಮೋಡಿಗೆ ಒಳಗಾಗದೆ ಬುದ್ಧಿವಂತಿಕೆಯಿಂದ ವರ್ತಿಸಲು ಸಾಧ್ಯವಾಗುತ್ತದೆ.  ಧಾರ್ಮಿಕ ಕೆಲಸ ಕಾರ್ಯಗಳಲ್ಲಿ  ಆಸಕ್ತಿ ಮೂಡುತ್ತದೆ. ಧೈರ್ಯ ಸಾಹಸದ ಗುಣವು ಆಪತ್ತಿನ ಸನ್ನಿವೇಶದಿಂದ ಪಾರು ಮಾಡುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಇರುವುದಿಲ್ಲ. ಮನೆತನದ ಹಿರಿಯವರ ಜೊತೆ ಅನ್ಯೋನ್ಯತೆ ಮೂಡುತ್ತದೆ. ಯೋಗ ಧ್ಯಾನದಲ್ಲಿ ಆಸಕ್ತಿ ಮೂಡುತ್ತದೆ. ಒತ್ತಡದ ಸನ್ನಿವೇಶದಲ್ಲಿಯೂ ಬುದ್ಧಿವಂತಿಕೆಯ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಏಕಾಂಗಿಯಾಗಿ ಕೆಲಸ ಕಾರ್ಯದಲ್ಲಿ ಹೋರಾಟದ ಭಾವನೆ ಉಂಟಾಗುತ್ತದೆ. ಕುಟುಂಬದಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
icon

(5 / 7)

ವೃಶ್ಚಿಕ: ಬಹುದಿನದಿಂದ ಕಾಡುತ್ತಿರುವ ಆರೋಗ್ಯದ ಸಮಸ್ಯೆ ಇದ್ದರೆ ಪರಿಹಾರಗಳು ದೊರೆಯುತ್ತವೆ. ಅನೇಕ ರೀತಿಯ ಕೆಲಸ ಕಾರ್ಯಗಳನ್ನು ಒಮ್ಮೆಲೇ ಮಾಡಬಲ್ಲ ಸಾಮರ್ಥ್ಯ ಉಂಟಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಆತ್ಮೀಯರಿಗೆ ನಿಮ್ಮ ಬಗ್ಗೆ ಇದ್ಧ ತಪ್ಪು ಅಭಿಪ್ರಾಯವು ದೂರವಾಗುತ್ತದೆ. ವರಮಾನದಲ್ಲಿ ಕ್ರಮೇಣ ಚೇತರಿಕೆ ಕಂಡು ಬರುತ್ತದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಹಠದ ಸ್ವಭಾವವು ದೂರವಾಗಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಲು ಸಾಧ್ಯವಾಗುತ್ತದೆ. ಅನಿರೀಕ್ಷಿತವಾದ ಹಣಕಾಸಿನ ಕಷ್ಟನಷ್ಟಗಳು ದೂರವಾಗುತ್ತವೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಎದುರಾಗುವ ಅಡ್ಡಿ ಆತಂಕಗಳು ದೂರವಾಗುತ್ತವೆ. ಅನಾವಶ್ಯಕ ಖರ್ಚು ವೆಚ್ಚಗಳು ಕಡಿತಗೊಳ್ಳುತ್ತವೆ. ದುಡುಕುತನದ ಮಾತು ಕತೆ ಕಡಿಮೆಯಾಗುತ್ತದೆ. ಕುಟುಂಬದ ಹಿರಿಯರ ಸಲಹೆ ಸೂಚನೆಯನ್ನು ಒಪ್ಪುವ ಗುಣ ಬೆಳೆಯುತ್ತದೆ.
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in

ಇತರ ಗ್ಯಾಲರಿಗಳು