'ಸೇರಿನಲ್ಲಿ ಅಳೆದು ನೋಡಿ'; ಸಚಿವ ರಾಮಲಿಂಗಾ ರೆಡ್ಡಿಯವರಿಂದ ಕಡಲೆಕಾಯಿ ಪರಿಷೆ ಸಿದ್ಧತೆ ಕುರಿತು ಪರಿಶೀಲನೆ; ಫೋಟೊಸ್
ಇಂದಿನಿಂದ ಬೆಂಗಳೂರಿನ ಬಸವನಗುಡಿಯಲ್ಲಿ ಅದ್ಧೂರಿಯಾಗಿ ಕಡ್ಲೆಕಾಯಿ ಪರಿಷೆ ಆರಂಭವಾಗ್ತಿದೆ. ಸಚಿವ ರಾಲಿಂಗಾ ರೆಡ್ಡಿಯವರು ಭಾನುವಾರ ಪರಿಷೆಯ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
(1 / 5)
ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಲಿಂಗಾ ರೆಡ್ಡಿ ಅವರು ನಿನ್ನೆ (ಭಾನವಾರ, ಡಿಸೆಂಬರ್ 10) ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
(2 / 5)
ಸಚಿವ ರಾಮಲಿಂಗಾ ರೆಡ್ಡಿ ಅವರು ಪರಿಶೀನಲೆ ವೇಳೆ ಸೇರಿನಲ್ಲಿ ಕಡಲೆಕಾಯಿಯನ್ನು ಅಳತೆ ಮಾಡಿ ನೋಡಿದರು. ಕಾಂಗ್ರೆಸ್ ಪಕ್ಷದ ಮುಖಂಡರು ಸಚಿವರಿಗೆ ಸಾಥ್ ನೀಡಿದರು. ಇಂದಿನಿಂದ (ಡಿಸೆಂಬರ್ 11, ಸೋಮವಾರ) ನಾಲ್ಕು ದಿನಗಳ ವರೆಗೆ ಬೆಂಗಳೂರಿನ ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದೆ.
(3 / 5)
ಕಡಲೆಕಾಯಿ ಪರಿಷೆಗೆ ಈಗಾಗಲೇ ಹತ್ತಾರು ಕಡಲೆಕಾಯಿ ವ್ಯಾಪಾರಿಗಳು ಜಯಾಯಿಸಿದ್ದಾರೆ. ಕಡಲೆಯಾಯಿ ಜೊತೆಗೆ ಇಲ್ಲಿ ವಿವಿಧ ರೀತಿಯ ತಿಂಡಿ ತನಿಸುಗಳು, ಪಾನೀಯಗಳು ಲಭ್ಯ ಇವೆ. ಪರಿಷೆಗೆ ಬನ್ನಿ ಕೈ ಚೀಲ ತನ್ನಿ ಎಂಬ ಅಭಿಯಾನದೊಂದಿಗೆ ಪ್ಲಾಸ್ಟಿಕ್ ಮುಕ್ತ ಜಾತ್ರೆಯನ್ನು ಆಯೋಜಿಸಲಾಗಿದೆ.
(4 / 5)
ನಿನ್ನೆ ಭಾನುವಾರ (ಡಿಸೆಂಬರ್ 10) ಆಗಿದ್ದ ಕಾರಣ ನೂರಾರು ಮಂದಿ ನಿನ್ನೆಯೇ ಕಡಲೆಕಾಯಿ ಪರಿಷೆಗೆ ಆಗಮಿಸಿದ್ದರು. ತಮಗೆ ಇಷ್ಟವಾದ ತಾಜಾ ತಾಜಾ ಕಡಲೆಕಾಯಿ ಖರೀದಿಸಿ ಸಂತಸ ಪಟ್ಟಿದ್ದಾರೆ.
ಇತರ ಗ್ಯಾಲರಿಗಳು