Bengaluru Karaga 2025: ಶ್ರದ್ಧಾ ಭಕ್ತಿಯೊಂದಿಗೆ ಸಾಗಿದ ವಿಶ್ವವಿಖ್ಯಾತ ಬೆಂಗಳೂರು ಹಸಿ ಕರಗ ಮೆರವಣಿಗೆ- ಚಿತ್ರನೋಟ
Hasi Karaga Photos: ವಿಶ್ವವಿಖ್ಯಾತ ಬೆಂಗಳೂರು ಕರಗದ ಹಸಿ ಕರಗ ಮೆರವಣಿಗೆ ಶುಕ್ರವಾರ ನೆರವೇರಿತು. ಸಂಪಂಗಿಕೆರೆ ಅಂಗಳದ ಶಕ್ತಿಪೀಠದಲ್ಲಿ ಹಸಿ ಕರಗ ಪೂಜೆ, ಆರತಿ, ಮೆರವಣಿಗೆ ವಿಜೃಂಭಣೆಯಿಂದ ನಡೆದವು. ಈ ಶ್ರದ್ಧಾಭಕ್ತಿ ಆಚರಣೆಯ ಆಕರ್ಷಕ ಚಿತ್ರನೋಟ ಇಲ್ಲಿದೆ.
(1 / 10)
ಐತಿಹಾಸಿಕ ‘ಬೆಂಗಳೂರು ಕರಗ’ ಚೈತ್ರ ಪೂರ್ಣಿಮೆಯ ದಿನವಾದ ಇಂದು ನಡೆಯಲಿದೆ. ಇದಕ್ಕೆ ಮುನ್ನಾ ದಿನ ಶುಕ್ರವಾರ ಸಂಪಂಗಿ ಕೆರೆ ಶಕ್ತಿ ಪೀಠದಲ್ಲಿ ಹಸಿ ಕರಗ ಪೂಜೆ, ಆರತಿ, ಮೆರವಣಿಗೆ ವಿಜೃಂಭಣೆಯಿಂದ ನಡೆದವು. ಅದರ ಆಕರ್ಷಕ ಚಿತ್ರನೋಟ ಇಲ್ಲಿದೆ.
(SM)(2 / 10)
ಸಂಪಂಗಿ ಕೆರೆಯ ಕರಗದ ಕುಂಟೆಯಲ್ಲಿರುವ ಶಕ್ತಿ ಪೀಠದಲ್ಲಿ ಗುರುವಾರ ರಾತ್ರಿಯಿಂದ ಹಸಿ ಕರಗದ ಪೂಜಾ ವಿಧಿಗಳು, ಧಾರ್ಮಿಕ ಆಚರಣೆಗಳು ನಡೆದವು. ಶುಕ್ರವಾರ ನಸುಕಿನಲ್ಲಿ ಹಸಿ ಕರಗ ಸಿದ್ಧವಾಯಿತು.
(SMSP)(3 / 10)
ಸಂಪಂಗಿ ಕೆರೆ ಶಕ್ತಿಪೀಠದಲ್ಲಿ ವಿಶೇಷ ಪೂಜೆಯ ನಂತರ, ಹೂವಿನ ವೇಷಭೂಷಣದೊಂದಿಗೆ ಸಿದ್ಧರಾದ ಅರ್ಚಕ ಎ. ಜ್ಞಾನೇಶ್ ಒಂದು ಕೈಯಲ್ಲಿ ಕತ್ತಿ ಹಿಡಿದು, ಸೊಂಟದಲ್ಲಿ ಹಸಿ ಕರಗವನ್ನು ಹೊತ್ತು ಸಾಗಿದರು.
(4 / 10)
ಸಂಪಂಗಿ ಕೆರೆ ಶಕ್ತಿಪೀಠದಿಂದ ಹಡ್ಸನ್ ವೃತ್ತದತ್ತ ಸಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ಹಸಿ ಕರಗದ ಪೂಜೆ ನಡೆಯಿತು.
(5 / 10)
ಮೆರವಣಿಗೆಯುದ್ಧಕ್ಕೂ ನೂರಾರು ವೀರಕುಮಾರರು ಸಾಗಿದರು. ಧರ್ಮರಾಯಸ್ವಾಮಿ ದೇವಸ್ಥಾನದ ಅಂಗಳದಲ್ಲಿ ವೀರಕುಮಾರರು ಧಾರ್ಮಿಕ ಸಂಪ್ರದಾಯಗಳನ್ನು ನೆರವೇರಿಸಿದರು.
(7 / 10)
ಪ್ರಸಿದ್ಧ ದ್ರೌಪದಿದೇವಿ ಕರಗ ಶಕ್ತೋತ್ಸವ (ಬೆಂಗಳೂರು ಕರಗ) ಚೈತ್ರ ಪೌರ್ಣಿಮೆಯಾದ ಏಪ್ರಿಲ್ 12ರ ಶನಿವಾರ ನಡೆಯಲಿದೆ. ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಜೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
(8 / 10)
ಪ್ರಸಿದ್ಧ ದ್ರೌಪದಿದೇವಿ ಕರಗ ಶಕ್ತೋತ್ಸವ ಪೂಜಾ ವಿಧಿಗಳನ್ನು ಪೂರೈಸಿದ ನಂತರ ಜ್ಞಾನೇಂದ್ರ ಅವರು ಶನಿವಾರ ತಡರಾತ್ರಿ ಕರಗ ಹೊತ್ತು ಸಾಗಲಿದ್ದಾರೆ. ಜ್ಞಾನೇಂದ್ರ ಅವರು 15ನೇ ಬಾರಿ ಕರಗವನ್ನು ಹೊರಲಿದ್ದಾರೆ.
(9 / 10)
ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಬರುವ ಕರಗ, ಗಣಪತಿ ಮತ್ತು ಮುತ್ಯಾಲಮ್ಮ ದೇವಾಲಯ, ಹಲಸೂರು ಪೇಟೆಯ ಆಂಜನೇಯ ಸ್ವಾಮಿ, ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡ ಪೇಟೆಯಿಂದ ಕೆ.ಆರ್. ಮಾರುಕಟ್ಟೆ ತಲುಪಲಿದೆ.
ಇತರ ಗ್ಯಾಲರಿಗಳು