ಬೆಂಗಳೂರು ಮೆಟ್ರೋ: 12 ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಟಾಯ್ಲೆಟ್ ಬಳಸಬೇಕಾದರೆ ಶುಲ್ಕ ಪಾವತಿಸಿ, ಜನಸಾಮಾನ್ಯರ ಬವಣೆ ಕೇಳೋರಿಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರು ಮೆಟ್ರೋ: 12 ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಟಾಯ್ಲೆಟ್ ಬಳಸಬೇಕಾದರೆ ಶುಲ್ಕ ಪಾವತಿಸಿ, ಜನಸಾಮಾನ್ಯರ ಬವಣೆ ಕೇಳೋರಿಲ್ಲ

ಬೆಂಗಳೂರು ಮೆಟ್ರೋ: 12 ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಟಾಯ್ಲೆಟ್ ಬಳಸಬೇಕಾದರೆ ಶುಲ್ಕ ಪಾವತಿಸಿ, ಜನಸಾಮಾನ್ಯರ ಬವಣೆ ಕೇಳೋರಿಲ್ಲ

ಬೆಂಗಳೂರು ಮೆಟ್ರೋ ಟಿಕೆಟ್‌ ದರ ಏಕಾಕಿಯಾಗಿ ಶೇಕಡ 71ರಷ್ಟು ಏರಿಕೆ ಮಾಡಿದ್ದ ಬಿಎಂಆರ್‌ಸಿಎಲ್‌, ಇದೀಗ 12 ನಮ್ಮ ಮೆಟ್ರೋ ನಿಲ್ದಾಣಗಳ ಶೌಚಾಲಯ ಬಳಕೆಗೂ ಶುಲ್ಕ ವಿಧಿಸಿದ್ದು, ಪ್ರಯಾಣಿಕರಿಗೆ, ಜನಸಾಮಾನ್ಯರಿಗೆ ಮತ್ತೊಂದು ಆಘಾತ ನೀಡಿದೆ.

ಬೆಂಗಳೂರು ಮೆಟ್ರೊ ಪ್ರಯಾಣ ದರವನ್ನು ವಿಪರೀತ ಏರಿಕೆ ಮಾಡಿ ಪ್ರಯಾಣಿಕರಿಗೆ ಹೊರೆ ಹೊರಿಸಿದ್ದ ಬಿಎಂಆರ್‌ಸಿಎಲ್‌ ಈಗ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಇರುವ ಶೌಚಾಲಯಕ್ಕೆ ಬಳಕೆದಾರರ ಶುಲ್ಕ ವಿಧಿಸಲು ತೀರ್ಮಾನಿಸಿದ್ದು, ಆಯ್ದ 12 ನಿಲ್ದಾಣಗಳಲ್ಲಿ ಶುಲ್ಕ ಸಂಗ್ರಹ ಶುರುಮಾಡಿದೆ.
icon

(1 / 9)

ಇತ್ತೀಚೆಗಷ್ಟೇ ನಮ್ಮ ಮೆಟ್ರೋ ಟಿಕೆಟ್ ದರವನ್ನು ಶೇಕಡ 100 ಏರಿಕೆ ಮಾಡಿ, ಪ್ರತಿರೋಧ ವ್ಯಕ್ತವಾದ ಬಳಿಕ ಅದನ್ನು ಶೇಕಡ 71ಕ್ಕೆ ಇಳಿಸಿದ್ದರು. ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯವನ್ನು ಇದುವರೆಗೂ ಉಚಿತ ಬಳಕೆಗೆ ನೀಡಿದ್ದರು. ಈಗ ಏಕಾಕಿಯಾಗಿ ಅದಕ್ಕೂ ದರ ವಿಧಿಸಿದ್ದಾರೆ ಎಂದು ನಮ್ಮ ಮೆಟ್ರೋದ ನಿತ್ಯ ಪ್ರಯಾಣಿಕ ಬಸವರಾಜು ಅಸಮಾಧಾನ ತೋಡಿಕೊಂಡಿದ್ದಾರೆ.
icon

(2 / 9)

ಖಾಸಗಿ ವಲಯದ ಉದ್ಯೋಗಿಗಳಿಗೆ ಈಗಿನ ಹಣದುಬ್ಬರಕ್ಕೆ ತಕ್ಕಂತೆ ವೇತನ ಹೆಚ್ಚಳವಾಗಲ್ಲ. ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗುತ್ತದೆ, ಪ್ರಯಾಣದರ, ಪೆಟ್ರೋಲ್‌, ಡೀಸೆಲ್ ದರ, ಶಾಲಾ ಶುಲ್ಕ, ಎಲ್ಲವೂ ಹೆಚ್ಚಳವಾಗುತ್ತದೆ. ಅದರ ಜತೆಗೆ ಈಗ ಮೆಟ್ರೋ ನಿಲ್ದಾಣಗಳ ಶೌಚಾಲಯ ಬಳಕೆಗೂ ಶುಲ್ಕ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
icon

(3 / 9)

ಮೊದಲ ಹಂತದಲ್ಲಿ ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯ ಪ್ರಕಾಶ್ ನಗರ, ಯಲಚೇನಹಳ್ಳಿ, ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ - ಸೆಂಟ್ರಲ್ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ನಿಲ್ದಾಣ - ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೊ ನಿಲ್ದಾಣ ಸೇರಿ ಒಟ್ಟು 12 ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಶುಲ್ಕ ಸಂಗ್ರಹ ಶುರುಮಾಡಿದೆ.
icon

(4 / 9)

ಸುಲಭ್‌ ಶೌಚಾಲಯ ಇಂಟರ್‌ ನ್ಯಾಷನಲ್‌ ಸಂಸ್ಥೆಗೆ ಶೌಚಾಲಯ ನಿರ್ವಹಣೆಯನ್ನು ವಹಿಸಲಾಗಿದೆ. ಅವರು ನಿರ್ವಹಣಾ ವೆಚ್ಚವನ್ನಷ್ಟೇ ಸಂಗ್ರಹಿಸು ತ್ತಿದ್ದಾರೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
icon

(5 / 9)

ಮೂತ್ರ ವಿಸರ್ಜನೆಗೆ 2 ರೂಪಾಯಿ, ಶೌಚಾಲಯ ಬಳಕೆಗೆ 5 ರೂಪಾಯಿ ನಿಗದಿ ಪಡಿಸಿದ್ದು, ಇದು ಎಲ್ಲ ಕಡೆ ಇರುವ ದರವೇ ಆಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
icon

(6 / 9)

 ಎಲ್ಲ ನಮ್ಮ ಮೆಟ್ರೋ ನಿಲ್ದಾಣಗಳ ಶೌಚಾಲಯಗಳಿಗೆ ಬಳಕೆದಾರರ ಶುಲ್ಕ ವಿಧಿಸಿಲ್ಲ. ಮೆಟ್ರೊ ಸ್ವೈಪ್‌ ಗೇಟ್‌ ಒಳಗೆ ಇರುವ ಶೌಚಾಲಯಗಳ ಬಳಕೆ ಯಾವತ್ತೂ ಉಚಿತವೇ ಆಗಿರುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.
icon

(7 / 9)

ಮೆಟ್ರೊ ಸ್ವೈಪ್‌ ಗೇಟ್‌ಗಿಂತ ಹೊರಗೆ ಇರುವ ಶೌಚಾಲಯಗಳನ್ನು ಸಾರ್ವಜನಿಕರೂ ಬಳಸುತ್ತಾರೆ. ಅದಕ್ಕಾಗಿ ಅವುಗಳಿಗಷ್ಟೇ ಶುಲ್ಕ ನಿಗದಿ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದರು.
icon

(8 / 9)

ಈ ನಡುವೆ, ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಹೈದರಾಬಾದ್ ಮೆಟ್ರೋ ರೈಲು ನಿಲ್ಧಾಣದ ಟಾಯ್ಲೆಟ್ ಶುಲ್ಕದ ಚಿತ್ರಗಳೂ ಗಮನಸೆಳೆದಿವೆ. ಅಲ್ಲೂ ಇದೇ ಶುಲ್ಕ ವಿಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
icon

(9 / 9)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು