ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲು ಸಂಚಾರ ಶುರು, ವೇಳಾಪಟ್ಟಿ ವಿವರ ಇಲ್ಲಿದೆ
ನೈಋತ್ಯ ರೈಲ್ವೆಯು ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲು ಸಂಚಾರ ಶುರು ಮಾಡಿದೆ. ವಿಶೇಷವಾಗಿ ಎಸ್‌ಎಂವಿಟಿ ಬೆಂಗಳೂರು ಖರಗಪುರ, ಹುಬ್ಬಳ್ಳಿ ಗೋಮತಿ ನಗರ, ಮೈಸೂರು ಅಜ್ಮೇರ್, ಭುವನೇಶ್ವರ ಯಶವಂತಪುರ, ಭಗತ್ ಕೀ ಕೋಠಿ ಬೆಂಗಳೂರು, ಬೆಂಗಳೂರು ಭಗತ್ ಕೀ ಕೋಠಿ ನಡುವೆ ಈ ರೈಲು ಸಂಚಾರ ಇರಲಿದೆ. ವೇಳಾಪಟ್ಟಿ ಹೀಗಿದೆ.
(1 / 8)
ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲುಗಳ ಸಂಚಾರ ಶುರುವಾಗಿದೆ. ನೈಋತ್ಯ ರೈಲ್ವೆ ಇದರ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದು, ಅದರ ವಿವರ ಹೀಗಿದೆ.
(2 / 8)
ರೈಲು ಸಂಖ್ಯೆ 04809/10 ಭಗತ್ ಕಿ ಕೋಠಿ - ಎಸ್ಎಂವಿಟಿ ಬೆಂಗಳೂರು- ಭಗತ್ ಕಿ ಕೋಠಿ ಎಕ್ಸ್‌ಪ್ರೆಸ್ ವಿಶೇಷ ರೈಲು (ಎರಡು ಟ್ರಿಪ್)ರೈಲು ಸಂಖ್ಯೆ 04809: ಭಗತ್ ಕಿ ಕೋಠಿ - ಎಸ್ಎಂವಿಟಿ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ಏಪ್ರಿಲ್ 21 ರಂದು ಮತ್ತು 27 ರಂದು ಮುಂಜಾನೆ 05: 15ಕ್ಕೆ ಭಗತ್ ಕೀ ಕೋಠಿಯಿಂದ ಹೊರಡಲಿದೆ. ಮಾರನೇ ದಿನ ತಡ ರಾತ್ರಿ 11: 30 ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ. ರೈಲು ಸಂಖ್ಯೆ 04810: ಎಸ್‌ಎಂವಿಟಿ ಬೆಂಗಳೂರು - ಭಗತ್ ಕಿ ಕೋಠಿ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಏಪ್ರಿಲ್ 23 ರಂದು ಮತ್ತು ಏಪ್ರಿಲ್ 29ರಂದು ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಟು ಮೂರನೇ ದಿನ 12.40ಕ್ಕೆ ಭಗತ್ ಕಿ ಕೋಠಿಗೆ ತಲುಪಲಿದೆ.
(3 / 8)
ರೈಲು ಸಂಖ್ಯೆ 06281/82 - ಮೈಸೂರು ಅಜ್ಮೇರ್ ಮೈಸೂರು ಎಕ್ಸ್‌ಪ್ರೆಸ್ ಸ್ಪೆಷಲ್ ( 6 ಟ್ರಿಪ್) ರೈಲು ಸಂಖ್ಯೆ 06281 - ಮೈಸೂರು ಅಜ್ಮೇರ್ ವೀಕ್ಲೀ ಎಕ್ಸ್‌ಪ್ರೆಸ್ ಮೈಸೂರಿನಿಂದ ಏಪ್ರಿಲ್ 13, 20, 27, ಮೇ 4, 11 ಮತ್ತು 18 ರಂದು ಬೆಳಗ್ಗೆ 10 ಗಂಟೆಗೆ ಹೊರಡಲಿದ್ದು, ಮೂರನೆ ದಿನ ಮುಂಜಾನೆ 4 ಗಂಟೆಗೆ ಅಜ್ಮೇರ್ ತಲುಪಲಿದೆ. ರೈಲು ಸಂಖ್ಯೆ 06282 - ಅಜ್ಮೇರ್ - ಮೈಸೂರು ವೀಕ್ಲಿ ಎಕ್ಸ್‌ಪ್ರೆಸ್ ರೈಲು ಅಜ್ಮೇರ್‌ನಿಂದ ಏಪ್ರಿಲ್ 16, 23, 30 ಮತ್ತು ಮೇ 7, 14 ಮತ್ತು 21ರಂದು ರಾತ್ರಿ 8.10ಕ್ಕೆ ಹೊರಟು ಮೂರನೆ ದಿನ ಸಂಜೆ 4.40ಕ್ಕೆ ಮೈಸೂರು ತಲುಪಲಿದೆ.
(4 / 8)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)
(5 / 8)
ರೈಲು ಸಂಖ್ಯೆ 02811/12 - ಭುವನೇಶ್ವರ ಯಶವಂತಪುರ ಭುವನೇಶ್ವರ ಎಕ್ಸ್‌ಪ್ರೆಸ್ ವಿಶೇಷ ರೈಲು (7 ಟ್ರಿಪ್‌ಗಳು) ರೈಲು ಸಂಖ್ಯೆ 02811 ಭುವನೇಶ್ವರ - ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಭುವನೇಶ್ವರದಿಂದ ಏಪ್ರಿಲ್ 13, 20, 27, ಮೇ 4, 11, 18 ಮತ್ತು 25ರಂದು ರಾತ್ರಿ 7.15ಕ್ಕೆ ಹೊರಡಲಿದೆ. ಮಾರನೇ ದಿನ ತಡರಾತ್ರಿ 11.55ಕ್ಕೆ ಯಶವಂತಪುರ ತಲುಪಲಿದೆ. ರೈಲು ಸಂಖ್ಯೆ 02812 ಯಶವಂತಪುರ - ಭುವನೇಶ್ವರ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಯಶವಂತಪುರದಿಂದ ಏಪ್ರಿಲ್ 15, 22, 29, ಮೇ 6, 13, 20, 27 ರಂದು ಮುಂಜಾನೆ 5 ಗಂಟೆಗೆ ಹೊರಟು ಮಾರನೇ ದಿನ ಮಧ್ಯಾಹ್ನ 12.15ಕ್ಕೆ ಭುವನೇಶ್ವರ ತಲುಪಲಿದೆ.
(6 / 8)
ರೈಲು ಸಂಖ್ಯೆ 06507/08 ಎಸ್‌ಎಂವಿಟಿ ಬೆಂಗಳೂರು ಖರಗಪುರ ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್ ( 6 ಟ್ರಿಪ್‌ಗಳು) ರೈಲು ಸಂಖ್ಯೆ 06507 - ಎಸ್‌ಎಂವಿಟಿ ಬೆಂಘಳೂರು - ಖರಗಪುರ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಬೆಂಗಳೂರಿನಿಂದ ಏಪ್ರಿಲ್ 12, 19,26, ಮೇ 3, 10 ಮತ್ತು 17 ರಂದು ಮಧ್ಯಾಹ್ನ ನಂತರ 3.10ಕ್ಕೆ ಹೊರಟು ಮೂರನೇ ದಿನ ನಸುಕಿನ 2.45ಕ್ಕೆ ಖರಗಪುರ ತಲುಪಲಿದೆ.ರೈಲು ಸಂಖ್ಯೆ 06508 ಖರಗಪುರ - ಎಸ್ಎಂವಿಟಿ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಖರಗಪುರದಿಂದ ಏಪ್ರಿಲ್ 15, 22, 29, ಮೇ 6,. 13 ಮತ್ತು 20 ರಂದು ಮಧ್ಯಾಹ್ನ ನಂತರ 2 ಗಂಟೆಗೆ ಹೊರಟು ಮಾರನೆ ದಿನ ರಾತ್ರಿ 7.50ಕ್ಕೆ ಬೆಂಗಳೂರು ತಲುಪಲಿದೆ.
(7 / 8)
ರೈಲು ಸಂಖ್ಯೆ 06219/20 ಎಸ್‌ಎಂವಿಟಿ - ಭಗತ್ ಕಿ ಕೋಠಿ - ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ( 1 ಟ್ರಿಪ್) ರೈಲು ಸಂಖ್ಯೆ 06219 - ಎಸ್‌ಎಂವಿಟಿ ಬೆಂಗಳೂರು - ಭಗತ್ ಕಿ ಕೋಠಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಬೆಂಗಳೂರಿನಿಂದ ಏಪ್ರಿಲ್ 22ರಂದು ಸಂಜೆ 4.30ಕ್ಕೆ ಹೊರಟು, ಮೂರನೆ ದಿನ ಬೆಳಗ್ಗೆ 11.50ಕ್ಕೆ ಭಗತ್ ಕಿ ಕೋಠಿ ತಲುಪಲಿದೆ.ರೈಲು ಸಂಖ್ಯೆ 06220 ಭಗತ್ ಕಿ ಕೋಠಿ - ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಭಗತ್ ಕಿ ಕೋಠಿಯಿಂದ ಏಪ್ರಿಲ್ 27 ರಂದು ರಾತ್ರಿ 11 ಗಂಟೆಗೆ ಹೊರಟು ಮೂರನೆ ದಿನ ಮಧ್ಯಾಹ್ನ ನಂತರ 2.45 ಕ್ಕೆ ಎಸ್‌ಎಂವಿಟಿ ಬೆಂಗಳೂರಿಗೆ ತಲುಪಲಿದೆ.
(8 / 8)
ರೈಲು ಸಂಖ್ಯೆ 07305/06 ಎಸ್‌ಎಸ್‌ಎಸ್ ಹುಬ್ಬಳ್ಳಿ ಗೋಮತಿ ನಗರ ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ಸ್ಪೆಷಲ್ (6 ಟ್ರಿಪ್‌ಗಳು) ರೈಲು ಸಂಖ್ಯೆ 07305 - ಎಸ್‌ಎಸ್‌ಎಸ್ ಹುಬ್ಬಳ್ಳಿ- ಗೋಮತಿ ನಗರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಹುಬ್ಬಳ್ಳಿಯಿಂದ ಏಪ್ರಿಲ್ 13, 20, 27, ಮೇ 4, 11 ಮತ್ತು 18 ರಂದು ಬೆಳಗ್ಗೆ 8.30ಕ್ಕೆ ಹೊರಡಲಿದೆ. ಮೂರನೆ ದಿನ ಬೆಳಗ್ಗೆ 10.30ಕ್ಕೆ ಗೋಮತಿ ನಗರ ತಲುಪಲಿದೆ. ರೈಲು ಸಂಖ್ಯೆ 07306 ಗೋಮತಿ ನಗರ - ಎಸ್‌ಎಸ್‌ಎಸ್ ಹುಬ್ಬಳ್ಳಿ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಗೋಮತಿ ನಗರದಂದ ಏಪ್ರಿಲ್ 16, 23, 30, ಮೇ 7, 14 ಮತ್ತು 21 ರಂದು ಬೆಳಗ್ಗೆ 10.45ಕ್ಕೆ ಹೊರಟು, ಮೂರನೆ ದಿನ ಮಧ್ಯಾಹ್ನ 12.50ಕ್ಕೆ ಹುಬ್ಬಳ್ಳಿ ತಲುಪಲಿದೆ.
ಇತರ ಗ್ಯಾಲರಿಗಳು