Janata Darshan: ಮುಖ್ಯಮಂತ್ರಿಯವರ ಜನತಾ ದರ್ಶನಕ್ಕೆ ಭರ್ಜರಿ ಸ್ಪಂದನೆ, 3812 ಅರ್ಜಿ ಸ್ವೀಕಾರ, ಸ್ಥಳದಲ್ಲೇ ಹಲವು ವಿಲೇವಾರಿ, ಫೋಟೋಸ್ ನೋಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತತ 7 ಗಂಟೆ ಕಾಲ ನಡೆಸಿದ ಜನಸ್ಪಂದನ/ ಜನತಾ ದರ್ಶನ ಕಾರ್ಯಕ್ರಮಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ. 3812 ಅರ್ಜಿಗಳ ಸ್ವೀಕರಿಸಿದ್ದು, ಹಲವನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ ಎಂದು ಸಿಎಂ ಕಚೇರಿ ತಿಳಿಸಿದೆ.
(1 / 7)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ನ.27) ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ 3812 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 2862 ಅರ್ಜಿಗಳನ್ನು ಈಗಾಗಲೇ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದ್ದು, 950 ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗಿದೆ. ಇವುಗಳನ್ನೂ ಸಹ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನೋಂದಾಯಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
(2 / 7)
ಕ್ಯಾನ್ಸರ್, ಕಿಡ್ನಿ, ಹೃದಯ ಸೇರಿದಂತೆ ಆರೋಗ್ಯ ಸಮಸ್ಯೆಯಿಂದ ವೈದ್ಯಕೀಯ ವೆಚ್ಚ ಭರಿಸುವ ಮನವಿಗಳು ಹೆಚ್ಚು ಸ್ವೀಕೃತವಾಗಿವೆ. ನಾನು ಮುಖ್ಯಮಂತ್ರಿಯಾದ ನಂತರ ಜನರ ಆರೋಗ್ಯಸಮಸ್ಯೆಗಳ ಪರಿಹಾರಕ್ಕಾಗಿ ಸುಮಾರು 25 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
(3 / 7)
ಶಿಕ್ಷಕರ ನೇಮಕಾತಿಯಲ್ಲಿ ಆಗಿರುವ ತೊಡಕು ನಿವಾರಣೆಗೆ ಸರ್ಕಾರ ಕ್ರಮತೆಗೆದುಕೊಂಡಿದೆ. ಅದೇ ರೀತಿ, ಅಕ್ರಮವಾಗಿ ಸೈಟ್ ಒತ್ತುವರಿ ಮಾಡಿದ್ದರ ವಿರುದ್ಧ ಕ್ರಮ ತೆಗೆದುಕೊಂಡು ಸಂತ್ರಸ್ತರಿಗೆ ನೆರವು ನೀಡಲು ಸಿಎಂ ಸೂಚನೆ ನೀಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದನ ಚಿಕಿತ್ಸೆಗೆ ನೆರವು ನೀಡಲು ಸಿಎಂ ಸೂಚಿಸಿದರು ಎಂದು ಸಿಎಂಒ ಟ್ವೀಟ್ ಮಾಡಿದೆ.
(4 / 7)
ನಿರೀಕ್ಷೆಗೂ ಮೀರಿ ಜನರು ಜನತಾದರ್ಶನಕ್ಕೆ ಸ್ಪಂದಿಸಿದ ಕಾರಣ, ಊಟಕ್ಕೆಂದು ತೆರಳದೇ ಜನತಾದರ್ಶನದ ಸ್ಥಳದಲ್ಲೇ ಊಟ ಮಾಡಿದ ಸಿಎಂ ಸಿದ್ದರಾಮಯ್ಯ.
(5 / 7)
ಅನ್ಯಾಯಕ್ಕೆ ಒಳಗಾದ ಮೈಸೂರು ರಸ್ತೆಯ ಕುಟುಂಬಕ್ಕೆ, ಅನುಕಂಪದ ಹುದ್ದೆ, ಸರ್ಕಾರಿ ಉದ್ಯೋಗ ಕೋರಿದವರಿಗೆ ಸ್ಥಳದಲ್ಲೇ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ.
(6 / 7)
ಆನೇಕಲ್‌ನಲ್ಲಿ ವಿಶೇಷ ಚೇತನರ ಬಡವಾಣಗೆ ಮೂಲಸೌಕರ್ಯ ಒದಗಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಅದೇ ರೀತಿ, ಬಡರೈತನಿಗೆ ಜಮೀನಿನ ಒಡೆತನ, ಕಾಯಂ ಉದ್ಯೋಗದ ಮನವಿಗೂ ಸಿಎಂ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.
ಇತರ ಗ್ಯಾಲರಿಗಳು